ಯಾರಿವರು: ಯಯಾತಿ, ಯದು, ತುರ್ವಸು ಮತ್ತು ಪುರು

ಶುಕ್ರನಂದನೆ ಪ್ರಸಂಗದ ಒಂದು ದೃಶ್ಯ
ಪುರಾಣದ ಅರಿವಿನ ಸರಣಿ by ದಾಮೋದರ ಶೆಟ್ಟಿ, ಇರುವೈಲ್
ಚಂದ್ರವಂಶದ ನಹುಷರಾಜನ ಮಗ ಯಯಾತಿ. ಯಯಾತಿಗೆ ಶುಕ್ರಾಚಾರ್ಯ ಪುತ್ರಿ ದೇವಯಾನಿ ಪತ್ನಿ. ರಾಕ್ಷಸರಾಜ ವೃಷಪರ್ವನ ಮಗಳು ಶರ್ಮಿಷ್ಠೆ ಉಪ ಪತ್ನಿ. ಯಯಾತಿ-ದೇವಯಾನಿಯರ ಪುತ್ರರೇ ಯದು ಮತ್ತು ತುರ್ವಸು.

ಯಯಾತಿಯು ಶುಕ್ರಾಚಾರ್ಯರಿಂದ "ವೃದ್ಧನಾಗು" ಎಂದು ಶಾಪ ಪಡೆದು, ಬೇರೆಯವರು ಒಪ್ಪಿದರೆ ನಿನ್ನ ಮುಪ್ಪನ್ನು ಅವರಿಗೆ ಕೊಟ್ಟು ಅವರ ತಾರುಣ್ಯವನ್ನು ನೀನು ಪಡೆಯಬಹುದೆಂದು ವಿಮೋಚನಾ ಮಾರ್ಗವನ್ನು ಸೂಚಿಸಿದ್ದರು.

ಅಂತೆಯೇ ಯದು ತುರ್ವಸುಗಳನ್ನು ಮುಪ್ಪನ್ನು ಸ್ವೀಕರಿಸುವಂತೆ ಕೇಳಿದಾಗ ಅವರು ಸಮ್ಮತಿಸಲಿಲ್ಲ. ಕೋಪಗೊಂಡ ಯಯಾತಿಯು ಯದು ಮತ್ತು ತುರ್ವಸುವಿಗೆ "ನಿಮಗೂ ನಿಮ್ಮ ವಂಶಜರಿಗೂ ರಾಜ್ಯಾಧಿಕಾರವಿಲ್ಲದೆ ಹೋಗಲಿ"ಎಂದು ಶಪಿಸಿದನು.

ಶರ್ಮಿಷ್ಠೆಯ ಪುತ್ರ ಪುರು ತಂದೆಯ ವೃದ್ಧಾಪ್ಯ ಪಡೆದು ತನ್ನ ತಾರುಣ್ಯವನ್ನು ಯಯಾತಿಗೆ ಕೊಟ್ಟನು. ಕೆಲವು ಕಾಲದ ಬಳಿಕ ಯಯಾತಿಯು ಪುರುವಿಗೆ ಅವನಿಂದ ಪಡೆದ ತಾರುಣ್ಯವನ್ಮು ಹಿಂದಿರುಗಿಸಿ ರಾಜ್ಯಾಭಿಷೇಕ ಮಾಡಿದನು.

ಸಂ: ದಾಮೋದರ ಶೆಟ್ಟಿ, ಇರುವೈಲ್

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು