ಪ್ರಖ್ಯಾತ ತುಳು ಪ್ರಸಂಗಗಳ ಗುಚ್ಛ: ಎಡನೀರಿನಲ್ಲಿ ಬಿಡುಗಡೆ

ಎಡನೀರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕದ್ರಿ ನವನೀತ ಶೆಟ್ಟಿ ಸಂಪಾದಕತ್ವದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹೊರತಂದಿರುವ ತುಳು ಪ್ರಸಂಗಗಳ ಗುಚ್ಛವನ್ನು ಬಿಡುಗಡೆಗೊಳಿಸಲಾಯಿತು.

ಎಡನೀರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಕಾಶಿಸಿದ, ಕದ್ರಿ ನವನೀತ ಶೆಟ್ಟಿ ಸಂಪಾದಿಸಿದ, ಹಿರಿಯ ಕವಿಗಳ ಆರು ಪ್ರಸಂಗಗಳ ಗುಚ್ಛವನ್ನು ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಇತ್ತೀಚೆಗೆ ಬಿಡುಗಡೆ ಮಾಡಿದರು.

ಬ್ರಹ್ಮೈಕ್ಯ ಕೇಶವಾನಂದ ಭಾರತೀ ಶ್ರೀಗಳ ಪುಣ್ಯ ಸ್ಮೃತಿ, ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ (ಏಪ್ರಿಲ್ 2022) ಸಂದರ್ಭದಲ್ಲಿ 'ತುಳು ಯಕ್ಷಗಾನ ಪ್ರಸಂಗ ಸಂಪುಟ-2' ಹೆಸರಿನ ಆರು ಪ್ರಸಂಗಗಳ 'ಜೊಂಕಿಲ್' ಬಿಡುಗಡೆ ಮಾಡಲಾಯಿತು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಈ ಸಂಪುಟದಲ್ಲಿ ಬಾಯಾರು ಸಂಕಯ್ಯ ಭಾಗವತರ ತುಳು 'ಪಂಚವಟಿ ವಾಲಿ ಸುಗ್ರೀವೆರೆ ಕಾಳಗೊ', ನಾರಂಪಾಡಿ ಸುಬ್ಬಯ್ಯ ಶೆಟ್ಟಿಯವರ 'ಕೋರ್ದಬ್ಬು ಬಾರಗ', ಅಗರಿ  ಶ್ರೀನಿವಾಸ ಭಾಗವತರ 'ಬಪ್ಪನಾಡು ಕ್ಷೇತ್ರ ಮಹಾತ್ಮೆ', ಸೀತಾನದಿ ಗಣಪಯ್ಯ ಶೆಟ್ಟಿಯವರ 'ತುಳುನಾಡ ಸಿರಿ ಮಹಾತ್ಮೆ', ಅನಂತರಾಮ ಬಂಗಾಡಿಯವರ 'ಕಾಡಮಲ್ಲಿಗೆ' ಹಾಗೂ ಅಡೂರು ಬಳಕಿಲ ಕೃಷ್ಣಯ್ಯ ಅವರ 'ದೇವುಪೂಂಜ ಪ್ರತಾಪ' ಪ್ರಸಂಗಗಳಿವೆ.

ಕವಿ - ಪ್ರಕಾಶಕರ ದಾಖಲಾತಿಯ ದೃಷ್ಟಿಯಿಂದ ಈ ಪ್ರಸಂಗಗಳ ಮೂಲ ಮುದ್ರಿತ ಪ್ರತಿಗಳನ್ನು ಮುನ್ನುಡಿ ಸಹಿತ ಯಥಾವತ್ತಾಗಿ ಮುದ್ರಿಸಲಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ, ರಿಜಿಸ್ಟ್ರಾರ್ ಎಸ್‌.ಎಚ್‌.ಶಿವರುದ್ರಪ್ಪ, ಸಂಪಾದಕ, ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ಹಿರಿಯ ಅರ್ಥಧಾರಿಗಳೂ, ಸಾಹಿತಿಗಳೂ ಆದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಮತ್ತು ರಾಧಾಕೃಷ್ಣ ಕಲ್ಚಾರ್, ನಾರಂಪಾಡಿಯವರ ಮೊಮ್ಮಗ, ಯಕ್ಷಗಾನ ವೇಷಧಾರಿ ಹರೀಶ್ ಶೆಟ್ಟಿ ಮಣ್ಣಾಪು ಉಪಸ್ಥಿತರಿದ್ದರು‌.

ಯಕ್ಷಗಾನ ಸಂಘಟಕ, ನಿರೂಪಕ ಜನಾರ್ದನ ಅಮ್ಮುಂಜೆ ಕೃತಿ ಪರಿಚಯ ಮಾಡಿದರು. ಕಾರ್ತಿಕ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು. ಸಿರಿಚಂದನ ಕನ್ನಡ ಯುವಬಳಗ (ರಿ), ಕಾಸರಗೋಡು ಅಕಾಡೆಮಿ ಪ್ರಾಯೋಜಕತ್ವದಲ್ಲಿ ಹಾಗೂ ಶ್ರೀ ಎಡನೀರು ಸಂಸ್ಥಾನದ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು