![]() |
ಎಂ.ಕೆ.ರಮೇಶ ಆಚಾರ್ಯ |
ಪೂರ್ವಾಹ್ನ 11ರಿಂದ ಯಕ್ಷ ಆರಾಧನಾ ಟ್ರಸ್ಟ್, ಕಿದಿಯೂರು ಸಹಯೋಗದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ. ಕೆ.ಜೆ.ಗಣೇಶ್, ಕೆ.ಜೆ.ಕೃಷ್ಣ, ಕೆ.ಜೆ.ಸುಧೀಂದ್ರ ಅವರ ಹಿಮ್ಮೇಳದಲ್ಲಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ತೀರ್ಥಹಳ್ಳಿ ಗೋಪಾಲ ಆಚಾರ್ಯ, ಮಾ.ಕೆ.ಜೆ.ದೀಪ್ತ ಹಾಗೂ ಮಾ.ಅರವಿಂದ್ ಮುಮ್ಮೇಳದಲ್ಲಿ ಪ್ರದರ್ಶನ ನೀಡಲಿದ್ದಾರೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಎಂ.ಕೆ.ರಮೇಶ್ ಆಚಾರ್ಯ ಅಭಿನಂದನ ಸಮಿತಿ, ಉಡುಪಿ - ಇದರ ವತಿಯಿಂದ ನಡೆಯುವ ಕಾರ್ಯಕ್ರಮ ಇದಾಗಿದ್ದು, ಅಪರಾಹ್ನ 2ರಿಂದ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಕಟಪಾಡಿಯ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಡಾ.ಟಿ.ಶ್ಯಾಮ್ ಭಟ್ ಅಧ್ಯಕ್ಷತೆಯಲ್ಲಿ ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಅವರು ಅಭಿನಂದನ ಗ್ರಂಥ 'ಯಕ್ಷಾಂಗನೆ' ಬಿಡುಗಡೆ ಮಾಡಲಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ, ಮುಂಬಯಿ ಉದ್ಯಮಿಗಳಾದ ಕಡಂದಲೆ ಸುರೇಶ್ ಭಂಡಾರಿ ಹಾಗೂ ಶ್ರೀಧರ ವಿ.ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕಲಾವಿದ, ಸಂಘಟಕ, ಉಜಿರೆ ಅಶೋಕ್ ಭಟ್ ಅವರು ಅಭಿನಂದನ ಭಾಷಣ ಮಾಡಲಿದ್ದಾರೆ.
Tags:
ಸುದ್ದಿ