ಎಡನೀರು ಸಪ್ತಾಹ: ಯಕ್ಷಗಾನ ಗಾನವೈಭವ, ಸೀತಾ ಪರಿತ್ಯಾಗ ತಾಳಮದ್ದಳೆ ವಿಡಿಯೊ

ಬ್ರಹ್ಮೈಕ್ಯ ಶ್ರೀಶ್ರೀ ಕೇಶವಾನಂದ ಭಾರತಿ ಶ್ರೀಗಳ ಪ್ರಥಮ ಆರಾಧನ ಸ್ಮೃತಿ ಪ್ರಯುಕ್ತ ಎಡನೀರು ಮಠದಲ್ಲಿ ಜು.26ರಿಂದ ಆ.1, 2021ರವರೆಗೆ ಯಕ್ಷಗಾನ ಸಪ್ತಾಹ ನಡೆಯುತ್ತಿದೆ. ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ನೇತೃತ್ವದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮವು ಪ್ರಸಿದ್ಧರ ಕೂಡುವಿಕೆಯಲ್ಲಿ ಕೂಟವನ್ನು ಏರ್ಪಡಿಸಲಾಗಿದೆ.

2ನೇ ದಿನವಾದ 27 ಜುಲೈ ಮಂಗಳವಾರ 2021 ಬೆಳಿಗ್ಗೆ 10.30ರಿಂದ 12.30ರವರೆಗೆ ಯಕ್ಷಾನಾರ್ಚನೆ - ಗಾನವೈಭವ ನಡೆಯಿತು.

ಕಲಾವಿದರು: ಹೊಸಮೂಲೆ ಗಣೇಶ್ ಭಟ್, ತಲ್ಪಣಾಜೆ ವೆಂಕಟ್ರಮಣ ಭಟ್, ರವಿಚಂದ್ರ ಕನ್ನಡಿಕಟ್ಟೆ, ಪದ್ಯಾಣ ಶಂಕರನಾರಾಯಣ ಭಟ್, ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು.


ಬಳಿಕ ಸಂಜೆ "ಸೀತಾ ಪರಿತ್ಯಾಗ" ತಾಳಮದ್ದಳೆ ನಡೆಯಿತು. ಹಿಮ್ಮೇಳ: ಎಂ.ದಿನೇಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ; ಮುಮ್ಮೇಳ: ಸುಣ್ಣಂಬಳ ವಿಶ್ವೇಶ್ವರ ಭಟ್, ಕುಂಬ್ಳೆ ಶ್ರೀಧರ ರಾವ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ರಾಜೇಂದ್ರ ಕಲ್ಲೂರಾಯ, ಶ್ರೀಪತಿ ಕಲ್ಲೂರಾಯ.

ತಾಳಮದ್ದಳೆ ಸೀತಾ ಪರಿತ್ಯಾಗ ವಿಡಿಯೊ ಇಲ್ಲಿದೆ: ಕಹಳೆ ನ್ಯೂಸ್ ಕೃಪೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು