ಯಕ್ಷಗಾನದಲ್ಲಿ ಮತ್ತೊಂದು ವಿನೂತನ ಪ್ರಯೋಗ - ಅನಿಲಾನಲ ಸಂಯೋಗ

ಸಾಗರ: ವಿಜಯ ಸೇವಾ ಟ್ರಸ್ಟ್ - ಯಕ್ಷಶ್ರೀ ಸಾಗರ, ಸಂಯೋಜನೆಯಲ್ಲಿ "ಅನಿಲಾನಲ ಸಂಯೋಗ" ಎಂಬ ವಿನೂತನ ಹೊಸ ಪ್ರಯೋಗವು ಯಕ್ಷಗಾನ ರೂಪದಲ್ಲಿ ಈ ಶುಕ್ರವಾರದಿಂದ ಪ್ರಸಾರವಾಗಲಿದೆ.

ಭೀಮ - ದ್ರೌಪದಿಯರ ಮಹಾಭಾರತ ಯಾನದ ಮೇಲೆ ಬೆಳಕು ಚೆಲ್ಲುವ, ಹೊಸ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಹೊಸ ಪ್ರಸಂಗವು ಸುದೀರ್ಘ ಆಖ್ಯಾನವಾಗಿದ್ದು, 3 ಭಾಗಗಳಲ್ಲಿ ಪ್ರಸಾರವಾಗಲಿದೆ.
ವೈದ್ಯರೂ, ಯಕ್ಷಗಾನ ಸಂಘಟಕ ಹಾಗೂ ಸಂಯೋಜಕರಾಗಿ ಈಗಾಗಲೇ ಹೆಸರು ಗಳಿಸಿರುವ, ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಎಚ್. ಎಸ್. ಮೋಹನ್ ಹಾಗೂ ಹಿರಿಯ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರ ಪರಿಕಲ್ಪನೆ ಹಾಗೂ ಸಂಯೋಜನೆಯಲ್ಲಿ 01-10-21 ಶುಕ್ರವಾರ ಸಂಜೆ 6.30 ರಿಂದ ಮೊದಲನೇ ಭಾಗವು ನಾಂದಾಂಜಲಿ ಫೇಸ್‌ಬುಕ್ ಪೇಜ್‌ನಲ್ಲಿ (http://facebook.com/shailajasnaadaanjali) ಪ್ರಸಾರವಾಗಲಿದೆ.

ಪ್ರಸಂಗ ಜೋಡಣೆ, ನಿರ್ವಹಣೆ ಮತ್ತು ನಿರ್ದೇಶನ - ಸುಬ್ರಹ್ಮಣ್ಯ ಧಾರೇಶ್ವರ. ಭಾಗ 1ರಲ್ಲಿ ಭೀಮ-ದ್ರೌಪದಿ-ದೃಷ್ಟದ್ಯುಮ್ನ ಜನನ, ಮಯಮಂಟಪ (ರಾಜಸೂಯ ಯಾಗ) ಹಾಗೂ ದ್ಯೂತ ಪ್ರಕರಣ (ದ್ರೌಪದಿ ವಸ್ತ್ರಾಪಹಾರ) ಆಖ್ಯಾನಗಳು ಇರುತ್ತವೆ.

ಇದರಲ್ಲಿ ಭಾಗವಹಿಸುವ ಕಲಾವಿದರು: ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ‌, ಚಂದ್ರಕಾಂತ ಮೂಡುಬೆಳ್ಳೆ. ಶಂಕರ ಭಾಗವತರು, ಪ್ರಸನ್ನ ಹೆಗ್ಗಾರ್.

ಮುಮ್ಮೇಳದಲ್ಲಿ, ನೀಲ್ಕೋಡು ಶಂಕರ ಹೆಗಡೆ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಮಂಕಿ ಈಶ್ವರ ನಾಯ್ಕ, ಸಂಜಯ ಬೆಳೆಯೂರು, ಪ್ರಸನ್ನ ಶೆಟ್ಟಿಗಾರ, ಗಣೇಶ ಮುಗ್ವಾ, ವಿನಯ ಬೇರೊಳ್ಳಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು