✍️: ಚಂದ್ರಶೇಖರ್ ಭಟ್, ಕೊಂಕಣಾಜೆ. ಅದ್ವೈತ
ಬಲಿಪ ಎಂಬ ಶಬ್ದವು ಬಲಿಪ ಭಾಗವತರ ಪೂರ್ವಜರಿಗೆ ಲಭಿಸಿದ ಬಿರುದು. ಇದು "ಸರ್ ನೇಮ್", ಜಾತಿ ಅಥವಾ ಕುಟುಂಬ ಸೂಚಕ ಪದವೂ ಅಲ್ಲ. ಹಾಗೆಂದು ಬಲಿಪ ಎಂಬ ಉಪನಾಮವನ್ನು ಜೈನ ಸಮುದಾಯದಲ್ಲಿ ಕಾಣಬಹುದಾಗಿದೆ.
ಕೆಲವೊಮ್ಮೆ ಯಕ್ಷಗಾನದ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಲಿಪ ಭಾಗವತರ ಹೆಸರು (ನಾರಾಯಣ ಭಾಗವತರು, ಶಿವಶಂಕರ್ ಭಟ್, ಪ್ರಸಾದ್ ಭಟ್) ಹಾಕುವಾಗ ಹೆಸರಿನ ಕೊನೆಗೆ ಬಲಿಪ ಎಂದು ಮುದ್ರಿತವಾಗಿರುತ್ತದೆ. ಇದು ಸರಿಯಾದ ಕ್ರಮವಲ್ಲ.
ಯಾಕೆಂದರೆ ವ್ಯಕ್ತಿಗೆ ದೊರೆತ ಬಿರುದು ಅದು ಆಗಿದ್ದರೆ ಅದನ್ನು ಹೆಸರಿನ ಮೊದಲೇ ಬಳಸಬೇಕು. ಉದಾಹರಣೆಗೆ ಭಾರತರತ್ನ, ಪದ್ಮಶ್ರೀ, ಹಾಸ್ಯರತ್ನ, ಯಕ್ಷ ರತ್ನ, ಹಾಸ್ಯಪಟು ಇತ್ಯಾದಿ ಬಿರುದುಗಳು ಇರುವ ವ್ಯಕ್ತಿಗಳ ಹೆಸರಿನ ಮೊದಲಲ್ಲಿ ಉಲ್ಲೇಖವಾಗಿರುತ್ತದೆ.
ಇಲ್ಲಿಯೂ ಕೂಡ ಬಲಿಪ ಎಂಬುದು ಬಲಿಪ ನಾರಾಯಣ ಭಾಗವತರ ಪೂರ್ವಜರಿಗೆ ಲಭಿಸಿದ ಬಿರುದೇ ಹೊರತು ಅದು ಜಾತಿ, ಕುಲ ಸೂಚಕವಲ್ಲ. ಆದುದರಿಂದ ಬಲಿಪ ಪರಂಪರೆಯ ವ್ಯಕ್ತಿಗಳ (ಪ್ರಸಾದ್ ಭಟ್, ಶಿವಶಂಕರ್ ಭಟ್ ಇತ್ಯಾದಿ) ಹೆಸರುಗಳನ್ನು ಮುದ್ರಿಸುವಾಗ ಹೆಸರಿನ ಮೊದಲಲ್ಲಿ ಹಾಕುವುದು ಸರಿಯಾದ ಕ್ರಮವಾಗುತ್ತದೆ. ಉದಾಹರಣೆಗೆ: ಬಲಿಪ ಪ್ರಸಾದ ಭಟ್, ಈ ರೀತಿಯಾಗಿ.
ಈ ವಿಚಾರವಾಗಿ ಬಲಿಪ ಪ್ರಸಾದ ಭಟ್ ಭಾಗವತರಲ್ಲಿ ಚರ್ಚಿಸಿ ಈ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
Tags:
ಲೇಖನ