ಹೊಳೆಗೆ ಬಿದ್ದ ಬಸ್ಸು: ಯಕ್ಷಗಾನ ಹಾಸ್ಯಗಾರ ಮಹಾಬಲೇಶ್ವರ ಭಾಗಮಂಡಲ ಸಹಿತ 25 ಮಂದಿಗೆ ಗಾಯ

ಹೊಳೆಗೆ ಬಿದ್ದ ಬಸ್ಸು. ಒಳಚಿತ್ರದಲ್ಲಿ ಗಾಯಾಳು ಹಾಸ್ಯಗಾರ ಮಹಾಬಲೇಶ್ವರ ಭಾಗಮಂಡಲ.

ಸುಳ್ಯ: ಧರ್ಮಸ್ಥಳದಿಂದ ಗುಂಡ್ಲುಪೇಟೆಗೆ ಸಾಗುವ ಕೆಎಸ್ಸಾರ್ಟಿಸಿ ಬಸ್ಸೊಂದು ಸಂಪಾಜೆಯ ಗಡಿಗಲ್ಲು ಎಂಬಲ್ಲಿ ಗುರುವಾರ ಮಧ್ಯಾಹ್ನ ಹೊಳೆಗೆ ಬಿದ್ದಿದ್ದು, ಯಕ್ಷಗಾನ ಹಾಸ್ಯ ಕಲಾವಿದ ಮಹಾಬಲೇಶ್ವರ ಭಾಗಮಂಡಲ ಅವರ ಸಹಿತ ಸುಮಾರು 25 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಹಾಬಲೇಶ್ವರ ಭಾಗಮಂಡಲ ಅವರು ಖ್ಯಾತ ಹಾಸ್ಯ ಕಲಾವಿದರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರ ಮನೆಯವರಿಗೂ ವಿಷಯ ತಿಳಿಸಲಾಗಿದ್ದು, ಅವರು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಸುಳ್ಯ ತಾಲೂಕಿನ ಆರಂತೋಡು ಬಳಿ ಈ ಘಟನೆ ನಡೆದಿದೆ. ಬಸ್ಸಿನ ಮುಂದಿನ ಟೈರು ಸ್ಫೋಟಗೊಂಡಾಗ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ಇದರಿಂದಾಗಿ, ರಸ್ತೆಯಿಂದ ಸುಮಾರು 25 ಅಡಿ ಕೆಳಗೆ ಹೊಳೆಗೆ ಬಿದ್ದಿದೆ. ಆದರೆ, ಹೊಳೆಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆ ಇದ್ದ ಕಾರಣದಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.

ಬಸ್ಸಿನಲ್ಲಿ ಸುಮಾರು 25ರಷ್ಟು ಪ್ರಯಾಣಿಕರಿದ್ದು, ಎಲ್ಲರಿಗೂ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು