ದೂರ್ವಾಸನಾಗಿ ಗೋವಿಂದ ಭಟ್
ಪುರಾಣ ತಿಳಿಯೋಣ: ವನವಾಸದಲ್ಲಿದ್ದ ಪಾಂಡವರಿಗೆ ಶಾಪ ಕೊಡಿಸಲೆಂದು ದೂರ್ವಾಸರನ್ನು ಕುಟಿಲತೆಯಿಂದ ಕೌರವ ಕಳುಹಿಸಿದಾಗ ದ್ರೌಪದಿಯನ್ನು ಶ್ರೀಕೃ,ಷ್ಣನು ರಕ್ಷಿಸಿದ ಕಥೆ.
ಪಾಂಡವರ ವನವಾಸದ ಸಂದರ್ಭದಲ್ಲಿ ಅವರಲ್ಲಿ ಸೂರ್ಯದೇವನಿಂದ ಕೊಡಲ್ಪಟ್ಟ ಅಕ್ಷಯ ಪಾತ್ರೆ ಇರುತ್ತದೆ. ದ್ರೌಪದಿ ಆ ಪಾತ್ರೆಯಿಂದ ಎಷ್ಟು ಮಂದಿಗೆ ಬೇಕಿದ್ದರೂ ಅಡುಗೆ ಮಾಡಿ ಬಡಿಸಬಹುದಾಗಿತ್ತು. ಒಂದೇ ಒಂದು ಷರತ್ತು ಎಂದರೆ ಎಲ್ಲರೂ ಊಟ ಮಾಡಿ ಪಾತ್ರೆ ತೊಳೆದಿಟ್ಟ ನಂತರ ಆ ದಿನ ಅದರಿಂದ ಏನೂ ಹುಟ್ಟುವುದಿಲ್ಲ.
ಒಂದು ಸಲ ದ್ರೌಪದಿಯು ಎಲ್ಲರೂ ಊಟ ಮುಗಿಸಿದ ಮೇಲೆ ಪಾತ್ರೆ ತೊಳೆದಿಟ್ಟಿದ್ದಳು. ಅದೇ ಹೊತ್ತಿಗೆ ಪಾಂಡವರ ಆಶ್ರಮಕ್ಕೆ ದೂರ್ವಾಸ ಮುನಿಗಳು ಬರುತ್ತಾರೆ. ನಿಜಕ್ಕಾದರೆ ಅವರನ್ನು ದುರ್ಯೋಧನನೇ ಪಾಂಡವರಿಗೆ ಮುಜುಗರ ಉಂಟುಮಾಡಲೆಂದು ಕಳುಹಿಸಿದುದು.
ಅವರಿಂದ ಪಾಂಡವರಿಗೆ ಶಾಪ ಕೊಡಿಸುವುದು ಆತನ ಹುನ್ನಾರ. ಅವರು ಪಾಂಡವರಲ್ಲಿಗೆ ಬಂದು, "ಹಸಿವಾಗಿದೆ, ಊಟಕ್ಕೆ ಸಿದ್ಧತೆ ಮಾಡಿ, ನಾವು ಸ್ನಾನ ಮುಗಿಸಿ ಬರುತ್ತೇವೆ" ಅನ್ನುತ್ತಾರೆ. ದ್ರೌಪದಿ ಕಂಗಾಲಾಗಿ "ಪಾತ್ರೆ ತೊಳೆದಿಟ್ಟಿದ್ದೇನೆ ಈಗ ಏನು ಮಾಡಲಿ" ಎಂದು ಕೃಷ್ಣನನ್ನು ಪ್ರಾರ್ಥಿಸುತ್ತಾಳೆ.
ಕೃಷ್ಣ ಮೈದೋರಿ "ಪಾತ್ರೆಯನ್ನು ತಾ" ಎಂದು ಹೇಳುತ್ತಾನೆ. ಆ ಪಾತ್ರೆಯಲ್ಲಿ ಒಂದು ಅಗುಳು ಅನ್ನ ಅಂಟಿಕೊಂಡಿರುತ್ತದೆ. ಕೃಷ್ಣ ಅದನ್ನೇ ತಿಂದು ತೇಗುತ್ತಾನೆ. ಮರದ ಬುಡಕ್ಕೆ ನೀರೆರೆದರೆ ಅದು ಹೇಗೆ ಎಲೆ ಎಲೆಗಳಿಗೂ ತಲುಪುತ್ತದೆಯೋ, ಹಾಗೆಯೇ ಪರಮ ಪುರುಷನೇ ಉಂಡಾಗ ಸ್ನಾನಕ್ಕೆ ಹೋದ ದೂರ್ವಾಸರ ಪರಿವಾರಕ್ಕೆಲ್ಲ ಹೊಟ್ಟೆ ಉಬ್ಬರಿಸಿ, ಹೊಟ್ಟೆ ತುಂಬ ಉಂಡ ಅನುಭವವಾಗುತ್ತದೆ. ದೂರ್ವಾಸರು ಪಾಂಡವರನ್ನು ಹರಸಿ ಹೊರಟುಹೋಗುತ್ತಾರೆ. ಹೀಗೆ, ಅವರಿಂದ ಪಾಂಡವರಿಗೆ ಶಾಪ ಕೊಡಿಸುವ ಕೌರವನ ಉಪಾಯವೂ ಫಲಿಸುವುದಿಲ್ಲ.
ಸಂ.: ದಾಮೋದರ ಶೆಟ್ಟಿ, ಇರುವೈಲು
![]() |
ದೂರ್ವಾಸನಾಗಿ ಗೋವಿಂದ ಭಟ್ |

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ
Tags:
ಪುರಾಣ