ಬೆಂಗಳೂರಿನ ನಯನ ಸಭಾಂಗಣದಲ್ಲಿ ಶುಕ್ರವಾರ (ನ.29, 2024) ರಮೇಶ್ ಚೋರಾಡಿ ಸಾರಥ್ಯದ ಗೋ ಕೂಲ್ (Go- Cool) ಬಳಗ ಆಯೋಜಿಸಿದ್ದ 'ಭೃಗು ಶಾಪ' ತಾಳಮದ್ದಳೆಯ ಬಳಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಕಲಾವಿದರು ತಪ್ಪಿದ್ದೆಲ್ಲಿ, ಎಲ್ಲಿ ಸುಧಾರಿಸಿಕೊಳ್ಳಬಹುದು ಅಂತ ಸ್ವವಿಮರ್ಶೆಯಿಂದಲೂ, ಅನ್ಯರ ವಿಮರ್ಶೆಗಳಿಗೂ ಕಿವಿಯಾನಿಸಿ ತಮ್ಮನ್ನು ಉತ್ತಮಪಡಿಸಿಕೊಳ್ಳಬಹುದು ಎಂದ ಅವರು, ಒಂದು ರಂಗ ಕಲೆ ಬೆಳೆಯುವುದು ಎರಡೂ ಕಡೆಯ ಸಂವಹನ-ಸಂವಾದದಿಂದ. ಪ್ರೇಕ್ಷಕರ ಪ್ರತಿಕ್ರಿಯೆಯು ಕಲಾವಿದರಿಗೆ ಪ್ರೇರಣೆಯಾಗಬಲ್ಲದು. ಪ್ರೇಕ್ಷಕರ ಮುಖದಲ್ಲಿ ಕಾಣಿಸುವ ರೇಖೆಗಳು ರಂಗಸ್ಥಳದ ಮೇಲಿರುವ ಕಲಾವಿದರ ಪ್ರದರ್ಶನದ ಸ್ವೀಕೃತಿ ಅಥವಾ ನಿರಾಕರಣೆಯ ಪ್ರತೀಕಗಳು. ಇದರ ಮೂಲಕ ಸಾಧನೆ ಮಾಡಲಿಕ್ಕಾಗುತ್ತದೆ ಎಂದು ಹೇಳಿದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಳೆಗಾಲದ ಎಲ್ಲ ಆಟಕ್ಕೂ ಹಾಜರಾಗಿ, ಕಲಾವಿದರನ್ನು ಪ್ರೋತ್ಸಾಹಿಸುವ ವಾಸುದೇವ ಐತಾಳ್ ನಾಗೂರು ಅವರಿಗೆ 'ವರ್ಷದ ಪ್ರೇಕ್ಷಕ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಅಜಿತ್ ಹೆಗ್ಡೆ ಶಾನಾಡಿ, ನವೀನ್ ಶೆಟ್ಟಿ ಐರ್ಬೈಲ್, ರಾಜೇಶ್ ಕೊಂಡಳ್ಳಿ, ವಿಜಯ್ ತಲ್ಲೂರು, ನಾಗರಾಜ್ ನೈಕಂಬ್ಳಿ, ಶೇಖರ್ ಕೆ.ಎಂ. ಮತ್ತು ಇತರ ಸಂಘಟಕ ಮಿತ್ರರು ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ವೇದಿಕೆಯಲ್ಲಿ ರವಿರಾಜ್ ಶೆಟ್ಟಿ, ಶ್ರೀನಿವಾಸ ರಾವ್, ಡಾ. ಜಗದೀಶ ಶೆಟ್ಟಿ, ಅವಿನಾಶ ಬೈಪಾಡಿತ್ತಾಯ, ರಾಜ್ ಸಂಪಾಜೆ ಹಾಗೂ ಇತರರಿದ್ದರು.
ಇದಕ್ಕ ಮುನ್ನ, ವಿನಯ್ ಆರ್.ಶೆಟ್ಟಿ ಭಾಗವತಿಕೆಯಲ್ಲಿ, ಸಂಪತ್ ಆಚಾರ್ಯ ಹಾಗೂ ಪನ್ನಗ ಮಯ್ಯ ಅವರ ಚೆಂಡೆ ಮದ್ದಳೆಯ ಹಿಮ್ಮೇಳದೊಂದಿಗೆ, ಡಿ.ಎಸ್.ಶ್ರೀಧರ್ ವಿರಚಿತ "ಭೃಗು ಶಾಪ" ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ದೇವೇಂದ್ರನಾಗಿ ಜಬ್ಬಾರ್ ಸಮೊ ಅರ್ಥ ಹೇಳಿದರೆ, ಅವರೊಂದಿಗೆ ಯುವ ಕಲಾವಿದರು ಗಮನ ಸೆಳೆದರು. ಖ್ಯಾತಿದೇವಿಯಾಗಿ ಸತೀಶ್ ಶೆಟ್ಟಿ ಮೂಡುಬಗೆ, ವಿಷ್ಣುವಾಗಿ ಡಾ.ಜಗದೀಶ್ ಶೆಟ್ಟಿ ಸಿದ್ದಾಪುರ, ಭೃಗು ಮುನಿಯಾಗಿ ಅವಿನಾಶ್ ಶೆಟ್ಟಿ ಉಬರಡ್ಕ, ತಮಾಸುರನಾಗಿ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಹಾಗೂ ಬೃಹಸ್ಪತಿಯಾಗಿ ನಾಗರಾಜ ಶೆಟ್ಟಿ ನೈಕಂಬ್ಳಿ ಅರ್ಥ ಪ್ರಸ್ತುತಿಗೈದರು.