ಅ.23ರಂದು ಪದ್ಯಾಣ ಸ್ಮರಣೆ 'ಗಾನ ಗಣಪತಿ', ಪ್ರಶಸ್ತಿ ಪ್ರದಾನ, ಯಕ್ಷಗಾನ ಸಮಾರಾಧನೆ


ಬೆಂಗಳೂರು: ಕಳೆದ ವರ್ಷ ಅಚಾನಕ್ ಆಗಿ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದ ಗಾನ ಗಂಧರ್ವ, ಭಾಗವತ ಪದ್ಯಾಣ ಗಣಪತಿ ಭಟ್ ಅವರ ಪ್ರಥಮ ವರ್ಷದ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಅದ್ಧೂರಿಯ ಯಕ್ಷಗಾನಾರ್ಚನೆಯೊಂದಿಗೆ ಅಕ್ಟೋಬರ್ 23ರ ಭಾನುವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.

ವಿಶಿಷ್ಟ ಮಾತಿನ ಮಂಟಪ
ಪೂರ್ವಾಹ್ನ 9.30ರಿಂದ 'ಮಾತು ಮಂಥನ - ಚಂಚಲ ಜಯಲಲನೆ' ಎಂಬ ವಿಶಿಷ್ಟ ರೂಪದ ತಾಳಮದ್ದಳೆ ಕಾರ್ಯಕ್ರಮವು ಮೂರು ಹಂತದಲ್ಲಿ ನಡೆಯಲಿದೆ. 'ಇತ್ತ ಮಾಹಿಷ್ಮತಿಯ ನಗರದಿ...' ಎಂಬಲ್ಲಿಂದ ಶುರುವಾಗುವ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಪ್ರಫುಲ್ಲಚಂದ್ರ ನೆಲ್ಯಾಡಿ, ಪದ್ಯಾಣ ಜಯರಾಮ ಭಟ್ ಹಾಗೂ ಅಂಬಾತನಯ ಅರ್ನಾಡಿ ಅವರಿದ್ದರೆ, ರಾವಣನಾಗಿ ಉಜಿರೆ ಅಶೋಕ ಭಟ್, ಕಾರ್ತವೀರ್ಯನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಭೀಷಣನಾಗಿ ರಾಮ ಜೋಯಿಸ್ ಬೆಳ್ಳಾರೆ ಅವರು ಪಾತ್ರ ಪ್ರಸ್ತುತಿ ನಡೆಸಲಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಬೆಳಿಗ್ಗೆ 10.45ರಿಂದ 'ಬಂದನೇ ಸಿರಿಯರಸ' ಎಂಬಲ್ಲಿಂದ ಶುರುವಾಗುವ ಕಥಾನಕದಲ್ಲಿ ಹಿಮ್ಮೇಳದಲ್ಲಿ ಕಿಗ್ಗ ಹಿರಿಯಣ್ಣ ಆಚಾರ್, ಗಣೇಶ್ ಭಟ್ ನೆಕ್ಕರೆಮೂಲೆ ಹಾಗೂ ಪಿ.ಜಿ.ಜಗನ್ನಿವಾಸ ರಾವ್ ಅವರು ಭಾಗವಹಿಸಲಿದ್ದಾರೆ. ಕಾರ್ತವೀರ್ಯನಾಗಿ ರಾಧಾಕೃಷ್ಣ ಕಲ್ಚಾರ್, ಪರಶುರಾಮನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅವರು ಪಾತ್ರ ಪ್ರಸ್ತುತಿ ನಡೆಯಲಿದ್ದಾರೆ.

ಪೂರ್ವಾಹ್ನ 11.45ರಿಂದ 'ಪರಮಋಷಿ ಮಂಡಲದ ಮಧ್ಯದಿ...' ಭಾಗದಲ್ಲಿ ಹಿಮ್ಮೇಳದಲ್ಲಿ ರಮೇಶ್ ಭಟ್ ಪುತ್ತೂರು, ಗಣೇಶ ಭಟ್ ನೆಕ್ಕರೆಮೂಲೆ, ದೇವಾನಂದ ಭಟ್ ಬೆಳುವಾಯಿ ಅವರು ಹಿಮ್ಮೇಳದಲ್ಲಿಯೂ, ಪರಶುರಾಮನಾಗಿ ಹಿರಣ್ಯ ವೆಂಕಟೇಶ್ವರ ಭಟ್ ಮತ್ತು ಭೀಷ್ಮನಾಗಿ ವಾಸುದೇವ ರಂಗ ಭಟ್ಟ ಮಧೂರು ಅವರು ಮಾತು ಮಂಥನದಲ್ಲಿ ರಂಜಿಸಲಿದ್ದಾರೆ.

ಗಾನ ವೈಭವ
ಅಪರಾಹ್ನ 2ರಿಂದ ಒಂದುವರೆ ಗಂಟೆ ನಿಗದಿಯಾಗಿರುವ 'ಗಾನ ವೈಭವ' ಕಾರ್ಯಕ್ರಮದಲ್ಲಿ ಭಾಗವತರಾಗಿ ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಭಾಗವಹಿಸುವರು. ಲೇಖಕ, ಅರ್ಥಧಾರಿ ಗಣರಾಜ ಕುಂಬ್ಳೆ ನಿರೂಪಣೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚೆಂಡೆ - ಶ್ರೀಧರ ವಿಟ್ಲ, ಮದ್ದಳೆ - ಚೈತನ್ಯಕೃಷ್ಣ ಪದ್ಯಾಣ ಹಾಗೂ ಕೃಷ್ಣಪ್ರಕಾಶ ಉಳಿತ್ತಾಯ, ಚಕ್ರತಾಳದಲ್ಲಿ ರಮೇಶ್ ಭಟ್ ಕಜೆ ಸಹಕರಿಸಲಿದ್ದಾರೆ.

ಭಾರತ ರತ್ನ
ಅಪರಾಹ್ನ 3.30ರಿಂದ 'ಭಾರತ ರತ್ನ' ಯಕ್ಷಗಾನದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಪದ್ಮನಾಭ ಉಪಾಧ್ಯಾಯ, ಶ್ರೀಧರ ವಿಟ್ಲ ಹಿಮ್ಮೇಳದಲ್ಲಿಯೂ, ಮುಮ್ಮೇಳದಲ್ಲಿ ಅಭಿಮನ್ಯುವಾಗಿ ದಿವಾಕರ ರೈ ಸಂಪಾಜೆ, ಸುಭದ್ರೆಯಾಗಿ ಸಂತೋಷ ಕುಮಾರ್ ಹಿಲಿಯಾಣ, ಧರ್ಮರಾಯನಾಗಿ ಪ್ರಸಾದ್ ಸವಣೂರು ರಂಜಿಸುವರು.

ಪದ್ಯಾಣ ಪ್ರಶಸ್ತಿ ಪ್ರದಾನ, ಸಂಸ್ಮರಣೆ
ಸಂಜೆ 4.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಸಂಸ್ಥಾನ ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರ ಉಪಸ್ಥಿತಿಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಅವರು ಅತಿಥಿಗಳಾಗಿ ಭಾಗವಹಿಸುವರು. ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ಅವರು ಪದ್ಯಾಣ ಸಂಸ್ಮರಣೆ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ದಿನೇಶ ಅಮ್ಮಣ್ಣಾಯ ಹಾಗೂ ಪುತ್ತಿಗೆ ರಘುರಾಮ ಹೊಳ್ಳರಿಗೆ ಪದ್ಯಾಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸುಳ್ಯ ಪ್ರತಿಭಾ ವಿದ್ಯಾಲಯ ಪ್ರಾಂಶುಪಾಲ ಸುಳ್ಯ ವೆಂಕಟರಮಣ ಭಟ್ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಪದ್ಯಾಣ ಶಿಷ್ಯ ಸಂಮಾನವನ್ನು ರವಿಚಂದ್ರ ಕನ್ನಡಿಕಟ್ಟೆ ಅವರಿಗೂ, ಅಭಿಮಾನಿ ಶಿಷ್ಯ ಸಂಮಾನವನ್ನು ರಾಮ ಜೋಯಿಸ್ ಬೆಳ್ಳಾರೆ ಇವರಿಗೂ ನೀಡಲಾಗುತ್ತದೆ. ನಾ.ಕಾರಂತ ಪೆರಾಜೆ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಯಕ್ಷಗಾನ
ಕಾರ್ಯಕ್ರಮದ ಬಳಿಕ ಸಂಜೆ 6.30ರಿಂದ ಕಂದರ್ಪ ವಿವಾಹ - ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ ಭಟ್, ಚಿನ್ಮಯ ಭಟ್ ಕಲ್ಲಡ್ಕ, ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪದ್ಯಾಣ ಜಯರಾಮ ಭಟ್, ಲವಕುಮಾರ್ ಐಲ, ಚಕ್ರತಾಳದಲ್ಲಿ ವಸಂತ ವಾಮದಪದವು ಭಾಗವಹಿಸುವರು.

ಮುಮ್ಮೇಳ ಹೀಗಿದೆ: ಶ್ರೀಕೃಷ್ಣ - ಪೆರ್ಲ ಜಗನ್ನಾಥ ಶೆಟ್ಟಿ, ದ್ರೌಪದಿ - ಅಂಬಾಪ್ರಸಾದ ಪಾತಾಳ, ಬಾಗಿಲುಭಟ - ಬಂಟ್ವಾಳ ಜಯರಾಮ ಆಚಾರ್ಯ, ಕಮಲಭೂಪ - ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ರತಿ - ಪೃಥ್ವೀಶ ಕಾರ್ಕಳ, ಬಲರಾಮ - ಶಿವರಾಮ ಜೋಗಿ ಬಿ.ಸಿ.ರೋಡು, ಕಂದರ್ಪ - ಅಕ್ಷಯ ಭಟ್ ಮೂಡುಬಿದಿರೆ, ಮೇಘಾಸುರ - ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ, ಮೇಘಸ್ತನಿ - ಶಶಾಂಕ ನೆಲ್ಲಿತ್ತಾಯ, ಭೀಮ- ಶಿಶ ಮಣಿಲ, ಅರ್ಜುನ - ಈಶಾನ್ಯ ಪದ್ಯಾಣ, ಕೌಂಡ್ಲಿಕ - ಜಗದಾಭಿರಾಮ ಪಡುಬಿದ್ರೆ, ದೂತ - ಬಂಟ್ವಾಳ ಜಯರಾಮ ಆಚಾರ್ಯ, ಚಂಡಿಕೆ - ಕೇಶವಕೃಷ್ಣ ಶರ್ಮ.

ಪದ್ಯಾಣ ಪ್ರಶಸ್ತಿ ಸಮಿತಿ, ಹಾಗೂ ಪದ್ಯಾಣ ಕುಟುಂಬಿಕರಾದ ಪದ್ಯಾಣ ಶೀಲಾ ಗಣಪತಿ ಭಟ್, ಸ್ವಸ್ತಿಕ್ ಪದ್ಯಾಣ, ತಿರುಮಲೇಶ್ವರೀ, ವಂಶೀ, ಕಾರ್ತಿಕ್ ಪದ್ಯಾಣ, ವೀಣಾ, ಶ್ಲೋಕ ಇವರು ಯಕ್ಷಗಾನದ ಅಭಿಮಾನಿಗಳಿಗೆ ಸುಖಾಗಮನವನ್ನು ಬಯಸಿದ್ದಾರೆ.

ಇವನ್ನೂ ಓದಿ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು