ಎಡನೀರು ಯಕ್ಷಗಾನ ಸಪ್ತಾಹ: ಅತಿಕಾಯ ಮೋಕ್ಷ ತಾಳಮದ್ದಳೆ ವಿಡಿಯೊ

ಬ್ರಹ್ಮೈಕ್ಯ ಶ್ರೀಶ್ರೀ ಕೇಶವಾನಂದ ಭಾರತಿ ಶ್ರೀಗಳ ಪ್ರಥಮ ಆರಾಧನ ಸ್ಮೃತಿ ಪ್ರಯುಕ್ತ ಎಡನೀರು ಮಠದಲ್ಲಿ ಜು.26ರಿಂದ ಆ.1, 2021ರವರೆಗೆ ಯಕ್ಷಗಾನ ಸಪ್ತಾಹ ನಡೆಯುತ್ತಿದೆ. ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ನೇತೃತ್ವದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮವು ಪ್ರಸಿದ್ಧರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಕೂಟ ನಡೆಯುತ್ತಿದೆ.

ಆರನೇ ದಿನವಾದ ಇಂದು, 31 ಜುಲೈ 2021 ಶನಿವಾರ, ಅತಿಕಾಯ ಮೋಕ್ಷ ತಾಳಮದ್ದಳೆ ಏರ್ಪಟ್ಟಿದ್ದು, ಲೈವ್ ವಿಡಿಯೊ ಇಲ್ಲಿದೆ:

ಹಿಮ್ಮೇಳ: ಕಾವ್ಯಶ್ರೀ ನಾಯಕ್ ಅಜೇರು, ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ.ಜನಾರ್ದನ ತೋಳ್ಪಾಡಿತ್ತಾಯ, ಶ್ರೀಪತಿ ನಾಯಕ್ ಅಜೇರು; ಮುಮ್ಮೇಳ: ಉಜಿರೆ ಅಶೋಕ ಭಟ್, ಸೇರಾಜೆ ಸೀತಾರಾಮ ಭಟ್, ಶೇಣಿ ವೇಣುಗೋಪಾಲ ಭಟ್, ಡಾ.ಗಾಳಿಮನೆ ವಿನಾಯಕ ಭಟ್, ಶ್ರೀಶ ಪಂಜಿತ್ತಡ್ಕ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು