ಬೆಂಗಳೂರಿನಲ್ಲಿ ಜೂ.4ರಂದು ಪಂಜಾಜೆ ಅವರಿಗೆ ಶ್ರದ್ಧಾಂಜಲಿ, ಸಂಸ್ಮರಣೆ, ಯಕ್ಷಗಾನ

ತುಮಕೂರಿನ ಯಕ್ಷದೀವಿಗೆ ಮಕ್ಕಳಿಗೆ ಪಂಜಾಜೆ ಅವರಿಂದ ಬಣ್ಣಗಾರಿಕೆ. ಚಿತ್ರ: ಸಿಬಂತಿ ಪದ್ಮನಾಭ

ಬೆಂಗಳೂರು: ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ರಾಜ್ಯಾದ್ಯಂತ ಯಕ್ಷಗಾನದ ಪ್ರಸಾರಕ್ಕೆ ದುಡಿದ ಮತ್ತು ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆಗೂ ಶ್ರಮಿಸಿದ್ದ ಕಲಾವಿದ, ಸಂಘಟಕ ಸೂರ್ಯನಾರಾಯಣ ಪಂಜಾಜೆ ಅವರಿಗೆ ಶ್ರದ್ಧಾಂಜಲಿ, ಸಂಸ್ಮರಣೆ ಕಾರ್ಯಕ್ರಮವು ಜೂನ್ 4ರಂದು ಭಾನುವಾರ ಸಂಜೆ ಬೆಂಗಳೂರಿನ ಕೋರಮಂಗಲದಲ್ಲಿರುವ ಶ್ರೀ ಎಡನೀರು ಮಠದಲ್ಲಿ ಜರುಗಲಿದೆ.

ವಿಶೇಷವಾಗಿ ಬೆಂಗಳೂರಿನಲ್ಲಿ ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಎಸ್.ಎನ್.ಪಂಜಾಜೆ ಅವರು ಮೇ 22ರಂದು ನಿಧನರಾಗಿದ್ದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಯಕ್ಷಗಾನ.ಇನ್ ತಾಣದ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಪಂಜಾಜೆ ಅವರ ವೈಕುಂಠ ಸಮಾರಾಧನೆ ಪ್ರಯುಕ್ತ ಕೋರಮಂಗಲದ ಎಡನೀರು ಮಠದಲ್ಲಿ ಜೂ.04, ಭಾನುವಾರ ಸಂಜೆ 3.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಕಾಸರಗೋಡು ಎಡನೀರು ಮಠದ ಪರಮಪೂಜ್ಯ  ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.

ಅನಂತ ಮಂಜುನಾಥ ಆಂಬೇಕರ್ - ಉಪಾಸಕರು, ಶ್ರೀ ವಿಜಯದುರ್ಗಾ ಶ್ರೀ ರಾಜರಾಜೇಶ್ವರಿ ಮಹಾಸನ್ನಿಧಾನ, ವಿದ್ಯಾರಣ್ಯಪುರ - ಬೆಂಗಳೂರು ಹಾಗೂ ಅರವಿಂದ ಭಟ್ - ಉಪಾಸಕರು  ಶ್ರೀ ಮೂಕಾಂಬಿಕಾ ಸನ್ನಿಧಿ ತಾತಗುಣಿ , ಬೆಂಗಳೂರು - ಇವರ ಗೌರವ ಉಪಸ್ಥಿತಿಯಲ್ಲಿ,  ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಟಿ.ಶ್ಯಾಮ್  ಭಟ್ , IAS ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಯಕ್ಷಗಾನ ಲೇಖಕ, ವಿಮರ್ಶಕ ಡಾ.ಆನಂದರಾಮ ಉಪಾಧ್ಯ ಅವರು ಸಂಸ್ಮರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸೌಂದರ್ಯ ಮಂಜಪ್ಪ, ಪತ್ರಕರ್ತ ಕೆ.ಶ್ರೀಕರ ಭಟ್, ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್ ಬೆಳ್ಳಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಎಸ್.ಎನ್.ಪಂಜಾಜೆ ಅವರ ಸಹವರ್ತಿಗಳಾದ ಹಿರಿಯ ಹವ್ಯಾಸಿ ಕಲಾವಿದ ಶಿವರಾಮ ಭಟ್ ಪಾವಂಜೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯ ಶ್ರೀನಿವಾಸ  ಸಾಸ್ತಾನ     
ಬೆಂಗಳೂರಿನ ಯಕ್ಷಕಲಾ ರಂಜಿನಿ ಸ್ಥಾಪಕರಾದ ಈಶ್ವರ ಭಟ್ ಮಿತ್ತೂರು, ಯಕ್ಷಗಾನ ಕಲಾವಿದ, ಗುರು ಬೇಗಾರು ಶಿವಕುಮಾರ್, ಪತ್ರಕರ್ತ ಶಿವಸುಬ್ರಮಣ್ಯ ಕಲ್ಮಡ್ಕ, ಪಂಜಾಜೆಯವರ ನಿಕಟವರ್ತಿ ರಘುರಾಮ್ ಭಟ್ ಮುಳಿಯ, ಶ್ರೀಮತಿ ಮನೋರಮಾ  ಎಸ್.ಎನ್.ಪಂಜಾಜೆ ಮತ್ತು ಕೈಲಾಸ್ ಭಟ್ ಪಂಜಾಜೆ ಭಾಗವಹಿಸುವರು.

ಕಾರ್ಯಕ್ರಮದ ಬಳಿಕ ಬೆಂಗಳೂರಿನ ಹವ್ಯಾಸಿ ಕಲಾವಿದರು ಹಾಗೂ ಪಂಜಾಜೆ ಅಭಿಮಾನಿಗಳಿಂದ, ಗಣೇಶ್ ಭಟ್ ಬಾಯಾರು ಸಂಯೋಜನೆಯಲ್ಲಿ ಗೋಪಾಲಕೃಷ್ಣ ಭಟ್ ನಿಡುವಜೆ, ಅರ್ಜುನ್ ಕೊರ್ಡೇಲ್, ಶ್ರೀಕೃಷ್ಣ ಭಟ್ ಪೂಕಳ, ಗೋಪಿ ಭಟ್, ಮುಜೂರು ನಾರಾಯಣ ಭಟ್, ಕೃಷ್ಣ ಭಟ್ ಕುದ್ರೆಕೋಡ್ಲು, ಶರವೂರು ಸಹೋದರರು, ವೀಣಾ ರಾಮಚಂದ್ರ ರಾವ್ ಸಹಕಾರದಲ್ಲಿ ಸಂಜೆ 6ರಿಂದ 8.30ರವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು