ಯಕ್ಷಗಾನ ಒಡ್ಡೋಲಗದಲ್ಲಿ ಪಾಂಡವರು
ಮಹಾಭಾರತದಲ್ಲಿ ಬರುವ ಪಾಂಡವರಲ್ಲೊಬ್ಬನಾದ ಸಹದೇವನು ವಿಶೇಷ ಶಕ್ತಿ-ಸಾಮರ್ಥ್ಯಗಳನ್ನು ಹೊಂದಿದವನು. ಈ ಬಗ್ಗೆ ಮಾಹಿತಿ ನೀಡಿದ್ದಾರೆ ದಾಮೋದರ ಶೆಟ್ಟಿ ಇರುವೈಲು.
ಸಹದೇವ ಮಹಾಭಾರತದಲ್ಲಿ ಪಾಂಡವರಲ್ಲಿ ಕೊನೆಯವ. ಮಾದ್ರಿ ದೇವಿಗೆ ಅಶ್ವಿನಿ ದೇವತೆಗಳ ವರಪ್ರಸಾದದಲ್ಲಿ ಅವಳಿ ಮಕ್ಕಳಾಗಿ ಜನಿಸಿದವ. ನಕುಲ ಇವನ ಅಣ್ಣ.
ಸಹದೇವ ಮತ್ತು ಅವನ ಸಹೋದರ ನಕುಲ ಇಬ್ಬರನ್ನೂ ಆಶ್ವಿನೇಯರು ಎಂದು ಕರೆಯಲಾಗುತ್ತದೆ. ಅಂದರೆ ಅವರು ಅಶ್ವಿನಿ ದೇವತೆಗಳಿಂದ ಜನಿಸಿದವರು ಎಂದರ್ಥ.
ಮಕ್ಕಳನ್ನು ಹೊಂದುವ ಪಾಂಡುವಿನ ಅಸಮರ್ಥತೆಯಿಂದ (ಋಷಿ ಕಿಂಧಮನ ಶಾಪದಿಂದಾಗಿ) ಮಹರ್ಷಿ ದೂರ್ವಾಸ ನೀಡಿದ ಮಂತ್ರವನ್ನು ಬಳಸಿ ಕುಂತಿದೇವಿಯು ಮೂವರು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಉಳಿದ ಒಂದು ಮಂತ್ರವನ್ನು ಪಾಂಡುವಿನ ಎರಡನೆಯ ಹೆಂಡತಿಯಾದ ಮಾದ್ರಿಗೆ ಉಪದೇಶಿಸುತ್ತಾಳೆ. ಅವಳು ಅಶ್ವಿನೀ ಕುಮಾರರನ್ನು ಪ್ರಾರ್ಥಿಸಿ ನಕುಲ ಮತ್ತು ಸಹದೇವರನ್ನು ಪಡೆಯುತ್ತಾಳೆ.
ನಂತರ, ಪಾಂಡು ಅವನ ಪತ್ನಿ ಮಾದ್ರಿಯೊಂದಿಗೆ ಸೇರಲು ಪ್ರಯತ್ನಿಸಿದಾಗ ಕಿಂಧಮರ ಶಾಪದಿಂದಾಗಿ ಮರಣಹೊಂದುತ್ತಾನೆ. ಮಾದ್ರಿ ಪತಿಯೊಂದಿಗೆ ಸಹಗಮನ ಮಾಡುತ್ತಾಳೆ. ಆದ್ದರಿಂದ ನಕುಲ ಮತ್ತು ಸಹದೇವ ಇಬ್ಬರೂ ತಮ್ಮ ಪೋಷಕರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರು. ಸಹದೇವನು ಅಸುರ ಗುರುವಾದ ಶುಕ್ರನ ಅವತಾರವೆಂದು ನಂಬಲಾಗಿದೆ.
ಪಾಂಡವರು ಹಸ್ತಿನಾಪುರಕ್ಕೆ ಹೋದ ಮೇಲೆ ಅಲ್ಲಿ ಅವರು ಶಸ್ತ್ರಾಸ್ತ್ರಗಳ ವಿದ್ಯೆಯನ್ನು ದ್ರೋಣ ಮತ್ತು ಕೃಪಾಚಾರ್ಯರಿಂದ ಪಡೆದರು. ಸಹದೇವ ಯುದ್ಧವ್ಯೂಹ ಮತ್ತು ಕತ್ತಿವರಸೆಯಲ್ಲಿ ಕೌಶಲ್ಯವನ್ನು ಸಾಧಿಸಿದನು.
ಎಲ್ಲಾ ಐದು ಪಾಂಡವ ಸಹೋದರರು ದ್ರೌಪದಿಯನ್ನು ಏಕಕಾಲದಲ್ಲಿ ಮದುವೆಯಾಗಿದ್ದರು. ಮತ್ತು ಪ್ರತಿಯೊಬ್ಬರೂ ಅವರಿಂದ ಮಗನನ್ನು ಹೊಂದಿದ್ದರು. ದ್ರೌಪದಿಯಿಂದ ಸಹದೇವ ಪಡೆದ ಮಗ ಶ್ರುತಸೇನ. ಸಹದೇವ ತನ್ನ ತಾಯಿಯ ಸೋದರಸಂಬಂಧಿ ವಿಜಯಳನ್ನು ಮದುವೆಯಾಗಿದ್ದನು. ಈಕೆ ಮದ್ರ ರಾಜನಾದ ದ್ಯುತಿಮಾನ್ ಮಹಾರಾಜನ ಪುತ್ರಿ, ಮತ್ತು ಸುಹೋತ್ರಾ ಎಂಬ ಮಗನನ್ನು ಹೆತ್ತಳು.
ಮಹಾಭಾರತದ ಮಹಾಕಾವ್ಯದ ಪ್ರಕಾರ ಇಂದ್ರಪ್ರಸ್ಥದ ಚಕ್ರವರ್ತಿಯಾದ ಯುಧಿಷ್ಠಿರನು ರಾಜಸೂಯ ಯಾಗದ ದಿಗ್ವಿಜಯಕ್ಕಾಗಿ ಸಹದೇವನನ್ನು ದಕ್ಷಿಣ ದಿಕ್ಕಿಗೆ ಕಳುಹಿಸಿದನು. ಕತ್ತಿವರಸೆಯಲ್ಲಿ ತನ್ನ ಪರಿಣತಿಯಿಂದಾಗಿ ಅವನು ದಕ್ಷಿಣಕ್ಕೆ ವಿಶೇಷವಾಗಿ ಆರಿಸಲ್ಪಟ್ಟನು. ದಕ್ಷಿಣದವರು ಆ ಕಾಲದಲ್ಲಿ ಸಾಮಾನ್ಯವಾಗಿ ಕತ್ತಿ-ಹೋರಾಟದಲ್ಲಿ ನಿಪುಣರಾಗಿದ್ದಾರೆಂದು ಪ್ರತೀತಿ ಇತ್ತು.
ಅಜ್ಞಾತವಾಸದ ಕಾಲದಲ್ಲಿ ವಿರಾಟನ ಗೋಸಂಪತ್ತನ್ಮು 'ತಂತ್ರಪಾಲ' ಎಂಬ ಹೆಸರಿನಿಂದ ನೋಡಿಕೊಳ್ಳುತ್ತಿದ್ದ ಸಹದೇವ. ಅವನ ಕಾಲದಲ್ಲಿ ವಿರಾಟನ ಗೋಸಂಪತ್ತು ಇನ್ನಿಲ್ಲದಂತೆ ಅಭಿವೃದ್ಧಿ ಹೊಂದಿತ್ತಂತೆ.
ಸಹದೇವನು ಹಿಂದಿನ, ಪ್ರಸ್ತುತ ಮತ್ತು ಭವಿಷ್ಯವನ್ನು ತಿಳಿಯುವ ಶಕ್ತಿ ಹೊಂದಿದ್ದನು. ಇವನು ಔಷಧ, ಅಶ್ವ ಶಾಸ್ತ್ರದ ಕೌಶಲಗಳು, ಪಶುವೈದ್ಯ ಇತ್ಯಾದಿಗಳಲ್ಲಿಯೂ ನಿಷ್ಣಾತನಾಗಿದ್ದನು.
ಸಹದೇವನು ಶ್ರೇಷ್ಠ ಜ್ಯೋತಿಷಿಯಾಗಿದ್ದ ಎಂದು ಹೇಳಲಾಗುತ್ತದೆ ಮತ್ತು ಮಹಾಭಾರತ ಯುದ್ದದ ಪರಿಣಾಮವನ್ನೂ ಸೇರಿದಂತೆ ಎಲ್ಲವನ್ನೂ ಸಹ ಅವನು ಮೊದಲೇ ತಿಳಿದಿದ್ದನು. ಕರ್ಣ ಕುಂತಿಯ ಮೊದಲ ಮಗನೆಂದು ಅವನಿಗೆ ತಿಳಿದಿತ್ತಂತೆ. ಅರಗಿನ ಅರಮನೆಯಲ್ಲಿ ನಡೆಯಲಿರುವ ಅನಾಹುತವೂ ಅವನಿಗೆ ಮೊದಲೇ ತಿಳಿದಿತ್ತಂತೆ. ಆದರೆ ಅದನ್ನು ಇತರರಿಗೆ ತಿಳಿಸುವ ಮೊದಲೇ ವಿದುರ ಅದನ್ನು ದರ್ಮರಾಜನಿಗೆ ಸಂಕೇತದ ಮೂಲಕ ತಿಳಿಸಿದ್ದ.
ಸಂ.: ದಾಮೋದರ ಶೆಟ್ಟಿ, ಇರುವೈಲುYakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಯಕ್ಷಗಾನ ಒಡ್ಡೋಲಗದಲ್ಲಿ ಪಾಂಡವರು |

ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ