ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಡಾ.ಜಿ.ಎಲ್.ಹೆಗಡೆ



ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಹೊಸ ಅಧ್ಯಕ್ಷರಾಗಿ ವಿದ್ವಾಂಸ, ಯಕ್ಷಗಾನ ಕಲಾವಿದ ಡಾ.ಜಿ.ಎಲ್.ಹೆಗಡೆ, ಮಣಕಿ ಅವರನ್ನು ಕರ್ನಾಟಕ ಸರ್ಕಾರವು ನೇಮಿಸಿ ಆದೇಶ ಹೊರಡಿಸಿದೆ.

ನಮ್ಮ ಚಿಟ್ಟಾಣಿ, ಶೇಣಿ ರಾಮಾಯಣ, ಯಕ್ಷಗಾನ ವರ್ಣ ವೈಭವ, ಹಾಲಕ್ಕಿ ಅಧ್ಯಯನ ಮುಂತಾದ ಹಲವು ಕೃತಿಗಳನ್ನು ಡಾ.ಜಿಎಲ್ ಹೆಗಡೆಯವರು ರಚಿಸಿದ್ದು, ಸ್ವತಃ ಯಕ್ಷಗಾನ ಕಲಾವಿದರೂ ಆಗಿದ್ದಾರೆ. ತಾಳಮದ್ದಳೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವರು ಹಲವು ಸಂಶೋಧನಾ ಕೃತಿಗಳನ್ನು ರೂಪಿಸಿದ್ದಾರೆ.
2021ರ ಏಪ್ರಿಲ್ 18ರಂದು ಅಂದಿನ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ.ಎ.ಹೆಗಡೆ ದಂಟ್ಕಲ್ ಅವರ ನಿಧನದ ಬಳಿಕ ಈ ಹುದ್ದಿ ತೆರವಾಗಿತ್ತು. ಕೊರೊನಾ ಕಾಲದಲ್ಲಿ ಯಕ್ಷಗಾನ ಕಲಾವಿದರನ್ನು ಮಾತನಾಡಿಸುತ್ತಿದ್ದ ಯಕ್ಷಗಾನ ಅಕಾಡೆಮಿಗೆ ಮುಂದಾಳು ಇಲ್ಲದೆ ಸಮಸ್ಯೆಯಾಗಿತ್ತು. ಇದೀಗ ಹೊಸ ಅಧ್ಯಕ್ಷರ ಆಗಮನದಿಂದ, ಯಕ್ಷಗಾನ ಕಲಾವಿದರು ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅಕಾಡೆಮಿಯ ನೂತನ ಅಧ್ಯಕ್ಷರಿಗೆ ಯಕ್ಷಗಾನ ಡಾಟ್ ಇನ್ ಜಾಲತಾಣವು ಶುಭ ಕೋರುತ್ತದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು