ಬೆಳಿಗ್ಗೆ 9.30ರಿಂದ ಮಧ್ಯರಾತ್ರಿಯವರೆಗೂ ತೆಂಕು ಬಡಗು ಯಕ್ಷಗಾನ ವೈಭವ, ತಾಳಮದ್ದಳೆ, ಯಕ್ಷಗಾನ ಪ್ರದರ್ಶನಗಳ ಜೊತೆಗೆ, ಕಲಾವಿದರಿಗೆ, ಕಲಾ ಪೋಷಕರಿಗೆ ಗೌರವಾರ್ಪಣೆ, ಕಲಾವಿದರ ಕುಟುಂಬಕ್ಕೆ ಸಹಾಯಧನ ವಿತರಣೆಯೂ ನಡೆಯಲಿದೆ.
ಇದರೊಂದಿಗೆ, ಕೊಳ್ತಿಗೆ ಲೈವ್ ಮೀಡಿಯಾದ ಮೂಲಕ ಯಕ್ಷಗಾನವು ನೇರ ಪ್ರಸಾರ ಕಾಣಲಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ತೆಂಕು-ಬಡಗು ಯಕ್ಷಗಾನ ವೈಭವ
ಬೆಳಿಗ್ಗೆ 9.30ರಿಂದ ತೆಂಕು ತಿಟ್ಟಿನ ಬಲಿಪ ಶಿವಶಂಕರ ಭಟ್, ಡಾ.ಸತ್ಯನಾರಾಯಣ ಪುಣಿಂಚಿತ್ತಾಯ, ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಗುರುಪ್ರಸಾದ, ಹಾಗೂ ಬಡಗು ತಿಟ್ಟಿನ ಗಣೇಶ್ ಕುಮಾರ್ ಹೆಬ್ರಿ ಮತ್ತು ಚಂದ್ರಕಾಂತ ರಾವ್ ಮೂಡುಬೆಳ್ಳೆ ಅವರು ಯಕ್ಷ-ಗಾನ ವೈಭವ ನಡೆಸಿಕೊಡಲಿದ್ದಾರೆ. ಚೆಂಡೆ ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಲವಕುಮಾರ್ ಐಲ, ರೋಹಿತ್ ಉಚ್ಚಿತ, ಕೋಟ ಶಿವಾನಂದ, ರಾಘವೇಂದ್ರ ಹೆಗಡೆ ಯಲ್ಲಾಪುರ ಭಾಗವಹಿಸಲಿದ್ದು, ಪತ್ರಕರ್ತ ಲಕ್ಷ್ಮೀ ಮಚ್ಚಿನ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಇಂದ್ರತಂತ್ರ-ಪ್ರಹ್ಲಾದ ಶಾಪ ತಾಳಮದ್ದಳೆ
ಮಧ್ಯಾಹ್ನ 1.30ರಿಂದ ಇಂದ್ರತಂತ್ರ-ಪ್ರಹ್ಲಾದ ಶಾಪ (ಕವಿ.ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಮತ್ತು ಪ್ರೊ.ಎಂ.ಎ.ಹೆಗಡೆ) ಆಖ್ಯಾನಗಳು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಗೊಳ್ಳಲಿವೆ.
ದಿನೇಶ್ ಅಮ್ಮಣ್ಣಾಯ ಮತ್ತು ಪುರುಷೋತ್ತಮ ಭಟ್ ನಿಡುವಜೆ ಭಾಗವತಿಕೆ, ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು, ದೇವಾನಂದ ಭಟ್ ಬೆಳುವಾಯಿ, ಶ್ರೀಧರ ವಿಟ್ಲ, ಅಕ್ಷಯ ರಾವ್ ವಿಟ್ಲ ಚೆಂಡೆ-ಮದ್ದಳೆ ಹಾಗೂ ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗ ಭಟ್ ಮಧೂರು, ಗಣಪತಿ ಭಟ್ ಸಂಕದಗುಂಡಿ, ಶ್ರೀರಮಣ ಆಚಾರ್ಯ ಕಾರ್ಕಳ, ಮಂಜುನಾಥ್ ಗೊರೆಮನೆ ಅವರು ಮುಮ್ಮೇಳದಲ್ಲಿ ಸಹಕರಿಸುವರು.
ತೆಂಕು-ಬಡಗು ಯಕ್ಷಗಾನ ಕೃಷ್ಣಾರ್ಜುನ
ಸಂಜೆ 6.30ರಿಂದ ಬಾಯಾರು ಸಂಕಯ್ಯ ಭಾಗವತ ಹಾಗೂ ಹಳೆಮಕ್ಕಿ ರಾಮ ಅವರ ಸಾಹಿತ್ಯದೊಂದಿಗೆ ಕೃಷ್ಣಾರ್ಜುನ - ತೆಂಕು-ಬಡಗು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ರವಿಚಂದ್ರ ಕ್ನಡಿಕಟ್ಟೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರು ಅವರು ಭಾಗವತಿಕೆಯಲ್ಲಿ, ಚಂದ್ರಶೇಖರ ಭಟ್ ಕೊಂಕಣಾಜೆ ಮತ್ತು ಚೈತನ್ಯಕೃಷ್ಣ ಪದ್ಯಾಣ (ತೆಂಕು) ಮತ್ತು ಶಿವಾನಂದ ಕೋಟ, ರಾಘವೇಂದ್ರ ಹೆಗಡೆ ಯಲ್ಲಾಪುರ (ಬಡಗು) ಹಿಮ್ಮೇಳದಲ್ಲಿ ರಂಜಿಸಲಿದ್ದಾರೆ. ಶಂಕರ ಹೆಗಡೆ ನೀಲ್ಕೋಡ್ ಮತ್ತು ರಕ್ಷಿತ್ ಶೆಟ್ಟಿ ಪಡ್ರೆ ಅವರ ಸ್ತ್ರೀಪಾತ್ರ, ಬಾಲಕೃಷ್ಣ ಮಣಿಯಾಣಿ ಮವ್ವಾರು ಅವರ ಹಾಸ್ಯ ಮತ್ತು ಮುಮ್ಮೇಳದ ಪುರುಷ ಪಾತ್ರಗಳಲ್ಲಿ ಸುಬ್ರಾಯ ಹೊಳ್ಳ ಕಾಸರಗೋಡು, ಉದಯ ಹೆಗಡೆ ಕಡಬಾಳ, ರವಿ ಭಟ್ ನೆಲ್ಯಾಡಿ, ಶಶಾಂಕ್ ಪಟೇಲ್, ಕಾರ್ತಿಕ್ ಕಣ್ಣಿಮನೆ, ಅಕ್ಷಯ ಭಟ್ ಮೂಡಬಿದ್ರೆ, ಚಿತ್ತರಂಜನ್ ಭಾಗವಹಿಸಲಿದ್ದಾರೆ.
ಬ್ರಹ್ಮಸಾರಥ್ಯ ಯಕ್ಷಗಾನ
ರಾತ್ರಿ 10.30ರಿಂದ ಮಧ್ಯರಾತ್ರಿವರೆಗೆ ವಿನೂತನ ಪ್ರಸಂಗ, ಕವಿ ಶ್ರೀಧರ ಡಿ.ಎಸ್. ಕಿನ್ನಿಗೋಳಿ ವಿರಚಿತ 'ಬ್ರಹ್ಮಸಾರಥ್ಯ' ಪ್ರದರ್ಶನಗೊಳ್ಳಲಿದೆ.
ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಹೊಸಮೂಲೆ ಗಣೇಶ್ ಭಟ್ ಭಾಗವತಿಕೆ, ಗಿರೀಶ್ ಭಟ್ ಕಿನಿಲಕೋಡಿ, ಶಿತಿಕಂಠ ಭಟ್ ಉಜಿರೆ ಹಿಮ್ಮೇಳ ಮತ್ತು ಸರಪಾಡಿ ಅಶೋಕ ಶೆಟ್ಟಿ, ಸದಾಶಿವ ಕುಲಾಲ್ ವೇಣೂರು, ವಿಷ್ಣುಶರ್ಮ ವಾಟೆಪಡ್ಪು, ದಿನೇಶ್ ಶೆಟ್ಟಿಗಾರ್ ಕೋಡಪದವು, ಶ್ರುತಕೀರ್ತಿ ರಾಜ್ ಉಜಿರೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಗಣರಾಜ್ ಭಟ್ ಬಡೆಕ್ಕಿಲ, ಶಿಶ ಮಣಿಲಾ, ಮಂದಾರ ಮೂಡಬಿದ್ರೆ, ಕಿಶನ್, ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ, ದೀಪ್ ಆಚಾರ್, ಅತಿಶಯ ರಾವ್ ಅವರು ಮುಮ್ಮೇಳದಲ್ಲಿ ರಂಜಿಸಲಿದ್ದಾರೆ.
ರಮೇಶ್ ಕಜೆ, ನವೀನಚಂದ್ರ ಮೊಗರ್ನಾಡು ಮತ್ತು ಚಿನ್ಮಯ ಭಟ್ ಅಡ್ಯನಡ್ಕ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ.
ಕಲಾವಿದರಿಗೆ, ಕಲಾ ಕುಟುಂಬಕ್ಕೆ ಗೌರವ
ಇದೇ ಸಂದರ್ಭದಲ್ಲಿ, ಕಲಾವಿದರನ್ನು ಗೌರವಿಸುವ, ಕಲಾ ಕುಟುಂಬಕ್ಕೆ ಸಹಾಯಧನ ನೀಡುವ ಕಾರ್ಯಕ್ರಮವೂ ಇದೆ.
ಕಲಾವಿದರಾದ ಮದ್ದಳೆವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ವೇಷಧಾರಿ ಬಾಲಕೃಷ್ಣ ಮಣಿಯಾಣಿ ಮವ್ವಾರು, ನೇಪಥ್ಯ ಕಲಾವಿದ ಮೋನಪ್ಪ ಗೌಡ ಕಿನ್ನಿಕೊಡಂಗೆ, ಕಲಾವಿದೆ, ರತ್ನಾ ಕೆ. ಭಟ್ ತಲಂಚೇರಿ ಮತ್ತು ನಾಟಿವೈದ್ಯ ಸಂಜೀವ ದೇವಾಡಿಗ ಹಚ್ಚಾಡಿ ಅವರಿಗೆ ಕಲಾಪೋಷಕರ ಗೌರವಾರ್ಪಣೆ ನಡೆಯಲಿದೆ. ಜೊತೆಗೆ, ಇತ್ತೀಚೆಗೆ ಯಕ್ಷಗಾನ ರಂಗದಿಂದ ಮರೆಯಾದ ದಿ.ಬಲಿಪ ಪ್ರಸಾದ ಭಟ್ ಹಾಗೂ ದಿ.ವಾಮನ ಕುಮಾರ್ ವೇಣೂರು ಅವರ ಕುಟುಂಬಕ್ಕೆ ಸಹಾಯಧನ ವಿತರಣೆಯೂ ನಡೆಯಲಿದೆ.
ಪ್ರದರ್ಶನ ಉಚಿತವಾಗಿದ್ದು, ಕಲಾ ಪೋಷಕರು, ಸಹೃದಯಿಗಳು ತನು, ಮನ ಧನದ ಸಹಕಾರ ನೀಡುವಂತೆ ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ ಮುರಾರಿ ಭಟ್ ಪಂಜಿಗದ್ದೆ ಅವರು ವಿನಂತಿಸಿಕೊಂಡಿದ್ದಾರೆ. ಅವರ ಫೋನ್ ಸಂಖ್ಯೆ (ಗೂಗಲ್ ಪೇ, ಫೋನ್‌ಪೇ) 97406 69531 ಮೂಲಕ ಅವರನ್ನು ಸಂಪರ್ಕಿಸಿ ನೆರವು ನೀಡಬಹುದು.
Tags:
ಸುದ್ದಿ