ಧರ್ಮಸ್ಥಳ: 'ಯಕ್ಷ ಶಾಂತಲಾ' ಖ್ಯಾತಿಯ, ಯಕ್ಷಗಾನದ ಸ್ತ್ರೀವೇಷಕ್ಕೆ ಹೊಸ ಹೊಳಹು ನೀಡಿ, ಸ್ತ್ರೀಪಾತ್ರಗಳಿಗೆ ಪ್ರಾಧಾನ್ಯ ಕಲ್ಪಿಸಿದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ ಅವರ ಹೆಸರಿನಲ್ಲಿ ನೀಡಲಾಗುವ ಪಾತಾಳ ಕಲಾಮಂಗಳ ಪ್ರಶಸ್ತಿಗೆ 30 ಮಂದಿ ಯಕ್ಷಗಾನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.
ವ್ಯವಸಾಯಿ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ, ಹಿರಿಯರಾದ ಬಲಿಪ ನಾರಾಯಣ ಭಾಗವತರು, ಕುರಿಯ ಗಣಪತಿ ಶಾಸ್ತ್ರಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಕುಂಬ್ಳೆ ಸುಂದರ ರಾವ್, ಕೆ.ಗೋವಿಂದ ಭಟ್, ಮುಳಿಯಾಲ ಭೀಮ ಭಟ್, ಕುಂಬ್ಳೆ ಶ್ರೀಧರ ರಾವ್, ಉಬರಡ್ಕ ಉಮೇಶ ಶೆಟ್ಟಿ, ವಸಂತ ಗೌಡ ಕಾಯರ್ತಡ್ಕ, ಗೋಡೆ ನಾರಾಯಣ ಹೆಗಡೆ, ಶಿರಳಗಿ ತಿಮ್ಮಪ್ಪ ಹೆಗಡೆ, ಕಪ್ಪೆಕೆರೆ ಮಹಾದೇವ ಹೆಗಡೆ, ಬಳ್ಕೂರು ಕೃಷ್ಣ ಯಾಜಿ, ಮಹಾದೇವ ಪಟಗಾರ, ಹೇರಂಜಾಲು ಸುಬ್ಬಣ್ಣ ಗಾಣಿಗ, ಐರೋಡಿ ಗೋವಿಂದಪ್ಪ, ದಯಾನಂದ ನಾಗೂರು, ರಾಜೀವ ಶೆಟ್ಟಿ ಹೊಸಂಗಡಿ, ಅಶೋಕ ಭಟ್ ಸಿದ್ದಾಪುರ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಪುಂಡರೀಕಾಕ್ಷ ಉಪಾಧ್ಯಾಯ, ಬೋಳಾರ ಸುಬ್ಬಯ್ಯ ಶೆಟ್ಟಿ, ಶಿವರಾಮ ಜೋಗಿ ಬಿ.ಸಿ.ರೋಡ್, ರೆಂಜಾಳ ರಾಮಕೃಷ್ಣ ರಾವ್, ಪೂಕಳ ಲಕ್ಷ್ಮೀನಾರಾಯಣ ಭಟ್, ಕೆ.ಎಚ್.ದಾಸಪ್ಪ ರೈ, ತೊಡಿಕಾನ ವಿಶ್ವನಾಥ ಗೌಡ, ಬೆಳ್ಳಾರೆ ಮಂಜುನಾಥ ಭಟ್ ಹಾಗೂ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಶ್ರೀ ಧರ್ಮಸ್ಥಳ ಮೇಳದಲ್ಲಿ 1965ರಿಂದ 1980ರವರೆಗೆ ಪ್ರಧಾನ ಸ್ತ್ರೀಪಾತ್ರ ಭೂಮಿಕೆಯಲ್ಲಿದ್ದು, ತೆಂಕುತಿಟ್ಟು ಯಕ್ಷಗಾನ ರಂಗದ ಸ್ತ್ರೀಪಾತ್ರಗಳಿಗೆ ಆವಿಷ್ಕಾರಿಕ ವೇಷ ಸ್ವರೂಪ ನೀಡಿದ ಸಾಧಕ, ಪಾತಾಳ ವೆಂಕಟರಮಣ ಭಟ್. 30 ಹಿರಿಯ ಕಲಾವಿದರಿಗೆ ತಲಾ 10 ಸಾವಿರ ರೂ. ಮೊತ್ತದ ಗೌರವ ನಿಧಿಯೊಂದಿಗೆ, ಪಾತಾಳ ಯಕ್ಷ ಪ್ರತಿಷ್ಠಾನದ ಮೂಲಕ ಗೌರವಿಸಲಿದ್ದಾರೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಸ್ವಂತ ಸಂಪನ್ಮೂಲದಲ್ಲೇ ಇದುವರೆಗೂ ಈ ಪ್ರಶಸ್ತಿಯನ್ನು ಈಗಾಗಲೇ ಕಳೆದ 15 ವರ್ಷಗಳಲ್ಲಿ ನೀಡಿದ್ದಾರೆ. ಈ ಬಾರಿ 30 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಕ್ಟೋಬರ್ 7ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಶ್ರೀಕ್ಷೇತ್ರದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದಾರೆ. ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಹರ್ಷೇಂದ್ರ ಕುಮಾರ್ ಹಾಗೂ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಉಜಿರೆ ಸಂಯೋಜಿಸುತ್ತಿದ್ದು, ಉಜಿರೆಯ ಯೂಪ್ಲಸ್ ಟಿವಿಯ ಫೇಸ್‌ಬುಕ್ ಮತ್ತು ಯೂಟ್ಯೂಬ್ ಖಾತೆಗಳಲ್ಲಿ ನೇರ ಪ್ರಸಾರ ಕಾಣಲಿದೆ ಎದು ಕುರಿಯ ಪ್ರತಿಷ್ಠಾನದ ಸಂಚಾಲಕ ಶ್ರೀ ಉಜಿರೆ ಅಶೋಕ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 15 ವರ್ಷಗಳಲ್ಲಿ ಪಾತಾಳ ಪ್ರಶಸ್ತಿಯನ್ನು, ಕಡಂದೇಲು ಪುರುಷೋತ್ತಮ ಭಟ್, ಕಡಬ ಸಾಂತಪ್ಪ, ಪೆರುವಡಿ ನಾರಾಯಣ ಭಟ್, ಹಾಸ್ಯಗಾರ, ಕೊಡಕ್ಕಲ್ ಗೋಪಾಲಕೃಷ್ಣ ಭಟ್, ಹಾಸ್ಯಗಾರ, ಕುಡಾಣ ಗೋಪಾಲಕೃಷ್ಣ ಭಟ್, ಮಾರ್ಗೋಳಿ ಗೋವಿಂದ ಸೇರಿಗಾರ, ಎಂ.ಕೆ.ರಮೇಶ ಆಚಾರ್ಯ, ಕೊಕ್ಕಡ ಈಶ್ವರ ಭಟ್, ವಿದ್ವಾನ್ ಮಾಸ್ತರ್ ವಿಠಲ್, ಶಿರಳಗಿ ಭಾಸ್ಕರ ಜೋಶಿ, ಹಳುವಳ್ಳಿ ಗಣೇಶ ಭಟ್, ಕೋಳ್ಯೂರು ರಾಮಚಂದ್ರ ರಾವ್, ಮೂರೂರು ವಿಷ್ಣು ಭಟ್, ಎಂ.ಎ.ನಾಯ್ಕ ಹಾಗೂ ವಂಡ್ಸೆ ನಾರಾಯಣ ಗಾಣಿಗರಿಗೆ ನೀಡಲಾಗಿತ್ತು.
Tags:
ಸುದ್ದಿ