ಆ.27ರಂದು ಪೆರುವಡಿ ಹಾಸ್ಯಗಾರರಿಗೆ ಭ್ರಾಮರಿ ಯಕ್ಷಮಣಿ ಪ್ರಶಸ್ತಿ, ಮಂಗಳೂರಲ್ಲಿ ಭರ್ಜರಿ ಯಕ್ಷಗಾನ


ಮಂಗಳೂರು: ವಾಟ್ಸ್ಆ್ಯಪ್ ಬಳಗವಾಗಿ ಆರಂಭಗೊಂಡ ಭ್ರಾಮರೀ ಯಕ್ಷಮಿತ್ರರು ಬಳಗವು ಇದೀಗ ನೋಂದಾಯಿತ ಸಂಸ್ಥೆಯಾಗಿದ್ದು, ಪ್ರತಿ ವರ್ಷದಂತೆ ಈ ವರ್ಷದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ಆಗಸ್ಟ್ 27ರ ಶನಿವಾರ ರಾತ್ರಿಯಿಡೀ ನಡೆಯಲಿದೆ.

ಭ್ರಾಮರೀ ಯಕ್ಷಮಿತ್ರರು ಬಳಗದ ಐದನೇ ವರ್ಷದ ಭ್ರಾಮರೀ ಯಕ್ಷವೈಭವ-2022 ಕಾರ್ಯಕ್ರಮದಲ್ಲಿ ಹಿರಿಯ ಹಾಸ್ಯ ಕಲಾವಿದರಾದ ಪೆರುವಡಿ (ಪೆರುವೋಡಿ) ನಾರಾಯಣ ಭಟ್ ಅವರಿಗೆ ಭ್ರಾಮರಿ ಯಕ್ಷಮಣಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ನೇಪಥ್ಯ ಕಲಾವಿದ ಗೋಪಾಲ ಪೂಜಾರಿ ಹಾಗೂ ಬೊಕ್ಕಸ ಜಗನ್ನಾಥ ರಾವ್ ಅವರಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಸಂಜೆ 7 ಗಂಟೆಯಿಂದ ನಡೆಯುವ ಕಾರ್ಯಕ್ರಮಕ್ಕೆ ಹಿರಿಯ ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂತ ಕಾರಂತರು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಧಾರ್ಮಿಕ ಪರಿಷತ್ ಸದಸ್ಯ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಈ ಸಂದರ್ಭದಲ್ಲಿ ದಿವಂಗತ ಬಲಿಪ ಪ್ರಸಾದ ಭಟ್ ಅವರ ಸಂಸ್ಮರಣೆ ನಡೆಯಲಿದೆ. ಜೊತೆಗೆ ಭರ್ಜರಿಯಾಗಿ ಮೂರು ಯಕ್ಷಗಾನ ಪ್ರಸಂಗಗಳ ಪ್ರದರ್ಶನವು ಪೂರ್ವರಂಗ, ಚೆಂಡೆ ಜುಗಲ್‌ಬಂದಿಯೊಂದಿಗೆ ಉಚಿತವಾಗಿ ಜರುಗಲಿದೆ.

ಪೂರ್ಣ ವಿವರ ಈ ಕೆಳಗಿದೆ:
ಭ್ರಾಮರೀ ಯಕ್ಷಮಿತ್ರರು (ರಿ) ಬಳಗದ ಐದನೇ ವರ್ಷದ ಭ್ರಾಮರೀ ಯಕ್ಷವೈಭವ - 2022
ದಿನಾಂಕ: ಆಗಸ್ಟ್ 27 ಶನಿವಾರ
ಸಮಯ: ಸಂಜೆ 7 ರಿಂದ ಮರುದಿನ ಮುಂಜಾನೆವರೆಗೆ

ಸಭಾ ಕಾರ್ಯಕ್ರಮ 
ಯಕ್ಷಗಾನದ ಹಿರಿಯ ಹಾಸ್ಯಕಲಾವಿದ ಪೆರುವಡಿ ನಾರಾಯಣ ಭಟ್ಟ ರಿಗೆ ಭ್ರಾಮರೀ ಯಕ್ಷಮಣಿ  ಪ್ರಶಸ್ತಿ 2022 ರ ಗೌರವ.

ನೇಪಥ್ಯ ಕಲಾವಿದರಾದ ಗೋಪಾಲ ಪೂಜಾರಿ ಹಾಗೂ ಬೊಕ್ಕಸ ಜಗನ್ನಾಥ ರಾವ್ ಅವರಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ - 2022

ರಾತ್ರಿ 9 ರಿಂದ
ದಿವಂಗತ ಬಲಿಪ ಪ್ರಸಾದ ಭಟ್ ಸಂಸ್ಮರಣಾರ್ಥ
ಯಕ್ಷಗಾನ ಪೂರ್ವರಂಗ
ಭಾಗವತರು - ಬಲಿಪ ಶಿವಶಂಕರ ಭಟ್ 
ಮದ್ದಳೆ- ಕೃಷ್ಣ ಪ್ರಕಾಶ ಉಳಿತ್ತಾಯ

9.45 ರಿಂದ 
ಚೆಂಡೆ ಜುಗಲ್‌ಬಂದಿ ಪೀಠಿಕೆ
ದೇಲಂತಮಜಲು ಸುಬ್ರಹ್ಮಣ್ಯ ಭಟ್ x ಅಡೂರು ಲಕ್ಷ್ಮೀ ನಾರಾಯಣ ರಾವ್

ರಾತ್ರಿ 10 ರಿಂದ
ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ

ಯಕ್ಷಗಾನ: ದಮಯಂತೀ ಪುನಃ ಸ್ವಯಂವರ

ಹಿಮ್ಮೇಳ:
ಭಾಗವತರು- ಎಂ .ದಿನೇಶ ಅಮ್ಮಣ್ಣಾಯ
ಮದ್ದಳೆ - ಕೃಷ್ಣ ಪ್ರಕಾಶ ಉಳಿತ್ತಾಯ
ಚೆಂಡೆ- ಮುರಾರಿ ಕಡಂಬಳಿತ್ತಾಯ
ಚಕ್ರತಾಳ- ರಾಜೇಂದ್ರ ಕೃಷ್ಣ, ಪೂರ್ಣೇಶ್ ಆಚಾರ್ಯ

ಮುಮ್ಮೇಳ
ಋತುಪರ್ಣ- ಸುಣ್ಣಂಬಳ ವಿಶ್ವೇಶ್ವರ ಭಟ್
ಬಾಹುಕ- ಮವ್ವಾರ್ ಬಾಲಕೃಷ್ಣ ಮಣಿಯಾಣಿ
ಭೀಮಕ- ಕಿಶೋರ್ ಭಟ್ ಕೊಮ್ಮೆ
ದಮಯಂತಿ- ಸಂತೋಷ್ ಕುಮಾರ್ ಹಿಲಿಯಾಣ
ಮಕ್ಕಳು- ವಿಶ್ವಾಸ್, ಭುವನ್
ಚಿಕ್ಕಮ್ಮ- ಅಂಬಾಪ್ರಸಾದ್ ಪಾತಾಳ
ಸುದೇವ - ವಾದಿರಾಜ ಕಲ್ಲೂರಾಯ ಕಿನ್ನಿಕಂಬ್ಳ
ಶನಿ- ಮನೀಷ್ ಪಾಟಾಳಿ
ನಳ- ಹರಿರಾಜ್ ಕಿನ್ನಿಗೋಳಿ

ಯಕ್ಷಗಾನ: ಮಾಯಾ ತಿಲೋತ್ತಮೆ

ಭಾಗವತರು: ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ
ಚೆಂಡೆ- ಮದ್ದಳೆ:
ಗುರುಪ್ರಸಾದ್ ಬೊಳಿಂಜಡ್ಕ
ಚೈತನ್ಯಕೃಷ್ಣ ಪದ್ಯಾಣ
ಕೌಶಿಕ್ ರಾವ್ ಪುತ್ತಿಗೆ

ಮುಮ್ಮೇಳ:
ಸುಂದ- ರಾಧಾಕೃಷ್ಣ ನಾವಡ ಮಧೂರು
ಉಪಸುಂದ-ಜಗದಾಭಿರಾಮ ಪಡುಬಿದ್ರೆ 
ಬ್ರಹ್ಮ- ಡಿ. ಮಾಧವ ಬಂಗೇರ
ದೇವೇಂದ್ರ - ರಾಕೇಶ್ ರೈ ಅಡ್ಕ
ಅಗ್ನಿ-ದಿವಾಕರ ಕಾಣಿಯೂರು
ವಾಯು- ಭುವನ್ ರಾಜ್
ಮಹಾಶೇಷ- ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ದೂತ- ಸಂದೇಶ್ ಮಂದಾರ
ತಿಲೋತ್ತಮೆ- ಅಕ್ಷಯ್ ಮಾರ್ನಾಡ್

ಯಕ್ಷಗಾನ: ವೀರವರ್ಮ ಕಾಳಗ

ಹಿಮ್ಮೇಳ:
ಭಾಗವತರು: ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ - ಮದ್ದಳೆ
ದೇಲಂತಮಜಲು ಸುಬ್ರಹ್ಮಣ್ಯ ಭಟ್,
ಅಡೂರು ಲಕ್ಷ್ಮೀ ನಾರಾಯಣ ರಾವ್
ಗಣೇಶ್ ಭಟ್ ನೆಕ್ಕರೆಮೂಲೆ

ಮುಮ್ಮೇಳ
ವೀರವರ್ಮ- ಸುಬ್ರಾಯ ಹೊಳ್ಳ, ಕಾಸರಗೋಡು
ದೂತ - ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ಸುಲಭ- ಸುಲಭಾಖ್ಯರು - ಲೋಕೇಶ್ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ಅಕ್ಷಯ್ ಭಟ್, ದಿವಾಕರ ಕಾಣಿಯೂರು
ಬಬ್ರುವಾಹನ- ರಕ್ಷಿತ್ ಶೆಟ್ಟಿ ಪಡ್ರೆ
ಯಮ- ಸದಾಶಿವ ಶೆಟ್ಟಿಗಾರ್
ಅರ್ಜುನ- ಅಮ್ಮುಂಜೆ ಮೋಹನ್ ಕುಮಾರ್
ಕೃಷ್ಣ- ದಿನೇಶ್ ಶೆಟ್ಟಿ ಕಾವಳಕಟ್ಟೆ
ಹನೂಮಂತ- ಶಶಿಧರ ಕುಲಾಲ್ ಕನ್ಯಾನ

ಸಂಯೋಜನೆ- ಡಿ. ಮಾಧವ ಬಂಗೇರ
ಉಚಿತ ಪ್ರವೇಶ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು