ಬೆಂಗಳೂರಿನ ಯಕ್ಷವಾಹಿನಿ ಸಂಸ್ಥೆ ಆನ್‌ಲೈನ್ ಮೂಲಕ ಆಯೋಜಿಸಿದ್ದ ತಿಂಗಳ ಯಕ್ಷಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಯಕ್ಷಗಾನವು ರಾಜ್ಯದ ಪ್ರಾತಿನಿಧಿಕ ಕಲೆಯಾಗಬೇಕು. ಜೊತೆಗೆ ಅದರ ಸಾಹಿತ್ಯ ಮೌಲ್ಯ ಸಿಗಬೇಕು. ಈ ನಿಟ್ಟಿನಲ್ಲಿ ಮುಂದೆ ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಸಾಹಿತ್ಯದ ಬಗ್ಗೆ ಗೋಷ್ಠಿಗಳನ್ನು ಹಾಗೂ ಯಕ್ಷಗಾನ ಸಾಹಿತ್ಯವನ್ನು ಬೆಳೆಸುವುದಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದ ಮುಖ್ಯ ಭಾಗವಾಗಿ 18ನೇ ಶತಮಾನದಲ್ಲಿ ರಚನೆಯಾದ ಹಳೆಮಕ್ಕಿ ರಾಮ ವಿರಚಿತ 'ಕೃಷ್ಣಾರ್ಜುನ ಕಾಳಗ' ಯಕ್ಷಗಾನ ಕೃತಿಯ ಸಾಹಿತ್ಯ ಅವಲೋಕನವನ್ನು ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್ ಮಾಡಿದರು. ಪ್ರಸಂಗಕರ್ತರು ಪ್ರಸಂಗದಲ್ಲಿ ಕವಿಯು ಬಳಸಿದ ರಾಗ, ತಾಳ, ಛಂದಸ್ಸಿನ ಬಗ್ಗೆ ವಿಶ್ಲೇಷಿಸಿ, ಸಾಹಿತ್ಯಕವಾಗಿ ಈ ಕೃತಿಯು ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಡಾ.ಆನಂದರಾಮ ಉಪಾಧ್ಯರು ಸಮನ್ವಯ ನಡೆಸಿದರು. ಯಕ್ಷವಾಹಿನಿಯ ನಟರಾಜ್ ಉಪಾಧ್ಯ, ಶ್ರೀಧರ್ ಡಿ.ಎಸ್., ಗಿಂಡಿಮನೆ ಮೃತ್ಯುಂಜಯ ಮುಂತಾದವರು ಉಪಸ್ಥಿತರಿದ್ದರು.
Tags:
ಸುದ್ದಿ