ತುಮಕೂರಿನ ಯಕ್ಷದೀವಿಗೆ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಬೆಂಗಳೂರಿನ ಡಿಜಿ ಯಕ್ಷ ಫೌಂಡೇಶನ್ ಸಹಯೋಗದಲ್ಲಿ 13 ಮೇ 2022ರ ಶುಕ್ರವಾರ ಅಮಾನಿಕೆರೆ ಎದುರಿನ ಕನ್ನಡ ಭವನದಲ್ಲಿ ಎರಡು ದಿನಗಳ ಯಕ್ಷಗಾನ ಮುಖವರ್ಣಿಕೆ ಕಮ್ಮಟವು ಉದ್ಘಾಟನೆಗೊಂಡಿತು.
ಸ್ಥಳೀಯ ಮಕ್ಕಳಿಗೆ ಮುಖವರ್ಣಿಕೆಯ ಮಹತ್ವದೊಂದಿಗೆ, ಯಕ್ಷಗಾನದ ಮುಖವರ್ಣಿಕೆಯ ವೈವಿಧ್ಯ, ಅದರ ಪ್ರಾಮುಖ್ಯ ಸಹಿತವಾಗಿ ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಯಕ್ಷಗಾನ ಕಲಾವಿದ, ಲೇಖಕ ಹಾಗೂ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಮತ್ತು ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತ ಪ್ರಸಾಧನ ಕಲಾವಿದ ದಿವಾಕರ ದಾಸ್ ಅವರು ಮಾಹಿತಿ ನೀಡಿ, ಕಮ್ಮಟ ನಡೆಸಿಕೊಟ್ಟರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ರಂಗನಿರ್ದೇಶಕ ನಾಟಕಮನೆ ಮಹಾಲಿಂಗು, ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜು, ವಿ-ಟೆಕ್ ಸೊಲ್ಯೂಶನ್ಸ್‌ನ ಪ್ರಿಯಾ ಪ್ರದೀಪ್, ಯಕ್ಷ ದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆ, ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಭಾಗವಹಿಸಿದ್ದರು.
ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಕೆ.ವಿ. ಅವರ ಸಂಚಾಲಕತ್ವದಲ್ಲಿ ಕಮ್ಮಟ ನಡೆಯುತ್ತಿದ್ದು, ಸ್ಥಳೀಯ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ವಿನೂತನವಾದ ಯಕ್ಷಗಾನ ಬಣ್ಣಗಾರಿಕೆಯ ಒಳ-ಹೊರಗುಗಳನ್ನು ಅರಿತು ಸಂಭ್ರಮಿಸುತ್ತಿದ್ದಾರೆ.
ಪೂರಕ ಮಾಹಿತಿ ಇಲ್ಲಿದೆ: ಮೇ 13, 14: ತುಮಕೂರಿನಲ್ಲಿ ಯಕ್ಷಗಾನ ಬಣ್ಣಗಾರಿಕೆ ಕಮ್ಮಟ, ಯಕ್ಷಗಾನ ಪ್ರದರ್ಶನ, ಯಕ್ಷದೀವಿಗೆ ವಾರ್ಷಿಕ ಗೌರವ ಪ್ರದಾನ
#Yakshagana #ಯಕ್ಷಗಾನ
Tags:
ಸುದ್ದಿ