ಮಂಗಳೂರು ಸಂತ ಅಲೋಶಿಯಸ್ ಪದವಿ ಕಾಲೇಜಿನ ಎಲ್.ಎಫ್.ರಸ್ಕಿನ್ಹ ಹಾಲ್‌ನಲ್ಲಿ ಅಪರಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕಲಾಪೋಷಕರಾದ ಟಿ. ಶ್ಯಾಮ ಭಟ್, ಹಿರಿಯ ವಿದ್ವಾಂಸ ಪ್ರೊ. ಎಂ. ಎಲ್. ಸಾಮಗ ಹಾಗೂ ಪ್ರೊ.ನಿತ್ಯಾನಂದ ಬಿ. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿರುವರು. ಸಂತ ಅಲೋಶಿಯಸ್ ಪ್ರಕಾಶನವು ಈ ಗ್ರಂಥವನ್ನು ಪ್ರಕಟಿಸಿದೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಕೃತಿ ಬಿಡುಗಡೆಯ ಬಳಿಕ ತಾಳಮದ್ದಲೆ 'ತ್ಯಾಗಮೇವ ಜಯತೇ' ನಡೆಯಲಿದೆ.
ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಮಧುಸೂದನ ಅಲೆವೂರಾಯ ಭಾಗವಹಿಸಲಿದ್ದಾರೆ.
ಮುಮ್ಮೇಳದಲ್ಲಿ ಬಾಹುಬಲಿಯಾಗಿ ಸೂರಿಕುಮೇರು ಕೆ. ಗೋವಿಂದ ಭಟ್, ಬುದ್ಧಿಸಾಗರನಾಗಿ ಪ್ರೊ.ಎಂ.ಎಲ್.ಸಾಮಗ, ಭರತನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ದಕ್ಷಿಣಾಂಕನಾಗಿ ವಾಸುದೇವ ರಂಗಾಭಟ್ಟ, ಮಧೂರು ಹಾಗೂ ಪ್ರಣಯ ಚಂದ್ರಮನಾಗಿ ಡಾ.ದಿನೇಶ್ ನಾಯಕ್ ಅವರು ಅರ್ಥ ಹೇಳಲಿದ್ದಾರೆ.
Tags:
ಸುದ್ದಿ