ಜನ್ಮದಿನ ವಿಶೇಷ: ಲೀಲಾ ಬೈಪಾಡಿತ್ತಾಯರ ಹಿಟ್ ಹಾಡುಗಳು


ಕ್ಷಗಾನದ ಗಾನ ಕೋಗಿಲೆ ಎಂದೇ 80-90ರ ದಶಕದಲ್ಲಿ ಜನಮನ್ನಣೆ ಪಡೆದಿದ್ದ ಲೀಲಾ ಬೈಪಾಡಿತ್ತಾಯರ ಜನ್ಮದಿನ ಮೇ 23. 1947ರಲ್ಲಿ ಜನಿಸಿದ ಅವರೀಗ 75ಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮನೆಯಲ್ಲೇ ದಾಖಲಿಸಿದ ಕೆಲವೊಂದು ವಿಡಿಯೊ ತುಣುಕುಗಳು ಇಲ್ಲಿವೆ:

ರಾಘವ ನರಪತೇ, ಶೃಣು ಮಮ ವಚನಂ: ಪಂಚವಟಿ ಪ್ರಸಂಗದ ಸುಂದರ ಹಾಡು

ಬಂದೆಯಾ ಇನವಂಶ ವಾರಿಧಿ: ಪಾದುಕಾ ಪ್ರದಾನ ಪ್ರಸಂಗದ ಮನೋಹರ ಹಾಡು

ಬನ್ನಿರೈ ಸಂಸಾರ ಶರಧಿಯನು: ಅತಿಕಾಯ ಕಾಳಗ ಪ್ರಸಂಗದ ವಿಶಿಷ್ಟ ಶೈಲಿಯ (ಕಡತೋಕ) ನಿಧಾನ ಲಯದ ತ್ವರಿತ ಝಂಪೆಯ ಹಾಡು.

ಮನಸಿಜ ಪಿತ ನೀನು: ಕರ್ಣಾವಸಾನ ಪ್ರಸಂಗದ ಇಂಪಾದ ಪದ

ಚಿಕ್ಕ ಪ್ರಾಯದ ಬಾಲೆ ಚದುರೆ: ಲೀಲಾ ಬೈಪಾಡಿತ್ತಾಯರ ಸಿಗ್ನೇಚರ್ ಟೋನ್ ಆಗಿ ಹಿಟ್ ಆದ ಪೂರ್ವರಂಗದ ಪದ (ಮುಖ್ಯ ಸ್ತ್ರೀ ವೇಷ ಕುಣಿಸುವ ಪದ)

ಕರುಣಾಸಾಗರೆ ನೀನು ಕೊಲ್ಲೂರ ವಾಸೆ: ಲೀಲಾ ಬೈಪಾಡಿತ್ತಾಯರ ಸಿಗ್ನೇಚರ್ ಟೋನ್ ಆಗಿ ಹಿಟ್ ಆದ ಪೂರ್ವರಂಗದ ಪದ (ಮುಖ್ಯ ಸ್ತ್ರೀ ವೇಷ ಕುಣಿಸುವ ಪದ).

ಸುರಮುನಿಗಳು ತಮ್ಮ ಹೃದಯ ಗಂಹ್ವರದಲ್ಲಿ (ಪೋಗದಿರೆಲೋ ರಂಗ): ಲೀಲಾ ಬೈಪಾಡಿತ್ತಾಯರ ಸಿಗ್ನೇಚರ್ ಟೋನ್ ಆಗಿ ಹಿಟ್ ಆದ ಪೂರ್ವರಂಗದ ಪದ (ಮುಖ್ಯ ಸ್ತ್ರೀ ವೇಷ ಕುಣಿಸುವ ಪದ)

Subscribe to www.YouTube.com/DiGiYakshaFoundation YouTube Channel for more.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು