ಉಡುಪಿ: ಯಕ್ಷಗಾನ ಕಲಾರಂಗವು ಪ್ರತೀ ವರ್ಷ ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ತೆಂಕು ಬಡಗಿನ 17 ಹಿರಿಯ ಕಲಾವಿದರಿಗೆ ಘೋಷಿಸಲಾಗಿದೆ.
ಕೊಂಡದಕುಳಿ, ಶಬರಾಯ, ದಿನಕರ ಗೋಖಲೆ, ವೇಣೂರು ಸದಾಶಿವ ಕುಲಾಲ್, ರಾಜೀವ ಹೊಸಂಗಡಿ, ಮುಂಡಾಜೆ ಬಾಲಕೃಷ್ಣ ಶೆಟ್ಟಿ ಸೇರಿದಂತೆ 17 ಮಂದಿಯ ಹೆಸರನ್ನು ವಿವಿಧ ಪ್ರಶಸ್ತಿಗಳಿಗೆ ಪರಿಗಣಿಸಲಾಗಿದ್ದು, ನವೆಂಬರ್ 28ರಂದು ಅಪರಾಹ್ನ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಶಸ್ತಿಪ್ರದಾನ ಸಮಾರಂಭ ನಡೆಯಲಿದೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಪ್ರಶಸ್ತಿ ಹಾಗೂ ಪುರಸ್ಕೃತರು:
- ಡಾ. ಬಿ.ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ - ಸುರೇಂದ್ರ ಆಲೂರು, ಕುಂದಾಪುರ
- ಪ್ರೊ. ಬಿ.ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ - ಶಾಂತಾರಾಮ ಆಚಾರಿ, ಬ್ರಹ್ಮಾವರ
- ನಿಟ್ಟೂರು ಸುಂದರ ಶೆಟ್ಟಿ- ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ - ಸದಾಶಿವ ಕುಲಾಲ, ವೇಣೂರು
- ಬಿ. ಜಗಜ್ಜೀವನ್‍ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ - ಕೊರಗಪ್ಪ ರೈ, ಮಾಡಾವು
- ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ - ಕೃಷ್ಣ ಜಿ. ನಾಯ್ಕ್, ಬೇಡ್ಕಣಿ
- ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ - ದಿನಕರ ಗೋಖಲೆ, ಬೆಳ್ತಂಗಡಿ
- ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ - ನಾರಾಯಣ ಶಬರಾಯ ಜಿ. ಎ., ಉಡುಪಿ
- ದಶಾವತಾರಿ ಮಾರ್ವಿರಾಮಕೃಷ್ಣ ಹೆಬ್ಬಾರ್-ಭಾಗವತ ವಾದಿರಾಜ ಹೆಬ್ಬಾರ್ ಸ್ಮರಣಾರ್ಥ ಪ್ರಶಸ್ತಿ - ಬಿ. ಜನಾರ್ದನ ಗುಡಿಗಾರ, ಬೆಳ್ತಂಗಡಿ
- ಶಿರಿಯಾರ ಮಂಜು ನಾಯ್ಕ್ ಸ್ಮರಣಾರ್ಥ ಪ್ರಶಸ್ತಿ - ಕೊಂಡದಕುಳಿ ರಾಮಚಂದ್ರ ಹೆಗಡೆ, ಕುಂಭಾಶಿ
- ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ - ಕೃಷ್ಣ ಮೊಗವೀರ, ಮೊಳಹಳ್ಳಿ
- ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ - ಬೋಳ್ಗೆರೆ ಗಜಾನನ ಭಂಡಾರಿ, ಹೊನ್ನಾವರ
- ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ - ವಿಶ್ವೇಶ್ವರ ರಾವ್, ಕಟೀಲು
- ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ - ನಿಟ್ಟೂರು ಸುಬ್ರಹ್ಮಣ್ಯ ಭಟ್, ಹೊಸನಗರ
- ಐರೋಡಿ ರಾಮಗಾಣಿಗ ಸ್ಮರಣಾರ್ಥ ಪ್ರಶಸ್ತಿ - ಎ ಸದಾನಂದ ಶೆಣೈ, ಕಮಲಶಿಲೆ
- ಎಮ್. ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ - ಅಪ್ಪಕುಂಞಿ ಮಣಿಯಾಣಿ, ಕಾಸರಗೋಡು
- ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ - ರಾಜೀವ ಶೆಟ್ಟಿ, ಹೊಸಂಗಡಿ
- ಶ್ರೀಮತಿ ಪ್ರಭಾವತಿ ವಿ. ಶೆಣೈ, ಶ್ರೀ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ - ಬಾಲಕೃಷ್ಣ ಶೆಟ್ಟಿ, ಮುಂಡಾಜೆ
ನವೆಂಬರ್ 28, ಭಾನುವಾರ ಅಪರಾಹ್ನ 3.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರತೀ ಪ್ರಶಸ್ತಿಯು ₹20,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
Tags:
ಸುದ್ದಿ