![]() |
ದೇವಿ ಹೇ ಪಾವನ ಚರಿತೆ |
![]() |
ರಕ್ತಬೀಜ ಸಂಹಾರ |
![]() |
ತರುಣಿಯಲ್ಲವಳಾದಿ ಮಾಯೇ... |
![]() |
ಚಂಡ ಮುಂಡರ ವಧೆ |
![]() |
ಶುಂಭಾಖ್ಯ |
![]() |
ರಕ್ತೇಶ್ವರಿಯ ಆಗಮನ |
![]() |
ದಿವ್ಯಶ್ರೀ ಪುತ್ತಿಗೆ ಭಾಗವತಿಕೆ, ಅಂಡಾಲ ಮಹತೀ ಚೆಂಡೆ |
ಹೀಗೊಂದು ಪರಿಕಲ್ಪನೆಯೊಂದಿಗೆ ಶುಕ್ರವಾರ ಸಾಯಂಕಾಲ ಬಜಪೆ ಸಮೀಪದ ಕೊಳಂಬೆ ಗ್ರಾಮದ ತಲಕಳ ಎಂಬ ಪುಟ್ಟ ಊರಿನ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರವು ಬಜಪೆಯ ಮುರನಗರದಲ್ಲಿ ಹೊಸ ಇತಿಹಾಸ ಬರೆದಿದೆ. ಅದು ಕೂಡ, ಕ್ಲಿಷ್ಟಕರವಾದ ರಂಗ ನಡೆಗಳಿರುವ, ರಂಗ ಸಾಧ್ಯತೆಗಳೂ ಇರುವ ಜನಪ್ರಿಯ ಕಥಾನಕ ದೇವೀ ಮಹಾತ್ಮೆ ಪ್ರಸಂಗವನ್ನು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಸಂಪೂರ್ಣ ಮಹಿಳಾ ಕಲಾವಿದರನ್ನೇ ಒಳಗೊಂಡ ಹಿಮ್ಮೇಳ-ಮುಮ್ಮೇಳದೊಂದಿಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಕಾಲಮಿತಿಯಲ್ಲೇ ಪ್ರದರ್ಶನಗೊಂಡಿದೆ. ಈ ಕಲಾಕೇಂದ್ರದ ಸಂಚಾಲಕಿ ಕೆ.ಯೋಗಾಕ್ಷಿ ತಲಕಳ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ಕಲಿಯಲು ಬರುತ್ತಿರುವ ಹುಡುಗಿಯರಷ್ಟೇ ಅಲ್ಲ, ಅವರ ಅಮ್ಮಂದಿರೂ ಹೆಜ್ಜೆ ಕಲಿತು ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿದ್ದಾರೆ.
ಹಿರಿಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ಹಾಗೂ ಮುಮ್ಮೇಳ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಿರ್ದೇಶನದಲ್ಲಿ ಹಲವು ಯಕ್ಷಗಾನ ಪ್ರಸಂಗಗಳನ್ನು ಈ ಕಲಿಕಾ ಕೇಂದ್ರದ ಮಕ್ಕಳು ಈಗಾಗಲೇ ಪ್ರದರ್ಶಿಸಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಮಹಿಳೆಯರಿಂದಲೇ ದೇವಿ ಮಹಾತ್ಮೆ. ಮಧು-ಕೈಟಭ, ವಿದ್ಯುನ್ಮಾಲಿ, ಮಹಿಷ ವಧೆ, ಚಂಡ-ಮುಂಡ, ರಕ್ತಬೀಜಾಸುರ, ಸುಗ್ರೀವ, ದೂಮ್ರಾಕ್ಷ ಮತ್ತು ಶುಂಭ ನಿಶುಂಭ ವಧೆ ಕಥಾ ಭಾಗಗಳು ಅಚ್ಚುಕಟ್ಟಾಗಿ ಪ್ರದರ್ಶನಗೊಂಡವು.
ಯುವ ಬ್ರಿಗೇಡ್ ಕೊಳಂಬೆ ಇದರ 54ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾ ಯಾತ್ರೆಯ ಪ್ರಯುಕ್ತ ಸಂಜೆ 6 ಗಂಟೆಯಿಂದ ಬಜಪೆಯ ಮುರನಗರದಲ್ಲಿ ಈ ವಿಶೇಷ ಯಕ್ಷಗಾನವು ಪ್ರದರ್ಶನಗೊಂಡು, ಪ್ರೇಕ್ಷಕರನ್ನು ರಂಜಿಸಿತು.
ನಿರ್ದೇಶನ: ಕರ್ಗಲ್ಲು ವಿಶ್ವೇಶ್ವರ ಭಟ್, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ
ಹಿಮ್ಮೇಳದಲ್ಲಿ:
ಭಾಗವತಿಕೆ: ಕು.ದಿವ್ಯಶ್ರೀ ಪುತ್ತಿಗೆ, ಕು.ದೀಕ್ಷಾ ಪುತ್ತಿಗೆ, ಕು.ಮಾನಸ ಪಡುಬಿದ್ರಿ
ಚೆಂಡೆ, ಮದ್ದಳೆ, ಚಕ್ರತಾಳ: ಕು.ಶ್ರಾವ್ಯ ತಲಕಳ, ಕು.ಅಂಡಾಲ ಮಹತೀ ಶೆಟ್ಟಿ, ಕು.ಪೂಜಾ ಶಿರ್ತಾಡಿ
ಮುಮ್ಮೇಳದಲ್ಲಿ:
ಶ್ರೀಮತಿಯರಾದ ಯೋಗಾಕ್ಷಿ ಗಣೇಶ್ ತಲಕಳ (ಬ್ರಹ್ಮ), ಶರ್ಮಿಳಾ ಪುರಂದರ ಮುರನಗರ (ಸಿಂಹ), ಮಮತಾ ರಾಮ್ ವಾಮಂಜೂರು (ವಿದ್ಯುನ್ಮಾಲಿ ಮತ್ತು ಶಂಖಾಸುರ), ನಮ್ರತಾ ರಾವ್ ಕೊಂಚಾಡಿ (ಶುಂಭ), ಮೈತ್ರಿ ಉಡುಪ ಕತ್ತಲ್‌ಸಾರ್ (ಆದಿಮಾಯೆ), ಲತಾ ದೇವಾಡಿಗ ಪೊಳಲಿ (ಮಧು, ನಿಶುಂಭ), ಜಯಲಕ್ಷ್ಮೀ ಹರೀಶ್ ಏರ್‌ಪೋರ್ಟ್ (ಪುರೋಹಿತ ಹಾಗೂ ಮಾಲಿನಿ ದೂತ), ಲಕ್ಷ್ಮೀ ರಂಗಪ್ಪ (ಪುರೋಹಿತನ ಮಡದಿ) ಹಾಗೂ ಕುಮಾರಿಯರಾದ ಶ್ರಾವ್ಯ ಕೆ.ತಲಕಳ (ಮಾಲಿನಿ), ಅನನ್ಯ ಸುವರ್ಣ, ಮುರನಗರ (ಶ್ರೀದೇವಿ), ಖುಷಿ ಕತ್ತಲ್‌ಸಾರ್ (ವಿಷ್ಣು ಹಾಗೂ ಚಂಡ), ನವ್ಯಾ ಕತ್ತಲ್‌ಸಾರ್ (ದೂಮ್ರಾಕ್ಷ), ಶಮಾ ಕೆ.ತಲಕಳ (ಮಹಿಷಾಸುರ ಹಾಗೂ ರಕ್ತಬೀಜ), ಚೈತ್ರ ತಲಕಳ (ಸುಪಾರ್ಶ್ವಕ), ದೀಕ್ಷಾ ಪೆರಾರ (ಕೈಟಭ, ಯಕ್ಷ ಹಾಗೂ ಮುಂಡ), ರಕ್ಷಿತಾ ಏರ್‌ಪೋರ್ಟ್ (ಮಹೇಶ್ವರ ಹಾಗೂ ಕಾಳಿ), ದಿವ್ಯಶ್ರೀ ಪಂಜ (ದಿತಿ ಹಾಗೂ ಸುಗ್ರೀವ), ನವ್ಯಾ ಗೋಳಿಪಲ್ಕೆ (ದುರ್ಗಾಸುರ), ನಿಶ್ಮಿತಾ ಗೋಳಿಪಲ್ಕೆ (ಅಗ್ನಿ ಹಾಗೂ ದಿಬ್ಬಣಿಗರು), ದೀಕ್ಷಾ ಪೆರ್ಮುದೆ (ವರುಣ ಹಾಗೂ ದಿಬ್ಬಣಿಗರು), ಜೊತೆಗೆ ಸಪ್ತಮಾತೃಕೆಯರು, ಬೀಜಾದಿಗಳಾಗಿ ಇದೇ ಕಲಾವಿದರಲ್ಲಿ ಅನೇಕರು ಪಾತ್ರ ನಿಭಾಯಿಸಿದರು. ತೆರೆ ಹಿಡಿಯುವುದು, ರಾಳ ಹಾಕುವುದಕ್ಕೆ ಸುಮತಿ ಸಹಕರಿಸಿದರು.
ಮುರನಗರದ ಆನಂದ ಬಂಗೇರ ದಂಪತಿ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು, ಭಾರತಿ ಕಲಾ ಆರ್ಟ್ಸ್, ಹೂಹಾಕುವ ಕಲ್ಲು ಇದರ ರಾಘವದಾಸ್ ಬಜ್ಪೆ ಅವರು ವೇಷಭೂಷಣ ಒದಗಿಸಿದ್ದರು.
Tags:
ಸುದ್ದಿ