ಯಕ್ಷಗಾನದ ಯುವ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು ಆತ್ಮಹತ್ಯೆ

ಮಂಗಳೂರು: ಬಪ್ಪನಾಡು ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಹಿಂದೆ ಸೇವೆ ಸಲ್ಲಿಸುತ್ತಿದ್ದ ಯುವ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಉಳ್ಳಾಲ ಸಮೀಪದ ಮೂಳೂರು ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರು, ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೀರ್ತನ್ ಅವರು ಮೂರು ವರ್ಷಗಳ ಹಿಂದೆ ಬಪ್ಪನಾಡು ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಚಿಕ್ಕ ಮೇಳಗಳಲ್ಲಿ ಭಾಗವತರಾಗಿ ಕೆಲಸ ಮಾಡಿದ್ದು, ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದರು. ಆತ್ಮಹತ್ಯೆಗೆ ನಿಖರವಾದ ತಿಳಿದು ಬಂದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು