ಈ ಮಾಹಿತಿಯನ್ನು ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲ ಕಲಾವಿದರಿಗೂ ತಿಳಿಸಿ, ಸಾಧ್ಯವಾದರೆ ಅರ್ಜಿ ಭರ್ತಿ ಮಾಡಲು ನೆರವಾಗಿ
ಕೋವಿಡ್ ಕಾಲದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಲಾವಿದರಿಗೆ ಕರ್ನಾಟಕ ಸರ್ಕಾರವು ಸಹಾಯಧನ ನೀಡುತ್ತಿದೆ. 3 ಸಾವಿರ ರೂ. ಆಗಿದ್ದರೂ, ತಾತ್ಕಾಲಿಕ ಸಂಕಷ್ಟ ನಿವಾರಣೆಗಾಗಿ ಇದನ್ನು ಪಡೆಯುವುದು ಸೂಕ್ತ. ಎಲ್ಲ ಕಲಾ ಪ್ರಕಾರಗಳಿಂದ ಅರ್ಜಿದಾರರ ಸಂಖ್ಯೆ ಹೆಚ್ಚು ಬರುವ ಸಾಧ್ಯತೆಗಳಿರುವುದರಿಂದ ಇಂದೇ, ನಿಮ್ಮ ಅಥವಾ ಆತ್ಮೀಯರ ಮೊಬೈಲ್ ಇಲ್ಲವೇ ಕಂಪ್ಯೂಟರ್ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಿ. ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಇದ್ದರೆ ನೋಂದಾಯಿಸಿಕೊಳ್ಳಬಹುದು. ಅದರ ಹಂತ ಹಂತವಾದ ಮಾಹಿತಿ ಈ ಕೆಳಗಿದೆ. ನೀವೂ ಉಪಯೋಗಿಸಿ, ಸಂಕಷ್ಟದಲ್ಲಿರುವ ಎಲ್ಲ ಕಲಾವಿದರಿಗೂ ತಿಳಿಸಿಕೊಡಿ. ನೆರವಾಗಿ.
ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಇಂದು (ಮೇ 28) ತೆರೆದಿದೆ. ಜೂ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆಯಾದರೂ, ಸಾಧ್ಯವಾದಷ್ಟು ಬೇಗನೇ ಕಲಾವಿದರು ಅರ್ಜಿ ಸಲ್ಲಿಸುವುದು ಒಳಿತು.
ಗಮನಿಸಿ:
35 ವರ್ಷ ಮೇಲ್ಪಟ್ಟ, ವೃತ್ತಿನಿರತರಾಗಿ ಕನಿಷ್ಠ 10 ವರ್ಷ ಕಲಾಸೇವೆ ಮಾಡಿರುವವರು ಮತ್ತು ಮಾಸಾಶನ ಪಡೆಯದೇ ಇರುವವರು ಈ ಧನ ಸಹಾಯಕ್ಕೆ ಅರ್ಹರು. ಸರ್ಕಾರಿ ನೌಕರರಾಗಿರಬಾರದು ಅಥವಾ 2020-21ನೇ ಸಾಲಿನಲ್ಲಿ ಸಾಮಾನ್ಯ, ವಿಶೇಷ, ಗಿರಿಜನ ಉಪಯೋಜನೆಯಡಿ ಧನ ಸಹಾಯ ಪಡೆದಿರಬಾರದು. ಅಂಥವರು ಮಾತ್ರ ಅರ್ಜಿ ಸಲ್ಲಿಸಬಹುದು.
ರಾಜ್ಯದ 16,095 ಬಡ ಕಲಾವಿದರಿಗಾಗಿ ತಲಾ 3 ಸಾವಿರ ರೂ.ನಂತೆ ಒಟ್ಟು 4.82 ಕೋಟಿ ಹಣವನ್ನು ವಿತರಿಸಲಾಗುತ್ತದೆ.
ಎಷ್ಟು ಸಾಧ್ಯವೋ ಅಷ್ಟು ಬೇಗನೇ ಅರ್ಜಿ ಸಲ್ಲಿಸಿದರೆ ಈ ನೆರವು ಪಡೆಯಬಹುದಾಗಿದೆ. ಯಾಕೆಂದರೆ, ಸರ್ಕಾರವೇ ತಿಳಿಸಿರುವಂತೆ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ.
ಹೇಗೆ ಅರ್ಜಿ ಸಲ್ಲಿಸುವುದು? ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಮಾಹಿತಿ.
ಮೊದಲು ಸೇವಾ ಸಿಂಧುವಿನ ಈ ಲಿಂಕ್ ಕ್ಲಿಕ್ ಮಾಡಿ. ನೋಂದಣಿಯಾಗಿರದಿದ್ದರೆ ನೋಂದಾಯಿಸಿಕೊಳ್ಳಬೇಕು. Apply For Service ಎಂಬ ಬಾಕ್ಸ್‌ನ ಕೆಳಗೆ, New User? Register Here ಎಂಬ ಲಿಂಕ್ ಕ್ಲಿಕ್ ಮಾಡಿ.
ಆಗ ಒಂದು ಪ್ರತ್ಯೇಕ ವಿಂಡೋ ಪಾಪ್-ಅಪ್ ಆಗುತ್ತದೆ. ಅದು ಡಿಜಿ ಲಾಕರ್ ಲಿಂಕ್. ಅದರಲ್ಲಿ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆ ನಮೂದಿಸಿ.
ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು ಪಾಸ್‌ವರ್ಡ್ (ಒಟಿಪಿ) ಬರುತ್ತದೆ. ಮೊಬೈಲ್ ನಂಬರ್ ಅಥವಾ ಇಮೇಲ್ ವಿಳಾಸದೊಂದಿಗೆ ರಿಜಿಸ್ಟರ್ ಮಾಡಿಕೊಳ್ಳಿ. ಪಾಸ್‌ವರ್ಡನ್ನು ನೀವೇ ಸೆಟ್ ಮಾಡಿಕೊಳ್ಳುವ ಆಯ್ಕೆ ಇರುತ್ತದೆ.
ನಂತರ ಅದೇ ವೆಬ್‌ಸೈಟಿಗೆ ಹೋಗಿ ಪುನಃ Apply For Service ಎಂದಿರುವಲ್ಲಿ ಇಮೇಲ್ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಹಾಕಿ. ಇಮೇಲ್ ವಿಳಾಸ ಹಾಕಿದರೆ ಮೊದಲೇ ನಿಗದಿಪಡಿಸಿರುವ ಪಾಸ್‌ವರ್ಡನ್ನು ದಾಖಲಿಸಬಹುದು. ಇಲ್ಲವೇ ಮೊಬೈಲ್‌ಗೆ ಬರುವ ಒಟಿಪಿ ಪಾಸ್‌ವರ್ಡ್ ನಮೂದಿಸಬಹುದು.
ನಂತರ ಅಲ್ಲಿ ಕಾಣಿಸುವ ಅಂಕಿಗಳನ್ನು (Word Verification) ಪಕ್ಕದ ಬಾಕ್ಸ್‌ನಲ್ಲಿ ಭರ್ತಿ ಮಾಡಿ.
Submit ಬಟನ್ ಕ್ಲಿಕ್ ಮಾಡಿ.
ಬಳಿಕ (ಮೇಲಿನ) ಚಿತ್ರದಲ್ಲಿ ತೋರಿಸಿರುವಂತೆ 4 ಹಂತಗಳನ್ನು ಅನುಸರಿಸಿ. ಕಾಣಿಸಿಕೊಳ್ಳುವ ಪುಟದ ಎಡಭಾಗದಲ್ಲಿ Apply for Services ಎಂದಿರುವುದನ್ನು ಕ್ಲಿಕ್ ಮಾಡಿ, ಕೆಳಗೆ View All available Services ಎಂಬುದನ್ನು ಕ್ಲಿಕ್ ಮಾಡಿ.
ಇಲ್ಲಿ ನೂರಾರು ಸೇವೆಗಳ ಪಟ್ಟಿ ಬರುತ್ತದೆ. ಸುಲಭವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಗದಿತ ಅರ್ಜಿಯನ್ನು ಪತ್ತೆ ಮಾಡಲು, ಬಲಭಾಗದಲ್ಲಿರುವ ಬಾಕ್ಸ್‌ನಲ್ಲಿ Kannada & Culture ಅಂತ ಟೈಪ್ ಮಾಡಿ ಎಂಟರ್ ಕೊಡಿ. ಆಗ ಕಾಣಿಸುವ ಪುಟದಲ್ಲಿ 6ನೇ ಆಯ್ಕೆ (ಕೆಂಪಕ್ಷರದಲ್ಲಿ ಹಂತ 4) ಕ್ಲಿಕ್ ಮಾಡಿ, ಅಲ್ಲಿ ಕೇಳಿದ ಎಲ್ಲ ವಿವರಗಳನ್ನು ಭರ್ತಿ ಮಾಡಿ.
ಕೊನೆಯಲ್ಲಿ ಪುನಃ ಕಾಣಿಸಿಕೊಳ್ಳುವ ಅಂಕಿಗಳನ್ನು ಪಕ್ಕದ ಬಾಕ್ಸ್‌ನಲ್ಲಿ (Word Verification) ನಮೂದಿಸಿ Submit ಅಂತ ಬಟನ್ ಒತ್ತಿ.
ಪೂರ್ತಿ ವಿವರಗಳನ್ನು ಆಮೇಲೆ ಭರ್ತಿ ಮಾಡುವಿರಿ ಎಂದಾದರೆ, Draft ಎಂಬ ಕೆಂಪು ಬಟನ್ ಒತ್ತಿಬಿಡಿ. ಮರಳಿ ಲಾಗಿನ್ ಆದ ಬಳಿಕ, ಉಳಿದೆಲ್ಲ ವಿವರಗಳನ್ನು ಭರ್ತಿ ಮಾಡಬಹುದು.
ಏನಾದರೂ ಸಮಸ್ಯೆಗಳಿದ್ದರೆ, ದ.ಕ. ಜಿಲ್ಲಾಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯ ಅಧಿಕಾರಿ 8861632030 ಅಥವಾ ಸಹಾಯಕ 7411345334 ಅವರಿಗೆ ಸಹಾಯಕ್ಕಾಗಿ ವಿನಂತಿಸಿಕೊಳ್ಳಿ.
ಯಾವುದೇ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕಾಗಿರುವುದರಿಂದ ಹೀಗೆ ಮಾಡಿದರೆ ಕಲಾವಿದರಿಗೆ ಅನುಕೂಲ. ಬೇಗನೇ ಕೆಲಸ ಆಗುತ್ತದೆ. ಗ್ರಾಮೀಣ ಭಾಗದಲ್ಲಿರುವವರು ತಮ್ಮೂರಿನ ಸೇವಾ ಸಿಂಧು ಕಚೇರಿಗಳ ಮೂಲಕ ಇದನ್ನು ಮಾಡಿಸಿಕೊಳ್ಳಬಹುದು. ಕಲಾವಿದರು ತಮ್ಮ ಪರಿಚಯಸ್ಥರ ಸಹಾಯವನ್ನೂ ಕೇಳಬಹುದು.
ಈ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ ಸಹಾಯ / ಮಾಹಿತಿಗೆ ಹೆಲ್ಪ್ ಡೆಸ್ಕ್‌ಗೆ (8088304855/ 6361799796 /9380204364 / 9380206704 ) ಕರೆಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಸೂಚಿಸಿದೆ.
ಕಲಾವಿದರ ಸಂಕಷ್ಟ ಒಂದಿನಿತಾದರೂ ದೂರವಾಗಲಿ ಎಂಬುದು Yakshagana.in ನ ಬಯಕೆ.
ಯಕ್ಷಗಾನಂ ಗೆಲ್ಗೆ | ಯಕ್ಷಗಾನಂ ಬಾಳ್ಗೆ
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಸುದ್ದಿ