ಮೂಡುಬಿದಿರೆಯ ಆಲಂಗಾರು ಶ್ರೀ ಮಹಾಗಣಪತಿ, ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ "ಶ್ರೀ ಹರಿಲೀಲಾ -75 - ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ" ಕಾರ್ಯಕ್ರಮದಲ್ಲಿ, ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಗುರು ದಂಪತಿಗಳನ್ನು ಶಿಷ್ಯ ವೃಂದದವರು ಸಾರ್ವಜನಿಕರ ಸಹಯೋಗದೊಂದಿಗೆ ಆತ್ಮೀಯವಾಗಿ ಗೌರವಿಸಲಿದ್ದಾರೆ. ವಿಶ್ರಾಂತ ಉಪನ್ಯಾಸಕರೂ, ಕಲಾವಿದರೂ ಆಗಿರುವ ಶ್ರೀ ಎಂ.ಎಲ್.ಸಾಮಗರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಹರ್ಷೇಂದ್ರ ಹೆಗ್ಗಡೆ, ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸುನಿಲ್ ಕುಮಾರ್ ಕಾರ್ಕಳ, ಯಕ್ಷಗಾನ ಕಲಾಪೋಷಕ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶ್ರೀ ಟಿ.ಶ್ಯಾಮ್ ಭಟ್, ಪಂಚ ಮೇಳಗಳ ಯಜಮಾನರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆ, ಉಡುಪಿ ಯಕ್ಷಗಾನ ಕಲಾರಂಗದ ಶ್ರೀ ಮುರಳಿ ಕಡೆಕಾರ್ ಭಾಗವಹಿಸುವರು.
Yakshagana.in Updates ಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಮೂಲ್ಕಿ ಮೂಡುಬಿದಿರೆ ಶಾಸಕ ಎ.ಉಮಾನಾಥ ಕೋಟ್ಯಾನ್, ಶ್ರೀ ಡಾ. ಎಂ. ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ, ಶ್ರೀ ಬಿ.ನಾಗರಾಜ ಶೆಟ್ಟಿ, ಮಾಜಿ ಮುಜರಾಯಿ ಮಂತ್ರಿಗಳು ಹಾಗೂ ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ತಲಕಳ, ಶ್ರೀ ಶ್ರೀಪತಿ ಭಟ್, ಉದ್ಯಮಿ, ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್, ಮೂಡುಬಿದಿರೆ ಅವರು ಉಪಸ್ಥಿತರಿರುವರು.
ಬೈಪಾಡಿತ್ತಾಯ ಗುರು ದಂಪತಿಯನ್ನು ಅಭಿನಂದಿಸಿ ಯಕ್ಷಗಾನ ವಿದ್ವಾಂಸ, ಕಲಾವಿದ, ಸಂಘಟಕರಾದ ಶ್ರೀ ಉಜಿರೆ ಅಶೋಕ ಭಟ್ ಮಾತನಾಡಲಿದ್ದಾರೆ.
ಲಕ್ಷ್ಮೀಶ ಅಮ್ಮಣ್ಣಾಯರಿಗೆ ಯಕ್ಷನಾದ ಗೌರವ ಪ್ರಶಸ್ತಿ
ಇದೇ ವೇದಿಕೆಯಲ್ಲಿ, ಹಿರಿಯ ಭಾಗವತರಾದ ಶ್ರೀ ಬಲಿಪ ನಾರಾಯಣ ಭಾಗವತರನ್ನು ಗೌರವಿಸಲಾಗುತ್ತದೆ. ಹಿರಿಯ ಮದ್ಲೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ ಅವರಿಗೆ 'ಶ್ರೀ ಹರಿ ಲೀಲಾ ಯಕ್ಷನಾದ ಪ್ರಶಸ್ತಿ 2021' ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಛಾಯಾಗ್ರಾಹಕರು, ಕಲಾವಿದರಾದ ಶ್ರೀ ದೇವಾನಂದ ಭಟ್ ಬೆಳುವಾಯಿ ಅವರು ಅಮ್ಮಣ್ಣಾಯರಿಗೆ ಅಭಿನಂದಿಸಿ ಮಾತನಾಡುವರು.
ಶಿಷ್ಯವೃಂದದ ಪರವಾಗಿ ಗುರು ದಂಪತಿಗಳ ಕುರಿತಾಗಿ ಚಂದ್ರಶೇಖರ ಭಟ್ ಕೊಂಕಣಾಜೆ ಹಾಗೂ ಶ್ರೀಮತಿ ವಿದ್ಯಾ ಕೋಳ್ಯೂರು ಅವರು ಮಾತನಾಡಲಿದ್ದಾರೆ. ಶ್ರೀ ಗಣರಾಜ ಕುಂಬ್ಳೆ ಅವರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಎರಡು ಗ್ರಂಥಗಳ ಬಿಡುಗಡೆ
ಇದೇ ಸಂದರ್ಭದಲ್ಲಿ, ವಿಜಯ ಕರ್ನಾಟಕ ಪುರವಣಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ ಅವರು ನಿರೂಪಿಸಿರುವ, ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ 'ಯಕ್ಷ ಗಾನಲೀಲಾವಳಿ' ಬಿಡುಗಡೆಯಾಗಲಿದೆ. ಜೊತೆಗೆ, ಹಿರಿಯ ಕಲಾವಿದ, ನಿವೃತ್ತ ಉಪನ್ಯಾಸಕರಾದ ಶ್ರೀ ಗಣರಾಜ ಕುಂಬ್ಳೆ ಸಂಪಾದಕತ್ವದಲ್ಲಿ ಗುರು ದಂಪತಿಗೆ 'ಶ್ರೀ ಹರಿ ಲೀಲಾ ಯಕ್ಷಗಾನ ಕಲಾಯಾನ' ಎಂಬ ಅಭಿನಂದನ ಗ್ರಂಥವೂ ಬಿಡುಗಡೆಯಾಗಲಿದೆ. ಈ ಗ್ರಂಥದ ಸಂಪಾದಕೀಯ ಮಂಡಳಿಯಲ್ಲಿ ಭಾಗವತರೂ, ಮಡಿಕೇರಿ ಆಕಾಶವಾಣಿ ಉದ್ಘೋಷಕರೂ ಆಗಿರುವ ಶ್ರೀ ಸುಬ್ರಾಯ ಸಂಪಾಜೆ, ಪುತ್ರ ಅವಿನಾಶ್ ಬೈಪಾಡಿತ್ತಾಯ, ತುಮಕೂರು ವಿವಿ ಉಪನ್ಯಾಸಕ ಶ್ರೀ ಸಿಬಂತಿ ಪದ್ಮನಾಭ, ಯಕ್ಷಗಾನ ಅಕಾಡೆಮಿ ಸದಸ್ಯೆ, ಉಪನ್ಯಾಸಕಿ ಶ್ರೀಮತಿ ಆರತಿ ಪಟ್ರಮೆ ಅವರು ಇದ್ದಾರೆ.
ಬೆಳಿಗ್ಗೆ 10 ಗಂಟೆಗೆ ಆಲಂಗಾರು ದೇವಸ್ಥಾನದ ಅರ್ಚಕ, ವೇದಮೂರ್ತಿ ಈಶ್ವರ ಭಟ್ ಅವರು ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ಯಕ್ಷಗಾನ ವಿದ್ವಾಂಸರೂ, ವಿಮರ್ಶಕರೂ, ಅರ್ಥಧಾರಿಯೂ ಆಗಿರುವ ಶ್ರೀ ಪ್ರಭಾಕರ ಜೋಷಿ, ಧರ್ಮದರ್ಶಿ ಹರಿಕೃಷ್ಣ ಪುನರೂರು ಭಾಗವಹಿಸಲಿದ್ದಾರೆ.
ಬಳಿಕ ದಿನಪೂರ್ತಿ ಯಕ್ಷಗಾನ ಪರಂಪರೆಯ ಮಟ್ಟುಗಳ ಯಕ್ಷಗಾನ ಗಾಯನ, ಪೂರ್ವರಂಗ ಹಾಗೂ ಸಂಪೂರ್ಣ ಮಹಿಳಾ ಹಿಮ್ಮೇಳವೇ ಇರುವ ಯಕ್ಷಗಾನದ ಹಾಡುಗಳ ಗಾಯನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕವಿ ದಿನಕರ ಪಚ್ಚನಾಡಿ ವಿರಚಿತ 'ಗುರುದಕ್ಷಿಣೆ (ಪಾಂಚಜನ್ಯ)' ಯಕ್ಷಗಾನವು ಪ್ರದರ್ಶನಗೊಳ್ಳಲಿದೆ.
ದಿನದ ಕಾರ್ಯಕ್ರಮಗಳು ಹೀಗಿವೆ:
ಬೆಳಿಗ್ಗೆ 9.45: ಚೌಕಿ ಪೂಜೆ
ಬೆಳಿಗ್ಗೆ 10.00 ದೀಪ ಪ್ರಜ್ವಲನೆ: ವೇದಮೂರ್ತಿ ಈಶ್ವರ ಭಟ್, ಅರ್ಚಕರು, ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು ಮೂಡುಬಿದಿರೆ
ಗೌರವ ಉಪಸ್ಥಿತಿ:
ಡಾ.ಎಂ.ಪ್ರಭಾಕರ ಜೋಶಿ, ಯಕ್ಷಗಾನ ವಿದ್ವಾಂಸರು, ವಿಮರ್ಶಕರು, ಅರ್ಥಧಾರಿ
ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್
10.15ರಿಂದ 12.30
ಯಕ್ಷನಾದೋತ್ಸವಂ
ಕಿರಿಯ ಶಿಷ್ಯವರ್ಗದಿಂದ ಸಭಾಲಕ್ಷಣ - ಪೂರ್ವರಂಗದ ಪ್ರದರ್ಶನ
ಬಾಲಗೋಪಾಲ, ಮುಖ್ಯಸ್ತ್ರೀವೇಷ, ಅಬ್ಬರ ತಾಳ ಪೀಠಿಕೆ ನಾದ ವೈವಿಧ್ಯ, ಪೀಠಿಕೆ ಸ್ತ್ರೀವೇಷ
ಮಧ್ಯಾಹ್ನ 12.35ರಿಂದ 02.00: ಸಂಪೂರ್ಣ ಮಹಿಳಾ ಹಿಮ್ಮೇಳದ ಯಕ್ಷನಾದೋತ್ಸವ
ಅಪರಾಹ್ನ 2.00ರಿಂದ 3.30: ವೃತ್ತಿಪರ ಶಿಷ್ಯರಿಂದ ಯಕ್ಷನಾದೋತ್ಸವ
ಯಕ್ಷಗಾನದ ರಾಗ-ತಾಳ-ಮಟ್ಟುಗಳ ಪರಂಪರೆಯ ಹಾಡುಗಳು
(ಭೋಜನ ಅವಧಿ: 1.30ರಿಂದ 2.30)
3.30ರಿಂದ ಯಕ್ಷಾಭಿನಂದನಂ - ಶಿಷ್ಯಾಭಿವಂದನಂ ಸಮಾರಂಭ
ಅಧ್ಯಕ್ಷತೆ: ಶ್ರೀ ಎಂ.ಎಲ್.ಸಾಮಗ, ಯಕ್ಷಗಾನ ವಿದ್ವಾಂಸರು, ಕಲಾವಿದರು
ಶುಭಾಶಂಸನೆ: ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಆನುವಂಶಿಕ ಅರ್ಚಕರು, ಶ್ರೀ ಕ್ಷೇತ್ರ ಕಟೀಲು
ಮುಖ್ಯ ಅತಿಥಿಗಳು: ಶ್ರೀ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ
ಶ್ರೀ ವಿ. ಸುನಿಲ್ ಕುಮಾರ್ ಕಾರ್ಕಳ, ಸಚಿವರು, ಇಂಧನ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಶ್ರೀ ಟಿ. ಶ್ಯಾಂ ಭಟ್, ಮಾಜಿ ಅಧ್ಯಕ್ಷರು, ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಸರಕಾರ, ಯಕ್ಷಗಾನ ಕಲಾಪೋಷಕರು
ಶ್ರೀ ಪಿ. ಕಿಶನ್ ಹೆಗ್ಡೆ ಬೈಲೂರು, ಪಂಚ ಮೇಳಗಳ ಯಜಮಾನರು
ಶ್ರೀ ಮುರಳಿ ಕಡೆಕಾರ್, ಕಾರ್ಯದರ್ಶಿ, ಯಕ್ಷಗಾನ ಕಲಾರಂಗ ಉಡುಪಿ
ಗೌರವ ಉಪಸ್ಥಿತಿ:
ಶ್ರೀ ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ-ಮೂಡುಬಿದಿರೆ ಕ್ಷೇತ್ರ
ಶ್ರೀ ಡಾ. ಎಂ. ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ
ಶ್ರೀ ಬಿ.ನಾಗರಾಜ ಶೆಟ್ಟಿ, ಮಾಜಿ ಮುಜರಾಯಿ ಮಂತ್ರಿಗಳು,ಕರ್ನಾಟಕ ಸರ್ಕಾರ ಹಾಗೂ ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ತಲಕಳ
ಶ್ರೀ ಶ್ರೀಪತಿ ಭಟ್, ಉದ್ಯಮಿ, ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್, ಮೂಡುಬಿದಿರೆ
ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ, ಪತ್ರಕರ್ತೆ, ವಿಜಯ ಕರ್ನಾಟಕ ಪುರವಣಿ ವಿಭಾಗ ಮುಖ್ಯಸ್ಥರು, ಲೀಲಾ ಬೈಪಾಡಿತ್ತಾಯರ ಆತ್ಮಕಥನ ಲೇಖಕಿ
ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀ ಹರಿ ಲೀಲಾ ಯಕ್ಷನಾದ ಪ್ರಶಸ್ತಿ 2021 ಪುರಸ್ಕೃತ ಹಿರಿಯ ಮದ್ಲೆಗಾರರು
ಅಭಿನಂದನ ಗ್ರಂಥ 'ಶ್ರೀ ಹರಿಲೀಲಾ-75 ಯಕ್ಷಗಾನ ಕಲಾಯಾನ' ಹಾಗೂ ಆತ್ಮಕಥನ 'ಯಕ್ಷ ಗಾನ ಲೀಲಾವಳಿ' ಬಿಡುಗಡೆ
ಹಿರಿಯ ಕಲಾವಿದರಾದ ಬಲಿಪ ನಾರಾಯಣ ಭಾಗವತರಿಗೆ ಗೌರವ ವಂದನೆ: ಗುರು ದಂಪತಿಯಿಂದ
ಗುರು ದಂಪತಿಗೆ ಗೌರವಾರ್ಪಣೆ: ಸಮಸ್ತ ಶಿಷ್ಯವೃಂದದ ಪರವಾಗಿ ಅತಿಥಿಗಳಿಂದ
ಶ್ರೀ ಹರಿಲೀಲಾ ಅಭಿನಂದನೆ ನುಡಿ: ಶ್ರೀ ಉಜಿರೆ ಅಶೋಕ ಭಟ್, ಯಕ್ಷಗಾನ ವಿದ್ವಾಂಸರು, ಸಂಘಟಕರು
ಯಕ್ಷನಾದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ನುಡಿ: ಶ್ರೀ ದೇವಾನಂದ ಭಟ್ ಬೆಳುವಾಯಿ, ಉದ್ಯಮಿ, ಕಲಾವಿದರು
ಶಿಷ್ಯಾಭಿವಂದನಂ: ಶಿಷ್ಯವೃಂದದ ಪರವಾಗಿ ಶ್ರೀ ಚಂದ್ರಶೇಖರ ಭಟ್ ಕೊಂಕಣಾಜೆ, ಶ್ರೀಮತಿ ವಿದ್ಯಾ ಕೋಳ್ಯೂರು
ಕಾರ್ಯಕ್ರಮ ನಿರೂಪಣೆ: ಶ್ರೀ ಗಣರಾಜ ಕುಂಬ್ಳೆ, ನಿವೃತ್ತ ಉಪನ್ಯಾಸಕರು, ಅರ್ಥಧಾರಿ, ಶ್ರೀ ಹರಿಲೀಲಾ ಅಭಿನಂದನ ಗ್ರಂಥ ಸಂಪಾದಕರು
6.00ರಿಂದ: ಶಿಷ್ಯರಿಂದ ಯಕ್ಷಗಾನ ಪ್ರದರ್ಶನ ಗುರುದಕ್ಷಿಣೆ (ಪಾಂಚಜನ್ಯ)
ಕವಿ: ಡಾ. ದಿನಕರ ಎಸ್. ಪಚ್ಚನಾಡಿ
ಕಾರ್ಯಕ್ರಮದ ಮಹತ್ವ
ಶ್ರೀ ಹರಿನಾರಾಯಣ ಬೈಪಾಡಿತ್ತಾಯರು 6 ದಶಕಗಳಿಂದ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು 5 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದ ಗುರು ದಂಪತಿ. ನೂರಾರು ಹಿಮ್ಮೇಳ ವಾದಕರನ್ನು ತೆಂಕುತಿಟ್ಟು ಯಕ್ಷಗಾನ ರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಮೃತ ಮಹೋತ್ಸವದ ಕಾಲಘಟ್ಟದಲ್ಲಿರುವ ಈ ಇಬ್ಬರೂ ನಾದವನ್ನೇ ಬದುಕಾಗಿಸಿಕೊಂಡವರು, ಸ್ವರವನ್ನೇ ಉಸಿರಾಗಿಸಿಕೊಂಡವರು. ಪತಿ-ಪತ್ನಿ ಇಬ್ಬರಿಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಲಭಿಸಿರುವುದೊಂದು ಚಾರಿತ್ರಿಕ ದಾಖಲೆ.
ಸ್ತ್ರೀಯರಿಗೆ ಯಕ್ಷಗಾನ ನೋಡುವುದಕ್ಕೂ ನಿಷೇಧವಿದ್ದ ದಿನಗಳಲ್ಲೇ ರಂಗವೇರಿ, ಮದುವೆಯಾದ ಬಳಿಕವಷ್ಟೇ ಯಕ್ಷಗಾನ ಕಲಿತು, ಅದನ್ನೇ ಉಸಿರಾಗಿಸಿಕೊಂಡು, ವ್ಯವಸಾಯಿ (ಡೇರೆ) ಮೇಳಗಳಲ್ಲಿ ಪ್ರಧಾನ ಭಾಗವತರ ಸ್ಥಾನಕ್ಕೇರಿ ಮೆರೆದವರು ಮತ್ತು ಗಂಡುಮೆಟ್ಟಿನ ಕಲೆಗೆ ಸ್ತ್ರೀಯರ ಪ್ರವೇಶಕ್ಕೆ ನಾಂದಿ ಹಾಡಿದವರು ಲೀಲಾವತಿ ಬೈಪಾಡಿತ್ತಾಯ. ಆ ಕಾಲದಲ್ಲಿ ಒಬ್ಬ ಮಹಿಳೆಯನ್ನು ಯಕ್ಷಗಾನ ರಂಗಕ್ಕೇರಿಸಿ ಅದ್ವಿತೀಯರನ್ನಾಗಿ ಮೆರೆಸಿದ ಹರಿನಾರಾಯಣ ಬೈಪಾಡಿತ್ತಾಯರು, ಭಾಗವತಿಕೆಯಲ್ಲಿ ಅಗರಿ, ಇರಾ, ಬಲಿಪರು ಮತ್ತು ಕಡತೋಕರು, ಚೆಂಡೆ-ಮದ್ದಳೆಯಲ್ಲಿ ನೆಡ್ಲೆ, ದಿವಾಣ, ಕುದ್ರೆಕೋಡ್ಲು, ಬಲ್ಲಾಳರ ಗರಡಿಯಲ್ಲೇ ಪಳಗಿ, ಯಕ್ಷಗಾನೀಯ ಪೆಟ್ಟು-ಮಟ್ಟುಗಳಲ್ಲಿ, ರಂಗ ನಡೆಗಳಲ್ಲಿ 'ಇದಮಿತ್ಥಂ' ಎಂದು ಖಚಿತವಾಗಿ ಹೇಳಬಲ್ಲಷ್ಟು ಪರಿಣತರು. ತಮ್ಮ ಕೀರ್ತಿಶೇಷ ಗುರುಗಳಿಂದ ಪಡೆದ ಅನುಭವಾಮೃತವನ್ನು, ನುಡಿತ-ಬಡಿತಗಳನ್ನು, ಯಕ್ಷಗಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಅವರು ಶ್ರಮಿಸಿ ಶಿಷ್ಯರನ್ನು ರೂಪಿಸಿದ್ದಾರೆ.
ಈ ದಂಪತಿ, ತೆಂಕು ತಿಟ್ಟಿಗೆ ಮಾತ್ರವೇ ಸೀಮಿತವಾಗದೆ, ಬಡಗುತಿಟ್ಟು ಹೆಚ್ಚು ಪ್ರಸಿದ್ಧಿ ಪಡೆದಿರುವ ಉತ್ತರದ ನಾಡುಗಳಲ್ಲಿಯೂ ಅಷ್ಟೇ ಜನಪ್ರಿಯತೆ ಪಡೆದವರು. ಸಾಲಿಗ್ರಾಮದಂತಹಾ ಡೇರೆ ಮೇಳಗಳಲ್ಲಿಯೂ, ಕಾಳಿಂಗ ನಾವಡರಂತಹಾ ಪ್ರಸಿದ್ಧರ ಜೊತೆಗೂ ರಂಗಸ್ಥಳದಲ್ಲಿ ಯಕ್ಷಗಾನೀಯವಾಗಿ ಮೆರೆದಿದ್ದಾರೆ.
ಶಿಷ್ಯರು ಅವರಲ್ಲಿ ಮಾತಾ-ಪಿತರ ವಾತ್ಸಲ್ಯವನ್ನು ಕಂಡಿದ್ದಾರೆ, ಸಹ ಕಲಾವಿದರು ಅವರಲ್ಲೊಬ್ಬ ಗುರುವನ್ನು, ಅಮ್ಮನನ್ನು ಕಂಡಿದ್ದಾರೆ, ಯಕ್ಷಗಾನ ಕಲಾಭಿಮಾನಿಗಳು ಅವರಲ್ಲಿ ನಾದ-ಗಾನ-ರಾಗಗಳ ದೈವತ್ವವನ್ನು ಕಂಡಿದ್ದಾರೆ. ಇಷ್ಟು ಘನತರವಾದ ಗುಣ-ಪ್ರತಿಭಾ ಸಂಪನ್ನರಾಗಿದ್ದರೂ ಪ್ರಚಾರ ಬಯಸದೆ, ತಾವಾಯಿತು ತಮ್ಮ ಯಕ್ಷಗಾನ ಸೇವೆಯಾಯಿತು ಎಂದು ಕಾರ್ಯತತ್ಪರರಾಗಿ ಸರ್ವ ಜನಮಾನ್ಯರಾಗಿದ್ದಾರೆ. ಅವರನ್ನು ಶಿಷ್ಯವೃಂದದವರು ಅಭಿಮಾನದಿಂದ ಗೌರವಿಸಲು ನಿರ್ಧರಿಸಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲೇ ಐತಿಹಾಸಿಕ ದಂಪತಿಯನ್ನು ಗೌರವಿಸುವ ಶುಭ ಸಂದರ್ಭಕ್ಕೆ ಸಾಕ್ಷಿಯಾಗುವಂತೆ ಯಕ್ಷಗಾನ ಕಲಾಭಿಮಾನಿಗಳಿಗೆ ಆತ್ಮೀಯ ಸ್ವಾಗತ ಕೋರುವ
ಶ್ರೀಹರಿಲೀಲಾ -75 ಅಭಿನಂದನ ಸಮಿತಿ
ಗೌರವಾಧ್ಯಕ್ಷರು: ಶ್ರೀ ಡಾ.ಮೋಹನ ಆಳ್ವ
ಅಧ್ಯಕ್ಷರು: ಶ್ರೀ ಚಂದ್ರಶೇಖರ ಕೊಂಕಣಾಜೆ
ಪ್ರಧಾನ ಕಾರ್ಯದರ್ಶಿ: ಶ್ರೀ ಆನಂದ ಗುಡಿಗಾರ
ಸಹ ಕಾರ್ಯದರ್ಶಿಗಳು: ಶ್ರೀ ಗಿರೀಶ್ ಭಟ್ ಕಿನಿಲಕೋಡಿ, ಶ್ರೀ ಗುರುಪ್ರಸಾದ್ ಬೊಳಿಂಜಡ್ಕ, ಶ್ರೀ ಗಿರೀಶ್ ರೈ ಕಕ್ಕೆಪದವು
ಕೋಶಾಧಿಕಾರಿ: ಶ್ರೀ ಅವಿನಾಶ ಬೈಪಾಡಿತ್ತಾಯ
ಕಾರ್ಯದರ್ಶಿಗಳು: ಶ್ರೀಮತಿ ಯೋಗಾಕ್ಷಿ ತಲಕಳ, ಶ್ರೀಮತಿ ಸಾಯಿ ಸುಮಾ ನಾವಡ, ಶ್ರೀಮತಿ ಮೈತ್ರಿ ಉಡುಪ ಕತ್ತಲ್‌ಸಾರ್ ಹಾಗೂ ಬೈಪಾಡಿತ್ತಾಯರ ಸಕಲ ಶಿಷ್ಯರು.
----
ಗುರು ದಂಪತಿಯನ್ನು ಗೌರವಿಸುವ ಈ ಮಹತ್ಕಾರ್ಯಕ್ಕೆ ಕೈಜೋಡಿಸಿ, ಕಲಾಮಾತೆಯ ಅನುಗ್ರಹಕ್ಕೆ ಪಾತ್ರರಾಗಲು ಇಚ್ಛಿಸುವವರು ಡಿಜಿ ಯಕ್ಷ ಫೌಂಡೇಶನ್ (ರಿ), ಬೆಂಗಳೂರು ಇದರ ಬ್ಯಾಂಕ್ ಖಾತೆಗೆ ಆನ್‌ಲೈನ್/ಚೆಕ್/ಡಿಡಿ ಮೂಲಕ ಪಾವತಿಸಬಹುದು.
Name: Digi Yaksha Foundation
Current Account No.: 00000 0402 0448 6998
IFSC Code: SBIN0041189
Bank and Branch: SBI Hosakerehalli, Bengaluru
ಅಥವಾ
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮುಂತಾದ ಆ್ಯಪ್‌ಗಳ ಮೂಲಕ UPI ID: yakshagana@sbi ಅಥವಾ ಕೆಳಗಿನ QR Code ಸ್ಕ್ಯಾನ್ ಮಾಡಿಯೂ ಧನ ಸಹಾಯ ನೀಡಬಹುದು.
Tags:
ಸುದ್ದಿ