ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸಾವಿರಾರು ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಂ ಗ್ರೂಪುಗಳಿವೆ. ಅವುಗಳಲ್ಲಿ ಸಕ್ರಿಯವಾಗಿ, ಕ್ರಿಯಾಶೀಲವಾಗಿ ಇರುವವು ಕೆಲವೇ ಕೆಲವು. ಅಂಥವುಗಳಲ್ಲೊಂದು ಇತ್ತೀಚೆಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು -ಇದರ ವತಿಯಿಂದ ನಡೆಯುತ್ತಿರುವ 'ಯಕ್ಷಾನುಗ್ರಹ' ಬಳಗ.
ಈ ಬಳಗದಲ್ಲಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ, ಯಕ್ಷಗಾನದ ಇಂದಿನ ವೈಭವೋಪೇತ ಸ್ಥಿತಿಗೆ ಕಾರಣರಾಗಿ ಕೀರ್ತಿಶೇಷರಾಗಿರುವ ಮಹಾನ್ ಕಲಾವಿದರ ಸ್ಮರಣಾರ್ಥ ಲೇಖನಮಾಲೆಯು ಪ್ರತಿದಿನವೂ 'ಮರೆಯಲಾಗದ ಮಹಾನುಭಾವರು' ಶೀರ್ಷಿಕೆಯಲ್ಲಿ  ಪ್ರಕಟವಾಗುತ್ತಿದೆ. ಬಳಗದ ಉಳಿದ ಸದಸ್ಯರು ತಮಗೆ ತಿಳಿದ ಮಾಹಿತಿಯನ್ನು ಹಂಚಿಕೊಂಡು, ತಿಳಿಯದೇ ಇರುವುದರ ಅರಿವು ಪಡೆದುದರ ಬಗ್ಗೆ ಖುಷಿಯನ್ನೂ ಹಂಚಿಕೊಳ್ಳುತ್ತಾರೆ. 
ಇಷ್ಟೇ ಅಲ್ಲದೆ, ಯಕ್ಷಗಾನದ ಸ್ಥಿತಿಗತಿ, ಆಳ ಅಗಲ, ಕಲಾವಿದರ ಕೊಡುಗೆ ಕುರಿತಾಗಿಯೂ ಚರ್ಚೆಯೊಂದಿಗೆ, ಯಕ್ಷಗಾನ ಕಲಾವಿದರ ಫೋಟೋ, ವೀಡಿಯೊಗಳು ಕೂಡ ಹಂಚಿಕೊಳ್ಳಲಾಗುತ್ತಿದೆ. ಲಾಕ್ಡೌನ್ ಕಾಲದಲ್ಲಿ ಈ ಗುಂಪು ಸಮಯದ ಸದುಪಯೋಗಪಡಿಸಿಕೊಳ್ಳುತ್ತಿದೆ.
ಜೂ.18ರ ಗುರುವಾರ 'ಮರೆಯಲಾಗದ ಮಹಾನುಭಾವರು' ಸರಣಿಯಲ್ಲಿ ಯಕ್ಷಗಾನ ಹಿರಿಯ ಕಲಾವಿದ, ಕೀರ್ತಿಶೇಷ ಮಾಂಬಾಡಿ ನಾರಾಯಣ ಭಾಗವತ ಕುರಿತು ಲೇಖನ ಪ್ರಕಟವಾಗುತ್ತಿದೆ.
ಈ ಹಂತದಲ್ಲಿ ಅರ್ಥದಾರಿ, ಪ್ರಸಂಗಕರ್ತ, ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಶ್ರೀಧರ ಡಿ.ಎಸ್. ಅವರೊಂದು ಕುತೂಹಲದ ಮಾತಿಗೆ ಮುಂದಾದರು.
"ನನಗೊಂದು ಕುತೂಹಲ. ಹೆಸರಾಂತ ಭಾಗವತರು ಬಹಳ ಮಂದಿ ನಾರಾಯಣ ಭಾಗವತರು!
ಬಲಿಪ ನಾರಾಯಣ ಭಾಗವತರು-ಹಿರಿಯ
ಬಲಿಪ ನಾರಾಯಣ ಭಾಗವತರು- ಕಿರಿಯ
ಉಪ್ಪೂರುನಾರಾಯಣ ಭಾಗವತರು
ನೆಬ್ಬೂರು ನಾರಾಯಣ ಭಾಗವತರು
ಮಾಂಬಾಡಿ ನಾರಾಯಣ ಭಾಗವತರು
ಬನ್ನೂರು ನಾರಾಯಣ ಭಾಗವತರು.
 ಹೀಗೆ ಇನ್ನೂ ಹಲವರಿದ್ದಾರೆ. ನಾರಾಯಣ ಶಬರಾಯರು....
ವಿಶೇಷವಲ್ಲವೆ?"
ಇದಕ್ಕೆ ಕಾರಣವಾದದ್ದು, ಶ್ರೀಧರ ಡಿ.ಎಸ್. ಅವರ ಮನೆಗೆ ಕೆಲಸಕ್ಕೆ ಬಂದವನ ಹೆಸರು ಕೂಡ ನಾರಾಯಣ ಎಂಬುದಾಗಿತ್ತಂತೆ. ಇದು ನೆನಪಾಗಿ ಅವರು ತಮ್ಮ ಮನಸ್ಸಿನಲ್ಲಿದುದನ್ನು ಪ್ರಸ್ತಾಪಿಸಿದರು.
ಅಷ್ಟಲ್ಲದೆ, ಮಹಾಭಾರತದ ಶ್ರವಣ ತೊಡಗುವುದೇ "ನಾರಾಯಣಂ ನಮಸ್ಕೃತ್ಯ...' ಎನ್ನುವಲ್ಲಿಂದ ಅಂತಲೂ ನೆನಪಿಸಿದಾಗ ಬಳಗದ ಸದಸ್ಯರಿಗೂ ನಾರಾಯಣ ನಾಮಸ್ಮರಣೆ ಮಾಡಿದ ಖುಷಿ. ಶ್ರೀಧರ ಅವರು ಪೋಸ್ಟ್ ಹಾಕಿದ್ದೇ ತಡ, ಗ್ರೂಪಿನ ಎಲ್ಲ ಸದಸ್ಯರೂ ಸಕ್ರಿಯರಾಗಿ, ನಾರಾಯಣ ಹೆಸರಿನ ಯಕ್ಷಗಾನ ಕಲಾವಿದರನ್ನು ನೆನಪಿಸಿಕೊಂಡರು.
ಮೊದಲೆಲ್ಲಾ ದೇವರ ಹೆಸರುಗಳನ್ನೇ ಮಕ್ಕಳಿಗೆ ಇರಿಸುತ್ತಿದ್ದರು. ಇಲ್ಲವಾದರೆ ಹಿರಿಯರ ಹೆಸರನ್ನು ಇರಿಸುತ್ತಿದ್ದರು. ಅಜ್ಜನ ಹೆಸರನ್ನು ಮೊಮ್ಮಗನಿಗೆ ಇರಿಸುವ ಸಂಪ್ರದಾಯ ಇತ್ತು. ಇದರಿಂದ ದೇವರ ಮತ್ತು ಹಿರಿಯರ ಸ್ಮರಣೆ ಮಾಡಿದ ಹಾಗಾಗುತ್ತದೆ ಎಂಬುದರಿಂದ ಸಂಪ್ರದಾಯವು ಬಂದಿರಬಹುದೇ? ಹಾಗಾಗಿ ನಾರಾಯಣ ಗೋವಿಂದ ಪರಮೇಶ್ವರ ಗಣಪತಿ ಕೇಶವ... ಹೀಗೆ ದೇವರುಗಳ ಹೆಸರಿನ ಕಲಾವಿದರನ್ನೇ ನಾವು ಕಂಡಿದ್ದೇವೆ. ಪ್ರಸ್ತುತ ಹೊಸ ಹೊಸ ನಾಮಗಳನ್ನು ನಾವು ಗಮನಿಸುತ್ತಿದ್ದೇವೆ - ಎಂದು ಕಲಾವಿದ ರವಿಶಂಕರ ವಳಕ್ಕುಂಜ ಅವರು ಅಭಿಪ್ರಾಯಪಟ್ಟರು.
ಯಕ್ಷಗಾನವೆಂಬ ಕಲಾ ಸಾಗರವನ್ನು ಸುಂದರವಾಗಿಸಿ ಉಳಿಸಿದ, ಉಳಿಸುತ್ತಿರುವ, ಬೆಳೆಸುತ್ತಿರುವ ಪ್ರಮುಖ ವೃತ್ತಿ ಕಲಾವಿದರು, ಹವ್ಯಾಸಿಗಳ ಪಟ್ಟಿಯು 'ಯಕ್ಷಾನುಗ್ರಹ' ವಾಟ್ಸ್ಆ್ಯಪ್ ಬಳಗದ ಸಹಕಾರದಲ್ಲಿ ಈ ರೀತಿಯಾಗಿ ರೂಪುಗೊಂಡಿತು. ಇದಕ್ಕೆ ಯಕ್ಷಗಾನದ ಮತ್ತಷ್ಟು ವಾಟ್ಸ್ಆ್ಯಪ್ ಗುಂಪುಗಳ ಸದಸ್ಯರೂ ಧ್ವನಿಗೂಡಿಸಿದರು.
- ಗದುಗಿನ ನಾರಣಪ್ಪ (ಕುಮಾರವ್ಯಾಸನ ಮೂಲ ಹೆಸರು)
 - ನಂದಳಿಕೆ ಲಕ್ಷ್ಮೀನಾರಾಯಣಯ್ಯ (ಮುದ್ದಣ)
 - ಬಲಿಪ ನಾರಾಯಣ ಭಾಗವತರು- ಹಿರಿಯ
 - ಬಲಿಪ ನಾರಾಯಣ ಭಾಗವತರು - ಕಿರಿಯ
 - ಉಪ್ಪೂರು ನಾರಾಯಣ ಭಾಗವತರು
 - ನೆಬ್ಬೂರು ನಾರಾಯಣ ಭಾಗವತರು
 - ಮಾಂಬಾಡಿ ನಾರಾಯಣ ಭಾಗವತರು
 - ಬನ್ನೂರು ನಾರಾಯಣ ಭಾಗವತರು
 - ಕೊಕ್ಕಡ ನಾರಾಯಣ ಶಬರಾಯರು - ಭಾಗವತರು
 - ಪದ್ಯಾಣರ ಅಜ್ಜ, ಪುಟ್ಟುನಾರಾಯಣ ಭಾಗವತರು!
 - ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ
 - ಸತ್ಯನಾರಾಯಣ ಪುಣಿಚಿತ್ತಾಯರು
 - ಸರಪಾಡಿ ಶಂಕರ ನಾರಾಯಣ ಕಾರಂತರು
 - ಪೆರುವೋಡಿ ನಾರಾಯಣ ಭಟ್ - ಹಾಸ್ಯಗಾರರು
 - ಪೆರುವಾಯಿ ನಾರಾಯಣ ಶೆಟ್ಟಿ - ವೇಷಧಾರಿ
 - ಪೆರುವಾಯಿ ನಾರಾಯಣ ಭಟ್ - ಮದ್ದಳೆಗಾರರು
 - ದಡ್ಡಿ ನಾರಾಯಣ
 - ಉಜಿರೆ ನಾರಾಯಣ ಹಾಸ್ಯಗಾರ
 - ಅರುವ ನಾರಾಯಣ ಶೆಟ್ಟಿ
 - ಪೂಕಳ ಲಕ್ಷ್ಮೀನಾರಾಯಣ ಭಟ್
 - ಎಂ. ಲಕ್ಷ್ಮೀನಾರಾಯಣ (ಎಂ.ಎಲ್.) ಸಾಮಗ
 - ಶಂಕರನಾರಾಯಣ ಸಾಮಗ
 - ಪುತ್ತೂರು ನಾರಾಯಣ ಹೆಗ್ಡೆ
 - ಶಿಮಂತೂರು ನಾರಾಯಣ ಶೆಟ್ಟರು - ಛಾಂದಸ ಕವಿ, ಪ್ರಸಂಗಕರ್ತ
 - ಕೊಳ್ತಿಗೆ ನಾರಾಯಣ ಗೌಡ
 - ಗೋಡೆ ನಾರಾಯಣ ಹೆಗಡೆ
 - ಕಡಬ ನಾರಾಯಣ ಆಚಾರ್ಯ
 - ಉಳ್ಳೂರು ನಾರಾಯಣ
 - ಪದ್ಯಾಣ ಶಂಕರನಾರಾಯಣ ಭಟ್
 - ವೇಣೂರು ನಾರಾಯಣ
 - ಕಿಲ್ಲೆ ನಾರಾಯಣ ಶಾಸ್ತ್ರಿ ಗಳು
 - ಪೊಳಲಿ ನಾರಾಯಣ ಶಾಸ್ತ್ರಿಗಳು
 - ಸರಪಾಡಿ ಶಂಕರನಾರಾಯಣ ಕಾರಂತರು
 - ನಾರಾಯಣ ಪಾಟಾಳಿ ಪಡುಮಲೆ
 - ಹರಿನಾರಾಯಣ ಬೈಪಾಡಿತ್ತಾಯ
 - ಹರಿನಾರಾಯಣ ಎಡನೀರು
 - ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ
 - ನಯನ ಕುಮಾರ್ ಮೂಲ ಹೆಸರು ನಾರಾಯಣ ಭಟ್
 - ಮೂಡ್ಕಣಿ ನಾರಾಯಣ ಹೆಗಡೆ
 - ಹಾರಾಡಿ ನಾರಾಯಣ ಗಾಣಿಗ
 - ಮಧೂರು ನಾರಾಯಣ ಹಾಸ್ಯಗಾರ
 - ನಾರಾಯಣ ಯಾಜಿ ಸಾಲೆಬೈಲ್
 - ಅಡ್ಕಸ್ಥಳ ನಾರಾಯಣ ಶೆಟ್ಟಿ
 - ಶಿರಂಕಲ್ಲು ನಾರಾಯಣ ಭಟ್ - ಮದ್ದಳೆಗಾರರು
 - ವಂಡ್ಸೆ ನಾರಾಯಣ ಗಾಣಿಗ
 - ಮಟಪಾಡಿ ನಾರಾಯಣ ನಾಯ್ಕ (ವೀರಭದ್ರ ನಾಯ್ಕರ ತಂದೆ)
 - ಕೆಸವಿನಮನೆ ನಾರಾಯಣ ಹೆಗಡೆ
 - ನೆಡ್ಲೆ ಗುರಿಕಾರ ನಾರಾಯಣ ಭಟ್
 - ಪರಪು ನಾರಾಯಣ ಶೆಟ್ಟಿ (ಹವ್ಯಾ,ಸಿ ಕಲಾವಿದರು)
 - ಜಿ . ನಾರಾಯಣ ರಾವ್
 - ಸಕ್ಕಟ್ಟು ಲಕ್ಷ್ಮೀನಾರಾಯಣ
 - ಬೋಳಾರ ನಾರಾಯಣ ಶೆಟ್ಟಿ
 - ಕಿನ್ನೀರು ನಾರಾಯಣ ಹೆಗಡೆ (ಮದ್ದಲೆಗಾರರು)
 - ಬಾಸಮೆ ನಾರಾಯಣ ಭಟ್ (ಹವ್ಯಾಸಿ)
 - ಕರ್ಕಿ ನಾರಾಯಣ ಹಾಸ್ಯಗಾರರು
 - ಕೂಡ್ಲು ನಾರಾಯಣ ಬಲ್ಯಾಯರು
 - ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರು (ಮುನಿಯೂರು ನಾರಾಯಣ)
 - ಎಡನೀರು ನಾರಾಯಣ ಕೆದ್ಲಾಯರು
 - ನಾರಾಯಣ ದಶಾವತಾರ
 - ಹೊಸಹಿತ್ತಿಲು ನಾರಾಯಣ ಭಟ್ (ಹುಲಿಕುಞ್ಞಿ ನಾರಾಯಣ ಭಟ್) - ಮಹಾಲಿಂಗ ಭಟ್ಟರ ಅಣ್ಣ
 - ಕೀರಿಕ್ಕಾಡು ಸಮೀಪದ ನಾರಾಯಣ ಭಟ್ (ಅತಿಕಾಯ ನಾರಾಯಣ ಭಟ್)
 - ಕೋಳ್ಯೂರು ನಾರಾಯಣ ಭಟ್
 - ಪೆರುವೋಡಿ ನಾರಾಯಣ ಭಟ್ - ಪುಂಡು ವೇಷಧಾರಿ
 - ಸುಳುಗೋಡು ನಾರಾಯಣ ಹಾಸ್ಯಗಾರ
 - ನಿಡ್ಲೆ ನಾರಾಯಣ ಭಟ್
 - ಅಡೂರು ಲಕ್ಷ್ಮೀನಾರಾಯಣ ರಾವ್
 - ಬೆಳ್ಳಿಗೆ ನಾರಾಯಣ ಮಣಿಯಾಣಿ
 - ನಾ.ಕಾರಂತ (ನಾರಾಯಣ ಕಾರಂತ) ಪೆರಾಜೆ
 - ಪಿಲಿತ್ತಡ್ಕ ನಾರಾಯಣ ರೈ (ಹವ್ಯಾಸಿ ಭಾಗವತರು)
 - ಕಟೀಲು ಹರಿನಾರಾಯಣ ದಾಸ ಆಸ್ರಣ್ಣರು
 - ಮೂಲಡ್ಕ ನಾರಾಯಣ
 - ಮಚ್ಚಿನ ನಾರಾಯಣ
 - ಅಜ್ಜಾವರ ಲಕ್ಷ್ಮೀನಾರಾಯಣಯ್ಯ, ಕಲ್ಲಕಟ್ಟ-ಮಾನ್ಯ
 - ದೇಲಂಪಾಡಿ ನಾರಾಯಣ ರೈ
 - ಕೆ.ವಿ. ನಾರಾಯಣ ರೈ
 - ಮಟಪಾಡಿ ನಾರಾಯಣ ನಾಯ್ಕ
 - ನಾರಾಯಣ ಭಟ್ಟ ಯಲ್ಲಾಪುರ
 - ಮುದಿಯಾರು ನಾರಾಯಣ ರೈ (ಕೀರಿಕ್ಕಾಡು ವಿಷ್ಣು ಮಾಸ್ತರ್ ಶಿಷ್ಯ)
 - ವೇಣೂರು ನಾರಾಯಣ ಕುಲಾಲ್
 - ಅಗಲ್ಪಾಡಿ ನಾರಾಯಣ ಮಣಿಯಾಣಿ
 - ಪೇಜಾವರ ನಾರಾಯಣ
 - ವಗ್ಗ ನಾರಾಯಣ ಭಟ್
 - ನಾರಾಯಣ ಸುವರ್ಣ
 - ಎನ್.ಜಿ.ಹೆಗಡೆ (ನಾರಾಯಣ ಗೋಪಾಲ ಹೆಗಡೆ)
 - ಬೊಳ್ಳೂರು ನಾರಾಯಣ ಶೆಟ್ಟಿ
 - ಮರೂರು ನಾರಾಯಣ ಹೆಬ್ಬಾರ್
 - ಮಣ್ಣಾಪು ನಾರಾಯಣ ಶೆಟ್ಟಿ, ಹರೀಶ್ ಶೆಟ್ಟಿ ಮಣ್ಣಾಪು ಅವರ ತಂದೆ, ಕಲಾವಿದ
 - ಕುಂಚಿನಡ್ಕ ನಾರಾಯಣ ಭಟ್, ಅರ್ಥದಾರಿ
 - ಮೂಜೂರು ನಾರಾಯಣ ಭಟ್, ಬೆಂಗಳೂರಿನ ಹವ್ಯಾಸಿ
 - ಕಲ್ಚಾರ್ ಲಕ್ಷ್ಮಿನಾರಾಯಣ ಭಟ್, ಬೆಂಗಳೂರಿನ ಹವ್ಯಾಸಿ ಕಲಾವಿದ
 - ಪಂಜಾಜೆ ಸೂರ್ಯನಾರಾಯಣ ಭಟ್
 - ಕಣಿಯೂರು ಸೂರ್ಯನಾರಾಯಣ ಭಟ್, ಭಾಗವತರು
 - ನಾರಾಯಣ ಭಿಡೆ, ಮದ್ದಳೆಗಾರರು, ಗೋರೆಯವರ ಗುರುಗಳು
 - ಉಳ್ಳೂರುನಾರಾಯಣ ನಾಯ್ಕ
 - ಚಿತ್ತೂರು ನಾರಾಯಣ ದೇವಾಡಿಗ
 - ವಳ್ತೂರು ನಾರಾಯಣ ಕುಲಾಲ
 - ಉಪ್ಪಂಗಳ ಶಂಕರನಾರಾಯಣ ಭಟ್
 - ಸಿರಿಬಾಗಿಲು ನಾರಾಯಣ ಶೆಟ್ಟಿ
 - ಕೆಮ್ಮಣ್ಣು ನಾರಾಯಣಪ್ಪಯ್ಯ (ನಾರ್ಣಪ್ಪಯ್ಯ)
 - ಕೊಳಂಬೆ ನಾರಾಯಣ
 - ಕೈರಂಗಳ ನಾರಾಯಣ ಹೊಳ್ಳರು
 - ಎಂ.ನಾರಾಯಣ ಚಂಬಲ್ತಿಮಾರ್
 - ನಾರಾಯಣ ಬಿಡುವಾಳ, ರಾಗಿಹಕ್ಲು, ಕುಂದಾಪುರ
 - ಶುಂಠಿ ಸತ್ಯನಾರಾಯಣ ಭಟ್
 - ಸತ್ಯನಾರಾಯಣ ಅಡಿಗ, ಮದ್ದಳೆ ವಾದಕರು (ಅಮೃತಾ ಅಡಿಗರ ತಂದೆ)
 - ನಾರಾಯಣ ಅಡಿಗ ಪರಕ್ಕಿಲ (ಕೂಡ್ಲು)
 - ನಾರಾಯಣ ನಾಯಕ್ ತೋಟಚಾವಡಿ, ಮರ್ಕಂಜ (ದಿವ್ಯಶ್ರೀನಾಯಕ್ ಅವರ ತಂದೆ)
 - ರುಸ್ತುಂ ನಾರಾಯಣ ಮಣಿಯಾಣಿ
 - ಮಾಟೆ ನಾರಾಯಣ (ಹವ್ಯಾಸಿ ಭಾಗವತರು)
 - ಮಾನ್ಯ ನಾರಾಯಣ
 - ಕೋಟೆ ನಾರಾಯಣ ಶೆಟ್ಟಿ
 - ಕೋಟಕುಂಜ ನಾರಾಯಣ ಶೆಟ್ಟಿ
 - ಎಸ್.ನಾರಾಯಣ ಮಾಸ್ಟರ್, ಬಾಯಾರು
 - ಕುಂಡಡ್ಕ ನಾರಾಯಣ ಗೋಖಲೆ
 - ನಾರಾಯಣ ಕನ್ನಡ, ಕಿನ್ನಿಗೋಳಿ
 - ನಾರಾಯಣ ಸಫಳಿಗ ಮುಂಡ್ಕೂರು (ಪ್ರಸಂಗಕರ್ತ, ಭಾಗವತ)
 - ನಾರಾಯಣ ಬಂಗೇರ
 - ಬನ್ನಂಜೆ ನಾರಾಯಣ (ಉಡುಪಿ, ಮೃದಂಗವಾದಕ)
 - ನಾರಾಯಣ ಎಂ. ಹೆಗಡೆ (ಕಲಾರಂಗದ ಜೊತೆ ಕಾರ್ಯದರ್ಶಿ, ಅರ್ಥಧಾರಿ)
 - ಮೇಲುಗಂಟಿಗೆ (ಸಂತೇಗುಳಿ, ಹೊಸಾಕುಳಿ) ನಾರಾಯಣ ಭಟ್ಟರು, ಅರ್ಥಧಾರಿ (ಇಡಗುಂಜಿ ಮೇಳದ ಮ್ಯಾನೇಜರ್ ಆಗಿದ್ದರು)
 - ಕಡಕೊಡು ನಾರಾಯಣ ಭಟ್
 - ಬೆಳ್ಳಾರೆ ಸೂರ್ಯನಾರಾಯಣ ಭಟ್ಟ ಕುಞ್ಞಿಹಿತ್ಲು - ಜಲಜಸಖ - ಪ್ರಸಂಗಕರ್ತ, ನಾಟಕಕಾರ
 - ಕೂಡ್ಲು ನಾರಾಯಣ ಭಟ್ (ಶೇಣಿಯವರ ಹಿರಿಯ ಪುತ್ರ)
 - ನಾರಾಯಣ ಶೆಟ್ಟಿಗಾರ್, ಕಿನ್ನಿಗೋಳಿ-ಗೋಳಿಜೋರ
 - ಪಟ್ಟಾಜೆ ನಾರಾಯಣ ಭಟ್
 - ಪೆಲತ್ತಡ್ಕ ನಾರಾಯಣ ಭಟ್ (ಹವ್ಯಾಸಿ ಅರ್ಥಧಾರಿ)
 - ನಾರಾಯಣ ರೈ ಸುಳ್ಯ
 - ಗೋಡೆಪಾಲು ನಾರಾಯಣ ಗಾಂವ್ಕರ್, ಕನಕಹಳ್ಳಿ
 - ನಾರಾಯಣ ಭಟ್ ತಾರಿಮಕ್ಕಿ
 - ನಾರಾಯಣ ರೈ ಮೂಡುಬಿದ್ರೆ
 - ವಿದ್ವಾನ್ ನಾರಾಯಣ ದೇಸಾಯಿ, ಮೈಸೂರು
 - ಬಳ್ಳಿ ನಾರಾಯಣ ಭಟ್
 - ನಾರಾಯಣ ಬಳ್ಳಕ್ಕುರಾಯ
 - ನಾರಾಯಣ ಇರುವೈಲು
 - ನಾರಾಯಣ ಶರ್ಮ ನೀರ್ಚಾಲು
 - ನಾರಾಯಣ ಕುಮಾರ್
 - ಪಂಜ ನಾರಾಯಣ ಭಟ್ (ಅರ್ಥಧಾರಿ)
 - ನಾರಾಯಣ ರಾವ್ ಹತ್ವಾರ್ (ಅರ್ಥಧಾರಿ, ಪ್ರಸಂಗಕರ್ತ - ಲೇಖಕ ಜೋಗಿ ಅವರ ಅಣ್ಣ)
 - ಮಾಳಕೋಡ ನಾರಾಯಣ - ಪ್ರಸಂಗಕರ್ತರು
 - ನಾರಾಯಣ ಶಂಕರ ಭಟ್ಟ ಬ್ರಹ್ಮೂರು - ಪ್ರಸಂಗಕರ್ತರು
 - ಎಂ.ಆರ್.ಲಕ್ಷ್ಮೀನಾರಾಯಣ - ಪ್ರಸಂಗಕರ್ತರು
 - ಶಂಕರನಾರಾಯಣ ಭಟ್ಟ - ಪ್ರಸಂಗಕರ್ತರು
 - ಎಸ್. ನಾರಾಯಣ ಮಂಗಳೂರು - ಪ್ರಸಂಗಕರ್ತರು
 - ಸೂರ್ಯನಾರಾಯಣ ಭಟ್ ಕೆ. - ಪ್ರಸಂಗಕರ್ತರು
 - ಸಿ.ಹೆಚ್.ಶಂಕರನಾರಾಯಣ ಭಟ್ (ಸರಸಕವಿ) - ಪ್ರಸಂಗಕರ್ತರು
 - ತೆಕ್ಕೆಕೆರೆ ಶಂಕರನಾರಾಯಣ ಜೋಷಿ - ಪ್ರಸಂಗಕರ್ತರು
 - ಅಜ್ಜನಗದ್ದೆ ಶಂಕರನಾರಾಯಣ
 - ಅಡ್ಡೂರು ನಾರಾಯಣಯ್ಯ
 - ಉಡುಪಿ ಲಕ್ಷ್ಮೀನಾರಾಯಣಾಚಾರ್ಯ
 - ಕಂದಾವರ ನಾರಾಯಣ ಶೆಟ್ಟಿಗಾರ
 - ಕಾಮೇಶ್ವರ ನಾರಾಯಣ ಮಾಸ್ಕೇರಿ (ಕಾಮೇಶ್ವರ ಮಾಸ್ತರ ಗೋಕರ್ಣ)
 - ಕಾಯರ್ಪಾಡಿ ಶಂಕರನಾರಾಯಣ ಭಟ್
 - ಕಾರಣಿಕ ಶಂಕರನಾರಾಯಣ ಭಟ್ಟ
 - ಕುತ್ಯಾಡಿ (ಕುರ್ಯಾಡಿ) ಶಂಕರನಾರಾಯಣ ಭಟ್ಟ
 - ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
 - ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ
 - ಕೊರ್ಗಿ ಲಕ್ಷ್ಮೀನಾರಾಯಣ ಉಪಾಧ್ಯಾಯ
 - ಕೋರೆ ನಾರಾಯಣ ಹೆಗಡೆ
 - ತಲ್ಪಚ್ಚೇರಿ ಸೂರ್ಯನಾರಾಯಣ ಕಲ್ಲೂರಾಯ
 - ನಾರಾಯಣ ಉಪಾಧ್ಯಾಯ ಬಿ.ಎ. ಬೀಜಾಡಿ
 - ನಾರಾಯಣ ಕವಿ
 - ನಾರಾಯಣ ನಾಗಪ್ಪ ಜೋಶಿ (ನಾ ನಾ ಜೋಶಿ)
 - ನಾರಾಯಣ ನಾಯಕ್ ಬಿ. ಸಚ್ಚೇರಿಪೇಟೆ
 - ನಾರಾಯಣ ಪಿ.ಶೆಟ್ಟಿ
 - ನಾರಾಯಣ ಫಡ್ಕೆ
 - ನಾರಾಯಣ ಮೊಯಿಲಿ ಪಡಂಗಡಿ
 - ನಾರಾಯಣ ರಾವ್ ಎ.ಎಸ್.
 - ನಾರಾಯಣ ರಾವ್ ಹೆಚ್. ಅರ್ತಿಲ
 - ನಾರಾಯಣ ಸುಬ್ಬಾ ಭಟ್ಟ
 - ನಾರಾಯಣ ಹೆಗಡೆ ಕೀಲಾರ
 - ನಾರಾಯಣಯ್ಯ
 - ನಾರಾಯಣಾಚಾರ್ಯ ಜಾತ
 - ನೀ.ನಾ. ಮಧ್ಯಸ್ಥ ಸಾಗರ (ನೀರ್ಚಾಲು ನಾರಾಯಣ ಮಧ್ಯಸ್ಥ)
 - ಮುಂಡೊಡಲ ನಾರಾಯಣ ಕವಿ
 - ಮುಚ್ಚೂರು ನಾರಾಯಣ ಭಟ್ಟ
 - ಮೊಳರಾನ ನಾರಾಯಣ ಭಟ್ಟ
 - ಶಂಕರನಾರಾಯಣ ಜೋಯಿಸ ಕೆಡಂಬಾಡಿ
 - ಶಂಕರನಾರಾಯಣ ಬೋರ್ಕರ್
 - ಶಂಕರನಾರಾಯಣ ಭಟ್ಟ ಮೂಡಾಜೆ
 - ಸಾಂಬ ನಾರಾಯಣ ಸಿದ್ದೇಶ್ವರ
 - ಸೂರ್ಯನಾರಾಯಣ ಭಟ್ಟ ವೈ.
 - ಸೂರ್ಯನಾರಾಯಣ ಭಟ್ಟ ಕಾಸರಗೋಡು
 - ಸೂರ್ಯನಾರಾಯಣ ರಾವ್ ಕಳಿಂಜೆ
 - ದಿ.ನಾರಾಯಣ ಆಚಾರ್ಯ ಗುರುವಾಯನಕೆರೆ - ಹವ್ಯಾಸಿ ಕಲಾವಿದರು
 - ಕೋಟೆ ನಾರಾಯಣ ರಾವ್ (ನಾಣು ಅಜ್ಜ) - ಭಾಗವತರು
 - ಕೋಟೆ ನಾರಾಯಣ ಭಟ್, ಬೊಳ್ಳೂರೋಡಿ
 - ಸೂರ್ಯನಾರಾಯಣ ಕಲ್ಲೂರಾಯ, ಅಡೂರು - ಸವ್ಯಸಾಚಿ
 - ಲಕ್ಷ್ಮೀನಾರಾಯಣ ಸಂಪ - ಬಡಗು ತಿಟ್ಟು ಹಿಮ್ಮೇಳವಾದಕರು
 - ಸೂರ್ಯನಾರಾಯಣ ಪದಕಣ್ಣಾಯ, ಬಾಯಾರು ಹಿಮ್ಮೇಳ-ನಾಟ್ಯ ಗುರು
 - ನಾರಾಯಣ ಅಭ್ಯಂಕರ್, ಬೂಡುಮುಗೇರು, ಅರಸಿನಮಕ್ಕಿ - ಹವ್ಯಾಸಿ ಕಲಾವಿದರು
 - ನಾರಾಯಣ ಬಳ್ಳಕ್ಕುರಾಯ (ಕುಬಣೂರು ಶ್ರೀಧರ ರಾಯರ ಭಾವ), ಹವ್ಯಾಸಿ ಮೃದಂಗವಾದಕ
 - ಕಳಿಯಾರು ನಾರಾಯಣ ಆಚಾರ್ಯ (ಸುಬ್ರಹ್ಮಣ್ಯ ಮೇಳದಲ್ಲಿದ್ದ ಭಾಗವತರು)
 - ಗಟ್ಟಿಗಾರು ನಾರಾಯಣ ಭಟ್ - ತಾಳಮದ್ದಳೆ ಅರ್ಥಧಾರಿ
 - ಎಚ್.ಬಿ.ಲಕ್ಷ್ಮೀನಾರಾಯಣ (ಎಚ್.ಬಿ.ಎಲ್) ರಾವ್
 - ಲಕ್ಷ್ಮೀನಾರಾಯಣ ಸಾಮಗರು (ಹಿರಿಯರು - ಶಂಕರನಾರಾಯಣ-ರಾಮದಾಸ ಸಾಮಗರ ತಂದೆ
 - ಹೊಸಬೆಟ್ಟು ಲಕ್ಷ್ಮೀನಾರಾಯಣ ರಾವ್
 - ಮೂಡೊಂಡಲ ನಾರಾಯಣ ಕವಿ
 - ನಾರಾಯಣ ಕಂಜರ್ಪಣೆ
 
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ

ಮುದಿಯಾರು ನಾರಾಯಣ ರೈ
ಪ್ರತ್ಯುತ್ತರಅಳಿಸಿನಾರಾಯಣ ಕುಲಾಲ್
ನಮಸ್ತೇ ಸರ್. ಇವರಿಬ್ಬರೂ ವೇಷಧಾರಿಗಳೋ ಅಥವಾ ಹಿಮ್ಮೇಳ ಕಲಾವಿದರೋ ಅಂತ ತಿಳಿಸುವಿರಾ? ನಾರಾಯಣ ಕುಲಾಲ್ ಅವರ ಊರು? ಇದು ಕೂಡ ಸೇರಿಸಬಹುದು.
ಅಳಿಸಿ