ಪೆರ್ಲ: ಕೀರ್ತಿಶೇಷ ಕಲಾವಿದ ಪಡ್ರೆ ಚಂದು ಹೆಸರಿನಲ್ಲಿ ಪ್ರತಿ ವರ್ಷ ಕೊಡಮಾಡುವ, 2022ನೇ ಸಾಲಿನ ಪಡ್ರೆ ಚಂದು ಪ್ರಶಸ್ತಿಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಅರುವ ಕೊರಗಪ್ಪ ಶೆಟ್ಟಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಸಬ್ಬಣಕೋಡಿ ರಾಮ ಭಟ್, ಶ್ರುತಕೀರ್ತಿ ರಾಜ್, ದಿನೇಶ್ ಅಮ್ಮಣ್ಣಾಯ, ಧನಂಜಯ ಕುಂಬ್ಳೆ, ನರೇಂದ್ರ ಕುಮಾರ್, ಸರಪಾಡಿ ಅಶೋಕ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ |
ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 17ನೇ ವಾರ್ಷಿಕೋತ್ಸವ ಸಂದರ್ಭ ಭಾನುವಾರ ಇಲ್ಲಿ ನಡೆದ ಸಮಾರಂಭದಲ್ಲಿ ಕೊರಗಪ್ಪ ಶೆಟ್ಟರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ನಿವೃತ್ತ ಹಿರಿಯ ಯಕ್ಷಗಾನ ಕಲಾವಿದ ಕೊರಗಪ್ಪ ನಾಯ್ಕ ಕಾಟುಕುಕ್ಕೆ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ನಿವೃತ್ತ ಶಿಕ್ಷಕ, ಯಕ್ಷಗಾನ ಕಲಾವಿದ ನರೇಂದ್ರ ಕುಮಾರ್ ಧರ್ಮಸ್ಥಳ ಅವರಿಗೆ ವಿಶೇಷ ಪ್ರಶಸ್ತಿ, ಹಿರಿಯ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ತೆಂಕಬೈಲು ಭಾಗವತ ಪ್ರಶಸ್ತಿ, ಭಾಗವತ ದಿನೇಶ ಅಮ್ಮಣ್ಣಾಯ ಅವರಿಗೆ ಚೇವಾರು ಕಾಮತ್ ಪ್ರಶಸ್ತಿ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರಿಗೆ ಅಡ್ಕಸ್ಥಳ ಮಾಯಿಲೆಂಗಿ ಸಂಜೀವ ಶೆಟ್ಟಿ ಪ್ರಶಸ್ತಿ ಹಾಗೂ ಪ್ರಸಾಧನ ಕಲಾವಿದ ರಾಮ ಜೋಡುಕಲ್ಲು ಅವರಿಗೆ ದೇವಕಾನ ಪ್ರಶಸ್ತಿಯನ್ನು ಇದೇ ಸಂದರ್ಭ ನೀಡಿ ಗೌರವಿಸಲಾಯಿತು.
ಮಂಗಳೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ, ಯಕ್ಷಗಾನ ಕಲಾವಿದ ಪಶುಪತಿ ಶಾಸ್ತ್ರಿ ಶಿರಂಕಲ್ಲು ಅಧ್ಯಕ್ಷತೆ ವಹಿಸಿದ್ದರು. ಕಲಾ ಪೋಷಕ, ನಿವೃತ್ತ ಉಪನ್ಯಾಸಕ ಎನ್.ಕೆ.ರಾಮಚಂದ್ರ ಭಟ್ ಅವರು ಅಭಿನಂದನ ಭಾಷಣ ಮಾಡಿದರು.
ನ್ಯಾಯವಾದಿ ಪ್ರಕಾಶ ನಾರಾಯಣ ಜೆಡ್ಡು, ಉಪನ್ಯಾಸಕ, ಯಕ್ಷಗಾನ ಕಲಾವಿದ ಡಾ.ಶ್ರುತಕೀರ್ತಿ ರಾಜ್ ಉಜಿರೆ, ಮುಡಿಪು ಪಿಯು ಕಾಲೇಜಿನ ಉಪನ್ಯಾಸಕ ಡಾ.ಅಶ್ವಿನ್ ತೇಜಸ್ವಿ ಉಚ್ಚಿಲ, ಮೂಡುಬಿದಿರೆ ಚಿನ್ಮಯ ಕಲಾಕೇಂದ್ರದ ಅಧ್ಯಕ್ಷ ಎಂ.ಗೋವರ್ಧನ್, ಕರ್ಣಾಟಕ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ಪ್ರಬಂಧಕ ಜಗದೀಶ್ ಬಲ್ಲಾಳ್ ಉಪಸ್ಥಿತರಿದ್ದರು.
ಪಡ್ರೆ ಚಂದು ಸ್ಮಾರಕ ನಾಟ್ಯ ತರಬೇತಿ ಕೇಂದ್ರದ ಮುಖ್ಯಸ್ಥ, ಯಕ್ಷಗಾನ ಗುರು ಸಬ್ಬಣಕೋಡಿ ರಾಮ ಭಟ್ ಸ್ವಾಗತಿಸಿದರು. ಶ್ರೇಯಸ್ ಗಣೇಶ್ ಬೆಂಗಳೂರು ವಂದಿಸಿದರು. ಉದಯಕುಮಾರ್ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನದ ಪೂರ್ವರಂಗ ಪ್ರದರ್ಶನ, ಚಿನ್ಮಯ ಕಲಾಕೇಂದ್ರ ಸದಸ್ಯೆಯರಿಂದ ಮೀನಾಕ್ಷಿ ಕಲ್ಯಾಣ, ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರ ಚಂಡಿಕೆ, ಕದಳೀವನದೊಳು ಮದದಾನೆ ಹೊಕ್ಕಂದದಲಿ - ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಂಡವು.
Tags:
ಸುದ್ದಿ