About Us

ಎಲ್ಲರಿಗೂ ನಮಸ್ತೇ, ಆತ್ಮೀಯ ಸ್ವಾಗತ.

ಯಕ್ಷಗಾನ ಪ್ರೇಮಿಗಳು, ಯಕ್ಷಗಾನವನ್ನು ಉಸಿರಾಗಿಸಿಕೊಂಡವರು, ಯಕ್ಷಗಾನದ ಏಳಿಗೆಗೆ ಶ್ರಮಿಸುವವರು, ಯಕ್ಷಗಾನವನ್ನೇ ಆರಾಧಿಸುವವರು ರೂಪಿಸಿದ ತಾಣವಿದು. ಇಲ್ಲಿ ಯಕ್ಷಗಾನ, ಪುರಾಣ ಮತ್ತಿತರ ಯಕ್ಷಗಾನೀಯ ವಿಚಾರಗಳ ಕುರಿತು ಕಲಾವಿದರು, ತಜ್ಞರು ಬರೆದ ಲೇಖನಗಳಿರುತ್ತವೆ.

ಪ್ರತಿಯೊಬ್ಬರಲ್ಲಿಯೂ ಪೌರಾಣಿಕ ಪ್ರಜ್ಞೆ, ಭಾಷಾ ಪ್ರೌಢಿಮೆ, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ, ನಯ-ವಿನಯದ ಜೊತೆಗೆ ದೈಹಿಕ-ಮಾನಸಿಕ ಸ್ವಾಸ್ಥ್ಯಕ್ಕೂ ಕಾರಣವಾಗಬಲ್ಲ ಯಕ್ಷಗಾನವೆಂಬ ಕಮನೀಯ ಕಲೆಯ ರಕ್ಷಾಛತ್ರದಡಿ ಬೆಳೆದವರು ನಾವು. ಇಂದು ನಿಮ್ಮಂಥಾ ಯಕ್ಷಗಾನವನ್ನೇ ಉಸಿರಾಗಿಸಿಕೊಂಡಿರುವವರೆಲ್ಲರೂ ಈಗ ಯಕ್ಷಗಾನ.ಇನ್ ಎಂಬ ಈ ಪುಟ್ಟ ತಾಣದ ಜೊತೆಯಾಗಿದ್ದೀರಿ. ನಿಮಗೆಲ್ಲರಿಗೂ ನಮ್ಮ ಸಂಪಾದಕೀಯ ಬಳಗದಿಂದ ತುಂಬು ಹೃದಯದ ಸ್ವಾಗತ.

ಕರಾವಳಿ-ಮಲೆನಾಡಿನ ಮಣ್ಣಿನಿಂದ ಉದ್ಯೋಗ ನಿಮಿತ್ತ ದೂರವಾದವರ ರಕ್ತದಲ್ಲೇ ಯಕ್ಷಗಾನವಿದೆ. ಅದು ಮುಂದಿನ ಪೀಳಿಗೆಗೂ ಉಳಿಯಬೇಕು, ಬೆಳೆಯಬೇಕು. ಈ ಕಾಲಘಟ್ಟದಲ್ಲಿ ಪುರಾಣ ಜ್ಞಾನ, ಯಕ್ಷಗಾನದ ಚಟುವಟಿಕೆಗಳ ಕುರಿತ ಮಾಹಿತಿ, ಕಲಾವಿದರ ಕುರಿತಾದ ವಿವರ, ಯಕ್ಷಗಾನವನ್ನು ಈಗಿನ ಶ್ರೀಮಂತ ಸ್ಥಿತಿಗೆ ತರುವಲ್ಲಿ ಬೆವರು ಹರಿಸಿದ್ದ ಮರೆಯಲಾಗದ ಮಹಾನುಭಾವರ ಪರಿಚಯ - ಇತ್ಯಾದಿ ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರಗಳಿರುವ ಈ ತಾಣವನ್ನು ಮತ್ತಷ್ಟು ವೈವಿಧ್ಯಮಯವಾಗಿಸಲು ನಿಮ್ಮ ಬೆಂಬಲವೇ ಕಾರಣ.

ಯಕ್ಷಗಾನ ಡಾಟ್ ಇನ್ (Yakshagana.in) ಜಾಲತಾಣದಲ್ಲಿ ಬರುವ ಲೇಖನಗಳ ಅಪ್ಡೇಟ್ಸ್ ದೊರೆಯುವಂತಾಗಲು ನಮ್ಮ ವಾಟ್ಸ್ಆ್ಯಪ್ ಹಾಗೂ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಬಹುದು. ಜೊತೆಗೆ ಫೇಸ್ಬುಕ್ಟ್ವಿಟರ್ ತಾಣಗಳಲ್ಲಿಯೂ ಸೇರಿಕೊಂಡರೆ ಇವುಗಳ ಅಪ್ಡೇಟ್ ಪಡೆಯಬಹುದು.  ವಾಟ್ಸ್ಆ್ಯಪ್-ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಅನ್ಯ ಫಾರ್ವರ್ಡ್‌ಗಳಿರುವುದಿಲ್ಲ ಮತ್ತು ಕಿರಿಕಿರಿ ಆಗದಂತೆ, ದಿನಕ್ಕೆ ಕೆಲವೇ ಕೆಲವು ಲಿಂಕ್‌ಗಳನ್ನಷ್ಟೇ ಶೇರ್ ಮಾಡುತ್ತೇವೆ. ಈ ಜಾಲತಾಣವು ಡಿಜಿ ಯಕ್ಷ ಫೌಂಡೇಶನ್ (DiGi Yaksha Foundation) ಹೆಸರಿನಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯದಲ್ಲಿ ನೋಂದಾವಣೆಗೊಂಡಿರುವ ಯಕ್ಷಗಾನಕ್ಕಾಗಿ ಇರುವ ಪ್ರತಿಷ್ಠಾನದ ಕೊಡುಗೆ. ನಮ್ಮ ಯೂಟ್ಯೂಬ್ ತಾಣ ಮತ್ತು ಇನ್-ಸ್ಟಾ ಗ್ರಾಂ ಖಾತೆಗಳು ಕೂಡ ಇವೆ.

Yakshagana-ಜಾಲತಾಣದ ಬೆಳವಣಿಗೆಗೆ ಯಕ್ಷಗಾನೀಯ ಮನಸ್ಸುಗಳು ಮಂಗಳೂರು, ಮೈಸೂರು, ಬೆಂಗಳೂರು, ಶಿರಸಿ, ಮೈಸೂರು, ಮುಂಬಯಿ, ದುಬೈ, ಅಮೆರಿಕ, ಇಂಗ್ಲೆಂಡ್ ಮುಂತಾದೆಡೆಗಳಿಂದ ಕೈಜೋಡಿಸಿವೆ. ನಿಮಗಿಷ್ಟವಾದ ಯಾವುದೇ ಲೇಖನಗಳನ್ನು ಬೇರೆ ಗ್ರೂಪ್‌ಗಳಿಗೂ ಫಾರ್ವರ್ಡ್ ಮಾಡಬಹುದು. ಕಾಪಿ-ಪೇಸ್ಟ್ ಮಾಡುವುದಕ್ಕಿಂತಲೂ ಲಿಂಕನ್ನೇ ರವಾನಿಸುವುದು ಸೂಕ್ತ. ಸಾಧ್ಯವೇ ಇಲ್ಲ, ಕಾಪಿ-ಪೇಸ್ಟ್ ಮಾಡುತ್ತೇವೆ ಎಂದಾದರೆ "ಕೃಪೆ: Yakshagana.in" ಎಂಬ ಅಕ್ಷರಗಳನ್ನು ಸೇರಿಸಲು ವಿನಂತಿ.

ಯಕ್ಷಗಾನದ ಕುಟುಂಬದ ಆತ್ಮೀಯ ಸದಸ್ಯರಾಗಿ ನಮ್ಮೊಂದಿಗೆ ಕೈಜೋಡಿಸುತ್ತಿರುವ ನಿಮಗೆಲ್ಲರಿಗೂ ಆತ್ಮೀಯ ವಂದನೆಗಳು.

ಯಕ್ಷಗಾನಕ್ಕೆ ಸಂಬಂಧಿಸಿದ ಯಾವುದೇ ಘಟನೆಗಳನ್ನು, ಹಳೆಯ ನೆನಪುಗಳನ್ನು, ಕಲಾವಿದರ ಮಾಹಿತಿಯನ್ನು, ಯಕ್ಷಗಾನಕ್ಕೆ ಪೂರಕವಾದ ಉತ್ತಮ ಪುಸ್ತಕಗಳ ಕುರಿತಾಗಿ ಜಗದಗಲ ಯಕ್ಷಗಾನ ಅಭಿಮಾನಿಗಳಲ್ಲಿ ಹಂಚಿಕೊಳ್ಳಲು ಇಷ್ಟಪಡುವ ಸ್ನೇಹಿತರು, ತಜ್ಞರು, ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಅಥವಾ ಲೇಖನಗಳನ್ನು ಈ ಮೇಲ್ ಮೂಲಕ ಕಳುಹಿಸಬಹುದು.

ಮಂಗಳೂರು, ಬೆಂಗಳೂರು, ಮೈಸೂರುಗಳಲ್ಲಿರುವ ಸ್ನೇಹಿತರು ತಮ್ಮ ಬಿಡುವಿನ ಸಮಯದಲ್ಲಿ ಈ ತಾಣಕ್ಕಾಗಿ ಕೆಲಸ ಮಾಡುತ್ತಾ, ಜಾಲತಾಣವನ್ನು ರೂಪಿಸುವಲ್ಲಿ ನೆರವಾಗುತ್ತಿದ್ದಾರೆ.

ಯಕ್ಷಗಾನಂ ಗೆಲ್ಗೆ - ಯಕ್ಷಗಾನಂ ಬಾಳ್ಗೆ!

ಸಂಪರ್ಕ: Yakshagana.in at Gmail dot com