ಶ್ರೀ ಕೃಷ್ಣನ ಅಷ್ಟ ಮಹಿಷಿಯರಾದ ಎಂಟು ಮಂದಿ ಹೆಂಡತಿಯರಿಗೂ ತಲಾ ಹತ್ತು ಮಕ್ಕಳಿದ್ದರು.
ಪಟ್ಟದ ರಾಣಿ ರುಕ್ಮಿಣಿ, ವಿದರ್ಭ ರಾಜ ಭೀಷ್ಮಕನ ಮಗಳು. ಇವಳ ಮಕ್ಕಳ ಹೆಸರು: ಪ್ರದ್ಯುಮ್ನ, ಚಾರುದೇಷ್ಣೆ, ಸುದೇಷ್ಣೆ, ಚಾರುದೇಹ, ಸುಚಾರು, ಚಾರುಗುಪ್ತ, ಭದ್ರಚಾರು, ಚಾರುಚಂದ್ರ, ವಿಚಾರು, ಚಾರು.
ಸತ್ಯಭಾಮಾ (ಸತ್ರಾಜಿತನ ಮಗಳು): ಭಾನು, ಸುಭಾನು, ಸ್ವರ್ಭಾನು, ಪ್ರಭಾನು, ಭಾನುಮಂತ, ಚಂದ್ರಭಾನು, ಬೃಹದ್ಭಾನು, ಅತಿಭಾನು, ಶ್ರೀ ಭಾನು, ಪ್ರತಿಭಾನು.
ಜಾಂಬವತಿ (ಜಾಂಬವಂತನ ಮಗಳು): ಸಾಂಬ, ಸುಮಿತ್ರ, ಪುರುಜಿತ್, ಶತಜಿತ್, ಸಹಸ್ರಜಿತ್, ವಿಜಯ, ಚಿತ್ರಕೇತು, ವಸುಮಂತ, ದ್ರವಿಡ ಕ್ರತು.
ಕಾಲಿಂದಿ (ಸೂರ್ಯದೇವನ ಮಗಳು): ಶ್ರುತ, ಕವಿ, ವೃಷ, ವೀರ, ಸುಬಾಹು, ಭದ್ರ, ಶಾಂತಿ, ದರ್ಶ, ಪೂರ್ಣಮಾಸ, ಸೋಮಕ.
ಮಿತ್ರವೃಂದೆ (ಉಜ್ಜಯಿನಿಯ ಜಯಸೇನನ ಮಗಳು): ವೃಕ, ಹರ್ಷ, ಅನಿಲ, ಗೃಧ್ರ, ವರ್ಧನ, ಅನ್ನಾದ, ಮಹಾಶ, ಪಾವನ, ವಹ್ನಿ, ಕ್ಷುಧಿ.
ನಗ್ನಜಿತಿ /ಸತ್ಯಾ (ಕೋಸಲ ರಾಜ ನಗ್ನಜಿತನ ಮಗಳು): ಚಂದ್ರ, ಅಶ್ವಸೇನ, ಚಿತ್ರಗು, ವೇಗವಂತ, ವೃಷ, ಆಮ, ಶಂಕು, ವಸು, ಕುಂತಿ.
ಲಕ್ಷ್ಮಣಾ (ಬೃಹತ್‌ಸೇನನ ಮಗಳು): ಪ್ರಘೋಷ, ಗಾತ್ರವಂತ, ಸಿಂಹ, ಬಲ, ಪ್ರಬಲ, ಊರ್ಧ್ವಗ, ಮಹಾಶಕ್ತಿ, ಸಹ, ಓಜ, ಅಪರಾಜಿತ.
ಭದ್ರಾ (ದೃಷ್ಟ ಕೇತುವಿನ ಮಗಳು): ಬೃಹತ್ಸೇನ, ಶೂರ, ಪ್ರಹರಣ, ಅರಿಜಿತ್, ಜಯಾ, ಸುಭದ್ರ, ವಾಮ, ಆಯು, ಸತ್ಯಕ.
Tags:
ಪುರಾಣ