ಯಕ್ಷಗಾನ ಅರ್ಥಧಾರಿ, ಹರಿದಾಸ ನೀವಣೆ ಗಣೇಶ ಭಟ್ ನಿಧನ‌


ಉಡುಪಿ: ಯಕ್ಷಗಾನ ಕಲಾವಿದ, ಹರಿಕಥಾ ರಂಗದ ದಿಗ್ಗಜ, ಹಿರಿಯ ವಿದ್ವಾಂಸ ನೀವಣೆ ಗಣೇಶ ಭಟ್ ಅವರು ನಿಧನರಾದರು. ರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಇವರ ಬಗ್ಗೆ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಗೌರವಿಸಿತ್ತು.

ಹಲವಾರು ಭಾಗವತ ಸಪ್ತಾಹಗಳನ್ನು ನಡೆಸಿರುವ ನೀವಣೆ ಗಣೇಶ್ ಭಟ್ (80) ಅವರು ಹುಬ್ಬಳ್ಳಿಯಲ್ಲಿ ತಮ್ಮ ಪುತ್ರಿಯ ಮನೆಯಲ್ಲಿ ಬುಧವಾರ ರಾತ್ರಿ ಹರಿಪಾದ ಸೇರಿದರು. ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

ಪ್ರಸಿದ್ಧ ಪ್ರವಚನಕಾರರಾಗಿದ್ದ ನೀವಣೆಯವರು ನೂರಾರು ಭಾಗವತ ಸಪ್ತಾಹ ಮಾಡಿದ್ದರು. ಹರಿದಾಸರಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ ಸಾಧನೆ ಮಾಡಿದ್ದರು. ಹಲವು ಉಪಯುಕ್ತ ಪುಸ್ತಕಗಳನ್ನೂ ಬರೆದಿದ್ದಾರೆ.

ಉಡುಪಿಯ ಯಕ್ಷಗಾನ ಕಲಾರಂಗ ಎರಡು ವರ್ಷದ ಹಿಂದೆ ಅವರಿಗೆ ಪೆರ್ಲ ಕೃಷ್ಣ ಭಟ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು