ಎಂ.ಎಸ್.ರಾಮಯ್ಯ ಸಭಾಭವನದಲ್ಲಿ ಸಂಜೆ 4 ಗಂಟೆಯಿಂದ ನಡೆದ ಕಾರ್ಯಕ್ರಮವನ್ನು ಎಂ.ಎಸ್.ರಾಮಯ್ಯ ಸಿಟಿ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಶನ್ ಹಾಗೂ ಡಿಜಿ ಯಕ್ಷ ಫೌಂಡೇಶನ್ (ರಿ), ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದವು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ದೀಪೋಜ್ವಲನದ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ಬಳಿಕ, ದೂರದ ಮಂಗಳೂರಿನಿಂದ ಆಗಮಿಸಿದ ಶ್ರೀಮತಿ ಅಮೃತಾ ಕೌಶಿಕ್ ರಾವ್ ಹಾಗೂ ಸ್ಥಳೀಯ ಭಾಗವತರಾದ ಎಲ್.ಎನ್.ಕಲ್ಚಾರ್ ಅವರಿಂದ ಯಕ್ಷಗಾನ ಹಿಮ್ಮೇಳದೊಂದಿಗೆ ಯಕ್ಷಗಾನದ ಹಾಡುಗಳ 'ಯಕ್ಷ ಧ್ವನಿ' ಸ್ವರ-ನಾದ ಸಂಭ್ರಮ ಜರುಗಿತು. ಚೆಂಡೆ - ಮದ್ದಳೆ - ಚಕ್ರತಾಳದಲ್ಲಿ ರವಿಶಂಕರ ಬಡೆಕ್ಕಿಲ, ಅವಿನಾಶ್ ಬೈಪಾಡಿತ್ತಾಯ, ಗಿರೀಶ್ ಪರಂಗೋಡು ಹಾಗೂ ಸತ್ಯನಾರಾಯಣ ಅಡಿಗ ಸಹಕರಿಸಿದರು.
ಆ ಬಳಿಕ ಮೋಕ್ಷದ್ವಯ ತಾಳಮದ್ದಳೆ. ಶ್ರೀಮತಿ ಅಮೃತಾ ಕೌಶಿಕ್ ರಾವ್ ಅವರ ಭಾಗವತಿಕೆಯಲ್ಲಿ, ರವಿಶಂಕರ ಬಡೆಕ್ಕಿಲ, ಸತ್ಯನಾರಾಯಣ ಅಡಿಗ ಹಾಗೂ ಅವಿನಾಶ್ ಬೈಪಾಡಿತ್ತಾಯರ ಹಿಮ್ಮೇಳದೊಂದಿಗೆ ಕುಂಬಳೆ ಪಾರ್ತಿ ಸುಬ್ಬ ವಿರಚಿತ 'ವಾಲಿ ಮೋಕ್ಷ' ಯಕ್ಷಗಾನ ಪ್ರಸಂಗವು ಪ್ರದರ್ಶನಗೊಂಡಿತು. ವಾಲಿಯಾಗಿ ಅವಿನಾಶ್ ಶೆಟ್ಟಿ ಉಬರಡ್ಕ, ಸುಗ್ರೀವನಾಗಿ ವಿಷ್ಣು ಕಿದೂರು, ಶ್ರೀರಾಮನಾಗಿ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಹಾಗೂ ತಾರೆಯಾಗಿ ಡಾ.ಕೀರ್ತಿ ಬದಿಯಡ್ಕ ಅವರು ಪಾತ್ರ ಪ್ರಸ್ತುತಿಪಡಿಸಿದರು.
ನಂತರ, ಮೂಲಿಕೆ ರಾಮಕೃಷ್ಣಯ್ಯ ವಿರಚಿತ 'ಸುಧನ್ವ ಮೋಕ್ಷ' ತಾಳಮದ್ದಳೆಯು ಎಲ್.ಎನ್.ಕಲ್ಚಾರ್ ಭಾಗವತಿಕೆ ಹಾಗೂ ಅವಿನಾಶ್ ಬೈಪಾಡಿತ್ತಾಯ, ಗಿರೀಶ್ ಪರಂಗೋಡು, ಪೃಥ್ವಿ ಪಡೆಕ್ಕಿಲ ಹಿಮ್ಮೇಳದಲ್ಲಿ ಪ್ರದರ್ಶನಗೊಂಡಿತು. ಸುಧನ್ವನಾಗಿ ವಿದ್ವಾನ್ ಎ.ಎಸ್.ವಾಸಿಷ್ಠ, ಅರ್ಜುನನಾಗಿ ಕೃಷ್ಣ ಜೋಯಿಸ್ ಹಾಗೂ ಶ್ರೀಕೃಷ್ಣನಾಗಿ ಆರ್.ಎಸ್.ಆಚಾರ್ಯ ಅವರು ಪಾತ್ರ ಪ್ರಸ್ತುತಿಪಡಿಸಿದರು.
ಕಾರ್ಯಕ್ರಮದ ಸಂಘಟಕ ಆರ್.ಎಸ್.ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್.ರಾಮಯ್ಯ ಸಿಟಿ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಶನ್ ಪದಾಧಿಕಾರಿಗಳು ಪೂರ್ಣ ಸಹಕಾರ ನೀಡಿದ್ದರು.
Tags:
ಸುದ್ದಿ