ಮಹಾಭಾರತದ ಯುದ್ಧದಲ್ಲಿ ಒಟ್ಟು ಹದಿನೆಂಟು ಅಕ್ಷೋಹಿಣಿ ಸೈನ್ಯಗಳು ಭಾಗವಹಿಸಿದ್ದವು ಅಂದರೆ 7 ಪಾಂಡವರದು +11 ಕೌರವರದು. ಹಾಗಿದ್ದರೆ, ಒಂದು ಅಕ್ಷೋಹಿಣಿ ಸೇನೆ ಎಂದರೆ ಎಷ್ಟು, ಅದರಲ್ಲಿ ಏನೆಲ್ಲಾ ಒಳಗೊಂಡಿದೆ ಗೊತ್ತೇ?
ಆ ಕಾಲದಲ್ಲಿ ಸೇನೆಯ ಅತೀ ಸಣ್ಣ ಘಟಕವೆಂದರೆ ಪತ್ತಿ.
• 1 ಪತ್ತಿ = 1 ರಥ, 1 ಆನೆ, 3 ಕುದುರೆಗಳು, 5 ಕಾಲಾಳು ಸೈನಿಕರು.
• 3 ಪತ್ತಿ = 1 ಸೇನಾ ಮುಖ.
• 3 ಸೇನಾ ಮುಖ = 1 ಗುಲ್ಮಾ.
• 3 ಗುಲ್ಮಾ = 1 ಗಣ.
• 3 ಗಣ = 1 ವಾಹಿನಿ.
• 3 ವಾಹಿನಿ = 1 ಪೃತನ.
• 3 ಪೃತನ = 1 ಚಾಮು.
• 3 ಚಾಮು = 1 ಅನೀಕಿನೀ.
• 1 ಅನೀಕಿನೀ = 2187 ರಥಗಳು, 2187 ಆನೆಗಳು, 6561 ಕುದುರೆಗಳು, 10,935 ಕಾಲಾಳು ಸೈನಿಕರು.
• 10 ಅನೀಕಿನೀ = 1 ಅಕ್ಷೋಹಿಣಿ
• ಹೀಗೆ 1 ಅಕ್ಷೋಹಿಣಿ ಅಂದರೆ = 21,870 ರಥಗಳು, 21,870 ಆನೆಗಳು, 65,610 ಕುದುರೆಗಳು, 1,09,350 ಕಾಲಾಳು ಸೈನಿಕರು.
Tags:
ಪುರಾಣ