ಕೊರೊನಾ ಕಾಲದಲ್ಲಿ ಯಕ್ಷಗಾನವು ಆನ್‌ಲೈನ್ ಹಾಗೂ ಸ್ಥಳೀಯ ಟಿವಿ ಚಾನೆಲ್‌ಗಳ ಮೂಲಕವೇ ಹೆಚ್ಚು ನಡೆಯುತ್ತಿದ್ದು, ಕಲಾವಿದರಿಗೂ ಅನುಕೂಲ. ಯಕ್ಷಗಾನ ಸಪ್ತಾಹದ ವಿವರ ಇಲ್ಲಿದೆ.
ಅಭಿನೇತ್ರಿ ಆರ್ಟ್ಸ್ ಟ್ರಸ್ಟ್ (ರಿ), ನೀಲ್ಕೋಡು ವತಿಯಿಂದ ಎಂ.ಪಿ.ಇ. ಸೊಸೈಟಿ, ಹೊನ್ನಾವರ - ಇದರ ಸಹಕಾರದಲ್ಲಿ ರಂಗಸಂಗ ಎಂಬ ರಂಗ ಮಹೋತ್ಸವ ಕಾರ್ಯಕ್ರಮವು 2021 ಜುಲೈ 23ರಿಂದ 29ರವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ 'ಕಣ್ಣಿ ಪ್ರಶಸ್ತಿ' ಪ್ರದಾನ, 'ಅಭಿನೇತ್ರಿ ಪ್ರಶಸ್ತಿ' ಪ್ರದಾನ ಹಾಗೂ ಯಕ್ಷಗಾನ ಮತ್ತು ತಾಳಮದ್ದಳೆಯ ರಸದೌತಣವು ಯಕ್ಷಗಾನ ಪ್ರಿಯರಿಗೆ ದೊರೆಯಲಿದೆ. ಇದನ್ನು ನೂತನ ಟಿವಿ ಹಾಗೂ ಯಕ್ಷ ಅಭಿನೇತ್ರಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿದಿನ ವೀಕ್ಷಿಸಬಹುದು.
ನಾಲ್ಕು ದಶಕಗಳಿಂದ ಯಕ್ಷರಂಗದಲ್ಲಿ ನಗುವನ್ನು ಚೆಲ್ಲುತ್ತಿರುವ ರಮೇಶ ಭಂಡಾರಿ ಮುರೂರು ಅವರಿಗೆ ದಿ.ಕಣ್ಣಿಮನೆ ಹೆಸರಿನಲ್ಲಿ 'ಕಣ್ಣಿ ಪ್ರಶಸ್ತಿ' ನೀಡಿ ಗೌರವಿಸಲಾಗುತ್ತದೆ. ಅದೇ ರೀತಿ, ಸುಮಾರು ಐದು ದಶಕಗಳಿಂದ ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಸ್ತ್ರೀವೇಷಧಾರಿಯಾಗಿ ಸೇವೆ ಸಲ್ಲಿಸಿ ಜನಮನ ಗೆದ್ದಿರುವ ಭಾಸ್ಕರ ಜೋಶಿ ಶಿರಳಗಿ ಅವರಿಗೆ 'ಅಭಿನೇತ್ರಿ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕಾರ್ಯಕ್ರಮಗಳ ವಿವರ ಇಂತಿದೆ
ಜು. 23 ಶುಕ್ರವಾರ: ತಾಳಮದ್ದಳೆ ರಾಮ ನಿರ್ಯಾಣ
ಹಿಮ್ಮೇಳ: ಸುಬ್ರಹ್ಮಣ್ಯ ಧಾರೇಶ್ವರ, ಪರಮೇಶ್ವರ ಭಂಡಾರಿ ಕರ್ಕಿ, ಪ್ರಸನ್ನ ಹೆಗ್ಗಾರ. ಮುಮ್ಮೇಳ: ವಿದ್ವಾನ್ ಉಮಾಕಾಂತ ಭಟ್, ಉಜಿರೆ ಅಶೋಕ ಭಟ್, ಶೇಣಿ ವೇಣುಗೋಪಾಲ ಭಟ್, ಮೋಹನ ಹೆಗಡೆ ಹೆರವಟ್ಟಾ
ಜು.24 ಶನಿವಾರ: ಯಕ್ಷಗಾನ ಪ್ರದರ್ಶನ - ಶ್ರೀ ಕೃಷ್ಣ ದರ್ಶನ
ಹಿಮ್ಮೇಳ: ರಾಮಕೃಷ್ಣ ಹೆಗಡೆ ಹಿಲ್ಲೂರು, ಪರಮೇಶ್ವರ ಭಂಡಾರಿ ಕರ್ಕಿ, ಪ್ರಸನ್ನ ಹೆಗ್ಗಾರ. ಮುಮ್ಮೇಳ: ಜಲವಳ್ಳಿ, ಗಣೇಶ ನಾಯ್ಕ ಮುಗ್ವಾ, ನೀಲ್ಕೋಡ್, ರಾಜೇಶ್ ಭಂಡಾರಿ, ಚಂದ್ರಹಾಸ ಹೊಸಪಟ್ಟಣ, ಕಾರ್ತಿಕ ಕಣ್ಣಿ, ದರ್ಶನ ಭಟ್ಟ
ಜು.25 ಭಾನುವಾರ: ಯಕ್ಷಗಾನ ಪ್ರದರ್ಶನ - ಕಾರ್ತವೀರ್ಯ
ಹಿಮ್ಮೇಳ: ರಾಘವೇಂದ್ರ ಆಚಾರ್ಯ ಜನ್ಸಾಲೆ, ಸುನಿಲ್ ಭಂಡಾರಿ, ಪ್ರಸನ್ನ ಹೆಗ್ಗಾರ. ಮುಮ್ಮೇಳ: ಜಲವಳ್ಳಿ, ಕಾಸರಕೋಡ್, ನೀಲ್ಕೋಡ್, ನಾಗರಾಜ ಭಂಡಾರಿ, ವಿನಯ ಭಟ್ಟ, ದೇವಲಕುಂದ, ನಾಗರಾಜ ಕುಂಕಿಪಾಲ.
ಜು.26 ಸೋಮವಾರ - ಯಕ್ಷಗಾನ ಪ್ರದರ್ಶನ - ಕಿರಾತಾರ್ಜುನ
ಹಿಮ್ಮೇಳ: ಸರ್ವೇಶ್ವರ ಮೂರುರು, ಪಿ.ಕೆ.ಹೆಗಡೆ ಹರಿಕೇರಿ, ಪ್ರಸನ್ನ ಹೆಗ್ಗಾರ. ಮುಮ್ಮೇಳ: ಕೊಂಡದಕುಳಿ, ಪದ್ಮನಾಭ ಶಿರೂರು, ಕಾಸರಕೋಡ, ನಾಗೇಂದ್ರ ಮುರೂರು, ಕುಂಕಿಪಾಲ, ಕುಳಿಮನೆ.
ಜು.27 ಮಂಗಳವಾರ: ಯಕ್ಷಗಾನ ಪ್ರದರ್ಶನ ಸುದರ್ಶನ
ಹಿಮ್ಮೇಳ: ರವೀಂದ್ರ ಭಟ್ಟ ಅಚವೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಗಜಾನನ ಕತಗಾಲ. ಮುಮ್ಮೇಳ: ಕೊಂಡದಕುಳಿ, ತೋಟಿಮನೆ, ವಾಸುದೇವ ರಂಗ ಭಟ್ಟ, ಅಶೋಕ ಭಟ್ಟ, ಸುಬ್ರಹ್ಮಣ್ಯ ಮುರೂರು
ಜು.28 ಬುಧವಾರ: ತಾಳಮದ್ದಳೆ - ತಾಮ್ರಧ್ವಜ
ಹಿಮ್ಮೇಳ: ಕೇಶವ ಹೆಗಡೆ ಕೊಳಗಿ, ರಾಘವೇಂದ್ರ ಹೆಗಡೆ ಯಲ್ಲಾಪುರ, ಗಜಾನನ ಕತಗಾಲ. ಮುಮ್ಮೇಳ: ವಿದ್ವಾನ್ ಉಮಾಕಾಂತ ಭಟ್, ವಾಸುದೇವ ರಂಗ ಭಟ್, ಎನ್.ಎಂ.ಹೆಗಡೆ ಹಿಂಡ್ಮನೆ, ಉಡುಪಿ, ಎಸ್.ಐ.ಹೆಗಡೆ, ಈಶ್ವರ ನಾಯ್ಕ ಮಂಕಿ.
ಜು.29 ಗುರುವಾರ: ಯಕ್ಷಗಾನ ಪ್ರದರ್ಶನ ಮಾಯಾ ಮೋಹಿನಿ
ಹಿಮ್ಮೇಳ: ಶಂಕರ ಭಟ್ಟ ಬ್ರಹ್ಮೂರು, ನಾಗರಾಜ ಭಂಡಾರಿ ಹಿರೇಬೇಲ್, ಗಜಾನನ ಕತಗಾಲ. ಮುಮ್ಮೇಳ: ಸುಬ್ರಹ್ಮಣ್ಯ ಚಿಟ್ಟಾಣಿ, ನರಸಿಂಹ ಚಿಟ್ಟಾಣಿ, ಕಾಸರೋಡ್, ನೀಲ್ಕೋಡ್, ಆನಂದ ಭಟ್ ಕೆಕ್ಕಾರು, ನಾಗೇಶ ಕುಳಿಮನೆ, ಕಾರ್ತಿಕ ಚಿಟ್ಟಾಣಿ, ವಿಘ್ನೇಶ್ವರ ಹಾವಗೋಡಿ, ಕಾರ್ತಿಕ ಕಣ್ಣಿ, ದರ್ಶನ ಭಟ್, ಕುಮಾರಿ ದ್ಯುತಿ.
ಎಲ್ಲ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6.30ರಿಂದ 9.30ರವರೆಗೆ ನಡೆಯಲಿದ್ದು, ಯಕ್ಷ ಅಭಿನೇತ್ರಿ ಹೆಸರಿನ ಯೂಟ್ಯೂಬ್ ಚಾನೆಲ್ ಹಾಗೂ ನೂತನ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣಲಿವೆ.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಸುದ್ದಿ