ಎಡನೀರಿನಲ್ಲಿ ಭರ್ಜರಿ ತಾಳಮದ್ದಳೆ ಸಪ್ತಾಹ: ದಿನಾಂಕ ಕಾಯ್ದಿರಿಸಿಕೊಳ್ಳಿ

ಬ್ರಹ್ಮೈಕ್ಯರಾಗಿರುವ ಯಕ್ಷಗಾನ ಕಲಾಪ್ರೇಮಿ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಪ್ರಥಮ ಆರಾಧನ ಸ್ಮೃತಿ ಪ್ರಯುಕ್ತ ಏಳು ದಿನಗಳ ಭರ್ಜರಿ ತಾಳಮದ್ದಳೆ ರಸದೌತಣವು ಯಕ್ಷಗಾನ ಪ್ರಿಯರಿಗೆ ಲಭ್ಯವಾಗಲಿದೆ.

ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಜೊತೆಗೆ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯದ ಗೌರವಾರ್ಥ ಜು.26, 2021ರ ಸೋಮವಾರದಿಂದ ಪ್ರತಿದಿನ ಸಂಜೆ 6.15ರಿಂದ ರಾತ್ರಿ 9.15ರವರೆಗೆ ತಾಳಮದ್ದಳೆ ಕೂಟ ನಡೆಯಲಿದ್ದು, ಹಿರಿಯ, ಕಿರಿಯ ಕಲಾವಿದರು ಕೂಟಕ್ಕೆ ಕಳೆ ನೀಡಲಿದ್ದಾರೆ.

ಎಡನೀರು ಮಠದಲ್ಲಿ ನಡೆಯುವ ತಾಳಮದ್ದಳೆ ಸಪ್ತಾಹವು ಕಹಳೆ ನ್ಯೂಸ್ ಮೂಲಕ ಅಂತರಜಾಲದಲ್ಲಿ ಪ್ರಸಾರ ಕಾಣಲಿದೆ.

ಪ್ರಸಂಗ ಹಾಗೂ ಕಲಾವಿದರು:
26 ಜುಲೈ ಸೋಮವಾರ 2021: ಕೃಷ್ಣ ಸಾರಥ್ಯ
ಹಿಮ್ಮೇಳ: ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಶಂಕರನಾರಾಯಣ ಭಟ್, ಎಂ.ಲಕ್ಷ್ಮೀಶ ಅಮ್ಮಣ್ಣಾಯ; ಮುಮ್ಮೇಳದಲ್ಲಿ ಡಾ.ರಮಾನಂದ ಬನಾರಿ, ಕೆ.ಗೋವಿಂದ ಭಟ್, ಶಂಭು ಶರ್ಮ ವಿಟ್ಲ, ಕೆ.ಶ್ರೀಕರ ಭಟ್.

27 ಜುಲೈ ಮಂಗಳವಾರ 2021
ಬೆಳಿಗ್ಗೆ 10.30ರಿಂದ 12.30ರವರೆಗೆ ಯಕ್ಷಾನಾರ್ಚನೆ
ಕಲಾವಿದರು: ಹೊಸಮೂಲೆ ಗಣೇಶ್ ಭಟ್, ತಲ್ಪಣಾಜೆ ವೆಂಕಟ್ರಮಣ ಭಟ್, ರವಿಚಂದ್ರ ಕನ್ನಡಿಕಟ್ಟೆ, ಪದ್ಯಾಣ ಶಂಕರನಾರಾಯಣ ಭಟ್, ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು.
ಸಂಜೆ ತಾಳಮದ್ದಳೆ: ಸೀತಾ ಪರಿತ್ಯಾಗ
ಹಿಮ್ಮೇಳ: ಎಂ.ದಿನೇಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ; ಮುಮ್ಮೇಳ: ಸುಣ್ಣಂಬಳ ವಿಶ್ವೇಶ್ವರ ಭಟ್, ಕುಂಬ್ಳೆ ಶ್ರೀಧರ ರಾವ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ರಾಜೇಂದ್ರ ಕಲ್ಲೂರಾಯ, ಶ್ರೀಪತಿ ಕಲ್ಲೂರಾಯ

28 ಜುಲೈ ಬುಧವಾರ: ತರಣಿಸೇನ ಕಾಳಗ
ಹಿಮ್ಮೇಳ: ಪದ್ಯಾಣ ಗಣಪತಿ ಭಟ್, ಪುತ್ತೂರು ರಮೇಶ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವ ಕುಮಾರ್ ಐಲ; ಮುಮ್ಮೇಳ: ಜಬ್ಬಾರ್ ಸಮೊ ಸಂಪಾಜೆ, ಪೂಕಳ ಲಕ್ಷ್ಮೀನಾರಾಯಣ ಭಟ್, ಸದಾಶಿವ ಆಳ್ವ ತಲಪಾಡಿ, ಪನೆಯಾಲ ರವಿರಾಜ ಭಟ್


29 ಜುಲೈ ಗುರುವಾರ: ಗಾಂಡೀವ ನಿಂದನೆ
ಹಿಮ್ಮೇಳ: ಸತ್ಯನಾರಾಯಣ ಪುಣಿಚಿತ್ತಾಯ, ಪಡ್ರೆ ಆನಂದ, ಪಡ್ರೆ ಶ್ರೀಧರ; ಮುಮ್ಮೇಳ: ಡಾ.ಎಂ.ಪ್ರಭಾಕರ ಜೋಷಿ, ಪ್ರೊ.ಎಂ.ಎಲ್.ಸಾಮಗ, ಸರ್ಪಂಗಳ ಈಶ್ವರ ಭಟ್

30 ಜುಲೈ ಶುಕ್ರವಾರ: ಮಾಗಧ ವಧೆ
ಹಿಮ್ಮೇಳ: ಪಟ್ಲ ಸತೀಶ್ ಶೆಟ್ಟಿ, ಪಡ್ರೆ ಶ್ರೀಧರ, ರಾಮಪ್ರಸಾದ್ ವಧ್ವ; ಮುಮ್ಮೇಳ: ಡಾ.ಎಂ.ಪ್ರಭಾಕರ ಜೋಷಿ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ವಿನಯ ಆಚಾರ್ ಹೊಸಬೆಟ್ಟು

31 ಜುಲೈ ಶನಿವಾರ: ಅತಿಕಾಯ ಮೋಕ್ಷ
ಹಿಮ್ಮೇಳ: ಕಾವ್ಯಶ್ರೀ ನಾಯಕ್ ಅಜೇರು, ಬಿ. ಸೀತಾರಾಮ ತೋಳ್ಪಾಡಿತ್ತಾಯಸ ಬಿ.ಜನಾರ್ದನ ತೋಳ್ಪಾಡಿತ್ತಾಯ, ಶ್ರೀಪತಿ ನಾಯಕ್ ಅಜೇರು; ಮುಮ್ಮೇಳ: ಉಜಿರೆ ಅಶೋಕ ಭಟ್, ಸೇರಾಜೆ ಸೀತಾರಾಮ ಭಟ್, ಶೇಣಿ ವೇಣುಗೋಪಾಲ ಭಟ್, ಡಾ.ಗಾಳಿಮನೆ ವಿನಾಯಕ ಭಟ್, ಶ್ರೀಶ ಪಂಜಿತ್ತಡ್ಕ

01 ಆಗಸ್ಟ್ ಭಾನುವಾರ 2021: ಗಂಗಾವತರಣ 
ಹಿಮ್ಮೇಳ: ಕುರಿಯ ಗಣಪತಿ ಶಾಸ್ತ್ರಿ, ಪುತ್ತೂರು ರಮೇಶ ಭಟ್, ಕೃಷ್ಣಪ್ರಕಾಶ್ ಉಳಿತ್ತಾಯ, ಸತ್ಯಜಿತ್ ರಾವ್ ರಾಯಿ; ಮುಮ್ಮೇಳ: ಉಜಿರೆ ಅಶೋಕ ಭಟ್, ಡಾ.ಶಾಂತಾರಾಮ ಪ್ರಭು ನಿಟ್ಟೂರು, ಡಾ.ಪದ್ಮನಾಭ ಸಿಬಂತಿ, ಶಶಾಂಕ ಅರ್ನಾಡಿ

ಹಿರಿಯ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ಅವರ ಸಂಚಾಲಕತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಕಹಳೆ ನ್ಯೂಸ್ ಚಾನೆಲ್ ಮೂಲಕ ನೇರ ಪ್ರಸಾರ ಕಾಣಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು