![]() |
(ಪ್ರಾತಿನಿಧಿಕ ಚಿತ್ರ - ಸಂಸಪ್ತಕರ ವಧೆ) |
ಯಾರೇ ಆದರೂ ಅವನಲ್ಲಿ ಏಕಕಾಲದಲ್ಲಿ ಸಾವಿರ ವರ್ಷ ಯುದ್ಧಮಾಡುತ್ತಾ ಇರಬೇಕು, ಅದೇ ಕಾಲದಲ್ಲಿ ತಪಸ್ಸನ್ನೂ ಮಾಡುತ್ತಿರಬೇಕು. ಕೊನೆಗೆ ಆ ವ್ಯಕ್ತಿ ಸಾಯಬೇಕು. ಆಗ ಅವನ ಒಂದು ಕವಚ ಕಳಚಿ ಬೀಳುತ್ತದೆ. ಹೀಗೆ ಸಾವಿರ ಕವಚಗಳು ಕಳಚಿ ಬಿದ್ದಮೇಲಷ್ಟೇ ಅವನಿಗೆ ಮರಣ ಎಂಬ ವರವದು. ಆದುದರಿಂದ ಅವನಿಗೆ ಸಹಸ್ರ ಕವಚನೆಂದೂ ಹೆಸರಿತ್ತು.
ಸಹಸ್ರಕವಚನು ಸ್ವರ್ಗವನ್ನು ಸ್ವಾಧೀನಪಡಿಸಿ ಲೋಕಕಂಟಕನಾಗಿ ಮೆರೆಯುತ್ತಿದ್ದನು. ಆಗ ದೇವತೆಗಳ ದೂರನ್ನು ಆಲಿಸಿದ ಶ್ರೀಹರಿ, ತನ್ನ ಅಂಶದಿಂದಲೇ ನರ-ನಾರಾಯಣರನ್ನು ಸೃಷ್ಟಿಸಿ ಅವನನ್ನು ಕೊಲ್ಲುತ್ತೇನೆಂದು ದೇವತೆಗಳಿಗೆ ಅಭಯ ಕೊಡುತ್ತಾನೆ.
ಮುಂದೆ ನರ ನಾರಾಯಣರು ಹುಟ್ಟಿ ಬದರಿಕಾಶ್ರಮದಲ್ಲಿ ತಪಸ್ಸನ್ನು ಮಾಡುತ್ತಿರುವಾಗ, ಅವರ ತಪಸ್ಸನ್ನು ಕೆಡಿಸಲು ದೇವೇಂದ್ರನು ಒಂದಷ್ಟು ಅಪ್ಸರೆಯರನ್ನು ಕಳುಹಿಸುತ್ತಾನೆ. ಅಪ್ಸರೆಯರ ಉಪಟಳದಿಂದ ಬೇಸತ್ತ ನರ ನಾರಾಯಣರು ತಮ್ಮ ತೊಡೆಯನ್ನು ಕೆರೆದಾಗ ಆಪ್ರತಿಮ ರೂಪವತಿಯಾದ ಊರ್ವಶಿಯ ಸೃಷ್ಟಿ ಆಗುತ್ತದೆ (ಊರು=ತೊಡೆ) ಊರ್ವಶಿಯ ರೂಪವನ್ನು ನೋಡಿದ ಅಪ್ಸರೆಯರು ಮತ್ಸರದಿಂದ ಅಲ್ಲಿಂದ ಓಡಿಹೋಗುತ್ತಾರೆ. ಹೀಗೆ ಊರ್ವಶಿ ಬದರಿಕಾಶ್ರಮದಲ್ಲೇ ಉಳಿಯುತ್ತಾಳೆ.
ಅದೇ ಸಮಯದಲ್ಲಿ ಶ್ರೀಹರಿಯ ಪ್ರೇರೇಪಣೆಯಂತೆ ನಾರದರು ಸಹಸ್ರಕವಚನ ಆಸ್ಥಾನಕ್ಕೆ ಬಂದು "ಲೋಕೊತ್ತರ ಸುಂದರಿಯಾದ ಊರ್ವಶಿ ಎಂಬ ಹೆಣ್ಣು ಬದರಿಕಾಶ್ರಮದಲ್ಲಿ ಬೆಳೆಯುತ್ತಿದ್ದಾಳೆ. ಅವಳು ನಿನಗೆ ಯೋಗ್ಯಳಾದ ಕನ್ಯೆ. ಅವಳನ್ನು ವರಿಸು" ಅಂತ ಹೇಳಿ ಹೋಗುತ್ತಾರೆ.
ಸಹಸ್ರ ಕವಚನು ಬದರಿಕಾಶ್ರಮಕ್ಕೆ ಬಂದು ಊರ್ವಶಿಯಲ್ಲಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಆಗ ಊರ್ವಶಿ ತನ್ನ ತಂದೆಯವರಲ್ಲಿ ಅಪ್ಪಣೆ ಪಡೆದರೆ ತಾನು ವಿವಾಹವಾಗಲು ಸಿದ್ದ ಅನ್ನುತ್ತಾಳೆ. ಅಪ್ಪಣೆ ಪಡೆಯಲು ಸಹಸ್ರ ಕವಚನು ನರನಾರಾಯಣರ ಬಳಿಗೆ ತೆರಳಿ ಅವರನ್ನು ಮಾತನಾಡಿಸಿದರೂ, ತಪಸ್ಸಿನಲ್ಲಿ ಮಗ್ನರಾದ ಅವರು ಮಾತನಾಡುವುದಿಲ್ಲ.
ಇದರಿಂದ ಕೋಪಗೊಂಡ ಸಹಸ್ರ ಕವಚನು ಅವರ ಎದೆಗೆ ಒದೆಯುತ್ತಾನೆ. ಆಗ ತಪಸ್ಸಿನಿಂದ ಎದ್ದ ನರನು ಒಂದು ಸಾವಿರ ವರ್ಷ ಸಹಸ್ರಕವಚನಲ್ಲಿ ಯುದ್ಧಮಾಡಿ ಅವನ ಒಂದು ಕವಚವನ್ನು ಸೀಳಿ ಸತ್ತುಬೀಳುತ್ತಾನೆ. ಆಗ ತಪಸ್ಸು ಮಾಡುತ್ತಿದ್ದ ನಾರಾಯಣನು ಎದ್ದು ತಪೋಬಲದಿಂದ ನರನನ್ನು ಬದುಕಿಸಿ ತಪಸ್ಸಿಗೆ ಕುಳ್ಳಿರಿಸಿ ತಾನು ಆ ರಕ್ಕಸನೊಡನೆ ಒಂದು ಸಹಸ್ರ ವರ್ಷ ಯುದ್ಧಮಾಡಿ ಅವನ ಇನ್ನೊಂದು ಕವಚವನ್ನು ಹರಿಯುತ್ತಾನೆ.
ಹೀಗೆ ಆವರ್ತನ ಪ್ರಕಾರ ನರನಾರಾಯಣರು ಅವನ ಒಂಬೈನೂರಾ ತೊಂಬತ್ತೊಂಬತ್ತು ಕವಚಗಳನ್ನು ಬೇರ್ಪಡಿಸಿದಾಗ ಸಹಸ್ರಕವಚನಿಗೆ ಜ್ಙಾನೋದಯವಾಗುತ್ತದೆ. ಕ್ಷಣಭಂಗುರವಾದ ಪ್ರಪಂಚ, ಸ್ವಪ್ನ ಸದೃಶವಾದ ಬದುಕು ಅಶಾಶ್ವತವಾದ ದೇಹಕ್ಕಾಗಿ ಹೋರಾಟ ವ್ಯರ್ಥವೆಂದು ತಿಳಿದು ನರನಾರಾಯಣರಿಗೆ ಶರಣಾಗಿ ತನಗೆ ಮೋಕ್ಷ ಕೊಡಬೇಕೆಂದು ಬೇಡಿಕೊಳ್ಳುತ್ತಾನೆ.
ಆಗ ನರನಾರಾಯಣರು ಕರುಣೆ ತೋರಿ ಉಳಿದ ಒಂದು ಕವಚವನ್ನು, ಮುಂದಿನ ಜನ್ಮದಲ್ಲಿ ತಾವೇ ಕೃಷ್ಣಾರ್ಜುನರಾಗಿ ಹುಟ್ಟಿ, ಕರ್ಣನಾಗಿ ಹುಟ್ಟಲಿರುವ ಸಹಸ್ರ ಕವಚನ ಕೊನೆಯ ಕವಚವನ್ನು ಹರಿದು ಅವನಿಗೆ ಮೋಕ್ಷ ಕರುಣಿಸುತ್ತೇನೆ ಅಂತ ಅಭಯ ಕೊಡುತ್ತಾರೆ.
ಮಾನವರಾದ ನಾವೂ, ಬಹುಷಃ ಕಾಮ, ಕ್ರೋಧವೇ ಮೊದಲಾದ ಕವಚಗಳಿಂದ ಆವರಿಸಲ್ಪಟ್ಟಿರುವುರಿಂದ ಅದರಾಚೆಗೆ ಇರುವ ಸತ್ಯವನ್ನು ತಿಳಿಯಲು ಸಮರ್ಥರಾಗಿಲ್ಲ. ಆ ಕವಚಗಳನ್ನು ಹರಿದು ಬಿಸಾಡಿದರೆ ದೇವರ ಸಾಕ್ಷಾತ್ಕಾರ ಖಂಡಿತ.
ಸಂಗ್ರಹ ಲೇಖನ: ದಾಮೋದರ ಶೆಟ್ಟಿ, ಇರುವೈಲ್, ಮುಂಬಯಿ
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ