ಯಕ್ಷಗಾನ ವಿಶ್ವಕೋಶ ರಚನೆ ಪ್ರಗತಿಯಲ್ಲಿದೆ: ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ

ಕಂಚಿಕೈ ಗ್ರಾಮದಲ್ಲಿ ಆಯೋಜಿಸಿದ್ದ ಕಲಾವಿದ ವೆಂಕಟರಮಣ ರಾಮಚಂದ್ರ ಹೆಗಡೆ ಸಂಸ್ಮರಣೆ ಮತ್ತು ತಾಳಮದ್ದಳೆ ಕಾರ್ಯಕ್ರಮವನ್ನು ಪತ್ರಕರ್ತ ಅಶೋಕ ಹಾಸ್ಯಗಾರ ಉದ್ಘಾಟಿಸಿದರು.

ಶಿರಸಿ: ಯಕ್ಷಗಾನ ವಿಶ್ವಕೋಶ ರಚನೆ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಎರಡು ವರ್ಷಗಳ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿರುವುದಾಗಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ತಿಳಿಸಿದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಕಂಚಿಕೈ ಗ್ರಾಮದಲ್ಲಿ ವಸುಂಧರಾ ಸಮೂಹ ಸೇವಾ ಸಂಸ್ಥೆ ಮತ್ತು ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಕಲಾವಿದ ವೆಂಕಟರಮಣ ರಾಮಚಂದ್ರ ಹೆಗಡೆ ಸಂಸ್ಮರಣೆ ಮತ್ತು ತಾಳಮದ್ದಳೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವಕೋಶ ರಚನೆ ಅಕಾಡೆಮಿಯ ಮಹತ್ವದ ಆಕಾಂಕ್ಷೆಯಾಗಿದೆ. ಕೆಲವು ವರ್ಷಗಳಿಂದ ಯಕ್ಷಗಾನ ಕಲೆಗೆ ಸರಕಾರವು ಅಗತ್ಯವಾದ ನೆರವು ನೀಡುತ್ತಿದೆ. ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ನಡೆಸುವುದಕ್ಕೆ ಬಜೆಟ್‍ನಲ್ಲಿ ₹ 2 ಕೋಟಿ ಅನುದಾನ ಪ್ರಕಟಿಸಿದ್ದು ಸಂತೋಷದ ವಿಚಾರ ಎಂದು ಡಾ.ಹೆಗಡೆ ಹೇಳಿದರು.

ಯಕ್ಷಗಾನ ಕಲೆಯೇ ಸಮಗ್ರವಾಗಿದೆ. ಹೆಚ್ಚು ಕಲಾ ಚಟುವಟಿಕೆಗಳನ್ನು ನಡೆಸುವ ಮೂಲಕವೇ ಯಕ್ಷಗಾನದ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಪತ್ರಕರ್ತ ಅಶೋಕ ಹಾಸ್ಯಗಾರ ಉದ್ಘಾಟಿಸಿದರು. ಕಲಾವಿದ ಜಿ.ಎಂ.ಭಟ್ಟರು ವೆಂಕಟರಮಣ ರಾಮಚಂದ್ರ ಹೆಗಡೆ ಕುರಿತು ಮಾತನಾಡಿದರು.

ಗೋಪಾಲಕೃಷ್ಣ ಭಾಗವತ, ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ, ವಸುಂಧರಾ ಸಮೂಹ ಸೇವಾ ಸಂಸ್ಥೆ ಅಧ್ಯಕ್ಷ ಆರ್.ಟಿ.ಭಟ್ಟ ಕಬಗಾಲ್ ಇದ್ದರು. ಹಿರಿಯ ಕಲಾವಿದರ ಕೂಡುವಿಕೆಯಲ್ಲಿ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು