ಮಂಗಳೂರು: ಇತ್ತೀಚೆಗೆ ಅಚಾನಕ್ ಆಗಿ ಬೆಳಕಿಗೆ ಬಂದಿದ್ದ, ಮೂಲಿಕೆ ವೆಂಕಣ್ಣ ಕವಿ ವಿರಚಿತ 'ಮಾನಸ ಚರಿತ್ರೆ' ಮತ್ತು ಶಿರೂರು ಫಣಿಯಪ್ಪಯ್ಯ ವಿರಚಿತ 'ವಾಜಿಗ್ರಹಣ ಅಥವಾ ಯೌವನಾಶ್ವನ ಕಾಳಗ' ಎಂಬ ಎರಡು ಪ್ರಸಂಗ ಕೃತಿಗಳ ಬಿಡುಗಡೆ ಕಾರ್ಯಕ್ರಮ ನ.19ರಂದು ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದ ಕಲಾಮಂಟಪದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಶಿರೂರಿನ ಫಣಿಗಿರಿ ಪ್ರತಿಷ್ಠಾನದ ಉದ್ಘಾಟನೆಯೂ ನೆರವೇರಲಿದೆ. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿ ಪ್ರತಿಷ್ಠಾನವನ್ನು ಉದ್ಘಾಟಿಸಲಿದ್ದಾರೆ. ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ದಾಮೋದರ ಕುಡ್ವ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಸಂಶೋಧಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಕೃತಿ ಪರಿಚಯ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸತ್ಯನಾರಾಯಣ ನಾಯಕ್, ಕೆ.ಭುವನಾಭಿರಾಮ ಉಡುಪ, ನಂದಳಿಕೆ ಬಾಲಚಂದ್ರ ರಾವ್, ಎಂ.ದಿನೇಶ ಉಪ್ಪೂರ ಹಾಗೂ ಕೆ.ಪಿ.ರಾಜಗೋಪಾಲ ಕನ್ಯಾನ ಭಾಗವಹಿಸಲಿದ್ದಾರೆ ಎಂದು ಪ್ರಕಾಶಕ ಉಮೇಶ್ ಶಿರೂರು (9448353910) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನಸ ಚರಿತ್ರೆ ಎಂಬ ಅಮೂಲ್ಯ ಕೃತಿಯು ಲಭ್ಯವಾದ ವಿಶೇಷ ಬಗೆಯ ವಿವರ ಇಲ್ಲಿದೆ.
Tags:
ಸುದ್ದಿ