'ಯಕ್ಷಾನುಗ್ರಹ' ವಾಟ್ಸ್ಆ್ಯಪ್ ಬಳಗದಿಂದ ಕೀರ್ತಿಶೇಷ ಸ್ಮರಣೆಯ ಶತದಿನೋತ್ಸವ, ತಾಳಮದ್ದಳೆ

ಯಕ್ಷಾನುಗ್ರಹ ಸದಸ್ಯರೊಂದಿಗೆ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಎಡನೀರು

ಎಡನೀರು: ಸಾಮಾಜಿಕ ಜಾಲ ತಾಣಗಳನ್ನು ವ್ಯರ್ಥವಾದ ಕಾಲಹರಣಕ್ಕಾಗಿ ಅಥವಾ ಋಣಾತ್ಮಕ ಅಂಶಗಳಿಗಾಗಿ ಬಳಸುತ್ತಿರುವ ಈ ಕಾಲದಲ್ಲಿ, 'ಯಕ್ಷಾನುಗ್ರಹ' ವಾಟ್ಸ್ಆ್ಯಪ್ ಬಳಗ ರೂಪಿಸಿಕೊಂಡು, ಸಮಾನ ಮನಸ್ಕರನ್ನು ಸೇರಿಸಿ, ಯಕ್ಷಗಾನದ ಹಿರಿಮೆಯನ್ನು ಸಾರುವ ಪ್ರಯತ್ನ ಮಾಡುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಚಟುವಟಿಕೆಗಳು ಇತರ ಗ್ರೂಪ್‌ಗಳಿಗೆ ಮಾದರಿ ಎಂದು ಶ್ರೀ ಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಯಕ್ಷಾನುಗ್ರಹ ವಾಟ್ಸ್ಆ್ಯಪ್ ಬಳಗದ ವತಿಯಿಂದ ನೂರು ದಿನಗಳ ಕಾಲ ನಿರಂತರವಾಗಿ ಹಿರಿಯ ಮತ್ತು ಗತಿಸಿದ ಯಕ್ಷಗಾನ ಕಲಾವಿದರನ್ನು ಸ್ಮರಿಸುವ 'ಮರೆಯಲಾಗದ ಮಹಾನುಭಾವರು' ಕಾರ್ಯಕ್ರಮದ ಶತದಿನೋತ್ಸವ, ತಾಳಮದ್ದಳೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು. ಈ ಕಾರ್ಯಕ್ರಮವು ಬ್ರಹ್ಮೈಕ್ಯ ಗುರುಗಳ ಸಂಸ್ಮರಣೆಯೊಂದಿಗೆ ಸೆ.04ರ ಶನಿವಾರ ಶ್ರೀಮಠದಲ್ಲಿ ನಡೆಯಿತು.

ಯಕ್ಷಾನುಗ್ರಹ ವಾಟ್ಸ್ಆ್ಯಪ್ ಬಳಗದ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಸಿರಿಬಾಗಿಲು ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ನಡೆಸುತ್ತಿರುವ ಯಕ್ಷಗಾನ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು ಹಾಗೂ ಯಕ್ಷಾನುಗ್ರಹ ವಾಟ್ಸ್ಆ್ಯಪ್ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ, ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ಸಂಸ್ಮರಣೆಯನ್ನು ಯಕ್ಷಗಾನ ಕಲಾವಿದ, ಉಪನ್ಯಾಸಕ ಸದಾಶಿವ ಶೆಟ್ಟಿಗಾರ್ ಮಾಡಿದರು.

ಯಕ್ಷಾನುಗ್ರಹ ವಾಟ್ಸ್ಆ್ಯಪ್ ಬಳಗದ ರೂವಾರಿ, ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಭಟ್ ಮಾಳ, ಶ್ಯಾಮ ಪ್ರಸಾದ್ ಕುಂಚಿನಡ್ಕ, ರಾಧಾಕೃಷ್ಣ ಕಲ್ಚಾರ್, ಉದಯ ಕಂಬಾರು, ವಾಸು ಬಾಯಾರು, ಶ್ರೀಮುಖ ಮಯ್ಯ, ವೆಂಕಟ್ರಮಣ ಭಟ್ ತಲ್ಪಣಾಜೆ, ಕೆ.ಜಗದೀಶ್ ಕೂಡ್ಲು, ಸೂರ್ಯ ಭಟ್ ಎಡನೀರು, ವೆಂಕಟ್ ಭಟ್ ಎಡನೀರು, ವಾಟ್ಸ್ಆ್ಯಪ್ ಬಳಗದ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ: ಯಕ್ಷಗಾನದ ಮರೆಯಲಾಗದ ಮಹಾನುಭಾವರು 100ರ ಸಂಭ್ರಮ: ಯಕ್ಷಾನುಗ್ರಹ ವಾಟ್ಸಪ್ ಬಳಗದ ಸಾಧನೆ

ಮೂಡುಬಿದಿರೆ ಉದ್ಯಮಿ ಸದಾಶಿವ ರಾವ್ ನೆಲ್ಲಿಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ, ಕಟೀಲು ಮೇಳದ ಕಲಾವಿದ ಡಾ. ಶ್ರುತಕೀರ್ತಿ ರಾಜ್ ಉಜಿರೆ ವಂದಿಸಿದರು.

ಬಳಗದ ನೇತೃತ್ವದಲ್ಲಿ, ಡಿ.ಎಸ್.ಶ್ರೀಧರ್ ವಿರಚಿತ ಸತ್ತ್ವ ಶೈಥಿಲ್ಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರುಗಿತು.
ನೋಡಿ:

ಪ್ರಸಂಗ: ಶ್ರೀಧರ ಡಿ.ಯಸ್. ವಿರಚಿತ ಸತ್ತ್ವ ಶೈಥಿಲ್ಯ
ಭಾಗವತರು: ರಾಮಕೃಷ್ಣ ಮಯ್ಯ ಸಿರಿಬಾಗಿಲು, ತಲ್ಪಣಾಜೆ ವೆಂಕಟ್ರಮಣ ಭಟ್
ಚೆಂಡೆ-ಮದ್ದಳೆ: ಚಂದ್ರಶೇಖರ ಕೊಂಕಣಾಜೆ, ಅವಿನಾಶ್ ಬೈಪಾಡಿತ್ತಾಯ, ಉದಯ ಕಂಬಾರು
ಚಕ್ರತಾಳ: ಮುರಾರಿ ಭಟ್ ಪಂಜಿಗದ್ದೆ 

ಅರ್ಥಧಾರಿಗಳು:
ಅಶ್ವತ್ಥಾಮ- ರಾಧಾಕೃಷ್ಣ ಕಲ್ಚಾರ್ 
ಬಲರಾಮ - ಡಾ.ಶ್ರುತಕೀರ್ತಿ ರಾಜ್
ಶ್ರೀಕೃಷ್ಣ - ಹರೀಶ ಬಳಂತಿಮೊಗರು 
ದ್ರೋಣ- ಪ್ರೊ.ಸದಾಶಿವ ಶೆಟ್ಟಗಾರ್, ಕಿನ್ನಿಗೋಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು