ಅಕಾಡೆಮಿ ಪ್ರಶಸ್ತಿ ಪಡೆದಿರುವ ತೆಂಕು, ಬಡಗು ಹಾಗೂ ಮೂಡಲಪಾಯ ಕಲಾವಿದರ ಪಟ್ಟಿ ಇಲ್ಲಿದೆ.
ಮಂಗಳೂರು: 2026ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಪ್ರತಿಷ್ಠಿತವಾದ ಮತ್ತು ಯಕ್ಷಗಾನದ ಮೂಲಪುರುಷ ಎಂದೇ ಗುರುತಿಸಲ್ಪಟ್ಟ ಪಾರ್ತಿಸುಬ್ಬ ಹೆಸರಿನ ಪ್ರಶಸ್ತಿಗೆ ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ.
ಪಾರ್ತಿಸುಬ್ಬ ಪ್ರಶಸ್ತಿಯು 1 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದ್ದು, ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿಯು ತಲಾ 50 ಸಾವಿರ ರೂ. ಹಾಗೂ ಯಕ್ಷ ಸಿರಿ ಪ್ರಶಸ್ತಿ ಹಾಗೂ ದತ್ತಿನಿಧಿ ಗೌರವ ಪ್ರಶಸ್ತಿಗಳು ತಲಾ 25 ಸಾವಿರ ರೂ. ಪುರಸ್ಕಾರವನ್ನು ಒಳಗೊಂಡಿದೆ.
ಯಕ್ಷಗಾನ ಅಕಾಡೆಮಿಯು ಘೋಷಿಸಿರುವ 2026ನೇ ಸಾಲಿನ ಇತರ ಪ್ರಶಸ್ತಿ ಪುರಸ್ಕೃತರ ವಿವರಗಳು ಹೀಗಿವೆ:
ಪಾರ್ತಿಸುಬ್ಬ ಪ್ರಶಸ್ತಿ
ಎಂ.ಕೆ.ರಮೇಶ್ ಆಚಾರ್ಯ: ತೆಂಕು ಮತ್ತು ಬಡಗುತಿಟ್ಟು ಅಗ್ರಮಾನ್ಯ ಸ್ತ್ರೀವೇಷಧಾರಿಯಾಗಿ ಮೆರೆದವರು
ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ 2026
- ಜಪ್ಪು ದಯಾನಂದ ಶೆಟ್ಟಿ: ತೆಂಕುತಿಟ್ಟು ಕಲಾವಿದರು
- ಸಿರಿಬಾಗಿಲು ರಾಮಕೃಷ್ಣ ಮಯ್ಯ: ತೆಂಕುತಿಟ್ಟು ಭಾಗವತರು, ಧರ್ಮಸ್ಥಳ ಮೇಳದ ಪ್ರಧಾನ ಭಾಗವತರು
- ಪದ್ಮನಾಭ ಉಪಾಧ್ಯಾಯ: ತೆಂಕುತಿಟ್ಟು ಮದ್ದಳೆಗಾರರು, ಸದ್ಯ ಬಪ್ಪನಾಡು ಮೇಳದ ಪ್ರಧಾನ ಮದ್ದಳೆಗಾರರು
- ಮಹಾಬಲ ದೇವಾಡಿಗ: ಬಡಗುತಿಟ್ಟು
- ದೊಡ್ಡಮಲ್ಲಯ್ಯ: ಮೂಡಲಪಾಯ ಯಕ್ಷಗಾನ ಭಾಗವತರು
ಯಕ್ಷಗಾನ ಅಕಾಡೆಮಿ ಯಕ್ಷಸಿರಿ ಪ್ರಶಸ್ತಿ 2026
- ವೇ| ರಾಘವೇಂದ್ರ ಆಸ್ರಣ್ಣ: ತೆಂಕುತಿಟ್ಟು
- ಪೂರ್ಣಿಮಾ ಯತೀಶ್ ರೈ: ತೆಂಕುತಿಟ್ಟು ವೇಷಧಾರಿಗಳು, ಪ್ರಸಿದ್ಧ ಕಲಾವಿದೆ
- ದುರ್ಗಾಪರಮೇಶ್ವರಿ ಕುಕ್ಕಿಲ: ತೆಂಕುತಿಟ್ಟು ಭಾಗವತರು
- ಉಜಿರೆ ನಾರಾಯಣ ಪೂಜಾರಿ: ತೆಂಕುತಿಟ್ಟು ಹಾಸ್ಯ ಕಲಾವಿದರು
- ವಿದ್ವಾನ್ ಲಕ್ಷ್ಮೀನಾರಾಯಣ ಉಪಾಧ್ಯ: ತೆಂಕುತಿಟ್ಟು ಚೆಂಡೆವಾದಕರು
- ಹೆರಿಯ ನಾಯ್ಕ ಮೊಗೆಬೆಟ್ಟು: ಬಡಗುತಿಟ್ಟು ಕಲಾವಿದರು, ಪ್ರಸಂಗಕರ್ತರು
- ರಾಮಗೌಡ ಗುಣವಂತೆ: ಬಡಾಬಡಗು ಕಲಾವಿದರು
- ಪಡ್ರೆ ಕುಮಾರ: ತೆಂಕುತಿಟ್ಟು ಹಿರಿಯ ಕಲಾವಿದರು, ಪ್ರಸ್ತುತ ಕಟೀಲು ಮೇಳ
- ಸುರೇಶ ಕುಪ್ಪೆಪದವು: ತೆಂಕುತಿಟ್ಟು ಬಣ್ಣದ ವೇಷಧಾರಿಗಳು, ಪ್ರಸ್ತುತ ಕಟೀಲು ಮೇಳ
- ಶಿವಯ್ಯ: ಮೂಡಲಪಾಯ ಯಕ್ಷಗಾನ ಕಲಾವಿದರು
ಯಕ್ಷಗಾನ ಅಕಾಡೆಮಿ 2026ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳು
1. ದಿ|| ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿ
ಭೀಮಣ್ಣ: ಮೂಡಲಪಾಯ ಯಕ್ಷಗಾನ
2. ಡಾ. ತಲ್ಲೂರು ಶಿವರಾಮ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿ
ಪ್ರೊ. ಎಂ.ಎನ್. ವೆಂಕಟೇಶ: ಸಂಶೋಧಕರು, ಆಂಧ್ರ ಪ್ರದೇಶ
